"ವರ್ಷಕ್ಕೊಮ್ಮೆ, ಸ್ವಾರಿ 5 ವರ್ಷಕ್ಕೊಮ್ಮೆ, ಆನ್‌ಲೈನ್‌ನಲ್ಲೂ ವೋಟ್ ಮಾಡಿದ್ದೀನಿ" ಎಂದ ಜ್ಯೋತಿಕಾ

ತಮಿಳು ನಟಿ ಜ್ಯೋತಿಕಾ ಮತ್ತೆ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. ಸದ್ಯ ಇತ್ತೀಚೆಗೆ ಆಕೆ ನೀಡಿದ ಹೇಳಿಕೆಯೊಂದು ಸಖತ್ ವೈರಲ್ ಆಗಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ತಮಿಳು ನಟಿ ಕಸ್ತೂರಿ ಕೂಡ ವ್ಯಂಗ್ಯವಾಡಿದ್ದಾರೆ.

ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನಟಿ ಕಸ್ತೂರಿ ಮತ ಚಲಾಯಿಸಿದ್ದರು. ಅನೇಕ ಕಾಲಿವುಡ್ ಸೆಲೆಬ್ರಿಟಿಗಳು ತಮ್ಮ ಹಕ್ಕು ಚಲಾಯಿಸಿ ಎಲ್ಲರೂ ಮತ ಹಾಕಬೇಕು ಎಂದು ಆಗ್ರಹಿಸಿದರು. ಸಹೋದರಾದ ಸೂರ್ಯ ಮತ್ತು ಕಾರ್ತಿ ಒಟ್ಟಿಗೆ ಬಂದು ಮತ ಹಾಕಿದರು. ಆದರೆ ಸೂರ್ಯ ಪತ್ನಿ ನಟಿ ಜ್ಯೋತಿಕಾ ಮಾತ್ರ ಕಾಣಿಸಲಿಲ್ಲ.

Tamil actress jyothika Suriya Gets Brutally Trolled for her online voting remark

ಇತ್ತೀಚೆಗೆ ನಟಿ ಸುದ್ದಿಗೋಷ್ಠಿಯಲ್ಲಿ ನಟಿ ಜ್ಯೋತಿಕಾ ಭಾಗಿ ಆಗಿದ್ದರು. ಆಗ ಆಕೆ ಮತ ಚಲಾಯಿಸದ ವಿಷಯವೂ ಚರ್ಚೆಗೆ ಬಂತು. ಮಾಧ್ಯಮದವರು ಈ ಬಗ್ಗೆ ಪ್ರಶ್ನಿಸಿದ್ದಾಗ ನಾನು ವೋಟ್ ಹಾಕಲಿಲ್ವಾ? ನಾನ್ಯಾಕೆ ಹಾಕಲಿಲ್ಲ, ಹಾಕಿದ್ದೇನೆ" ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಆ ವೀಡಿಯೋ ಈ ವೈರಲ್ ಆಗುತ್ತಿದೆ.

"ವರ್ಷ ವರ್ಷ ವೋಟ್ ಹಾಕುತ್ತೇನೆ" ಎಂದು ಹೇಳಲು ಹೊರಟುತ್ತಿದ್ದಂತೆ ವರ್ಷ ವರ್ಷ ಅಲ್ಲ ಮೇಡಂ 5 ವರ್ಷಕ್ಕೊಮ್ಮೆ ಎಂದು ಮಾಧ್ಯಮದವರು ಎಚ್ಚರಿಸಿದ್ದಾರೆ. "ಸ್ವಾರಿ, ಹೌದು. 5 ವರ್ಷಕ್ಕೊಮ್ಮೆ.. ಆದರೆ ಕೆಲವೊಮ್ಮೆ ನಾವು ಊರಿನಲ್ಲಿ ಇಲ್ಲದಿರಬಹುದು.. ನಮಗೆ ನಮ್ಮದೇ ಆದ ಖಾಸಗಿ ಜೀವನವಿದೆ.. ನಾನು ಕೆಲವು ಬಾರಿ ಆನ್‌ಲೈನ್‌ನಲ್ಲಿ ಮತ ಹಾಕಿದ್ದೇನೆ. ಎಲ್ಲವನ್ನು ಬಹಿರಂಗವಾಗಿ ತೋರಿಸಿಕೊಳ್ಳೋಕೆ ಸಾಧ್ಯವಿಲ್ಲ. ಅದನ್ನು ಎಲ್ಲರೂ ಗೌರವಿಸಬೇಕು" ಎಂದು ಜ್ಯೋತಿಕಾ ಹೇಳಿದ್ದಾರೆ.

ಜ್ಯೋತಿಕಾ ಆನ್‌ಲೈನ್‌ನಲ್ಲಿ ಕೂಡ ಮತ ಹಾಕಿದ್ದೇನೆ ಎಂದು ಹೇಳಿರುವುದು ಚರ್ಚೆ ಹುಟ್ಟಾಕ್ಕಿದೆ. ಆನ್‌ಲೈನ್‌ನಲ್ಲಿ ಮತ ಚಲಾಯಿಸಬಹುದೇ? ಅಂತಹ ಅವಕಾಶ ಇದ್ಯಾ? ನಮಗೂ ಆ ಅವಕಾಶ ಬೇಕು, ಅಂತೆಲ್ಲಾ ನೆಟ್ಟಿಗರು ಕೇಳಲು ಆರಂಭಿಸಿದ್ದಾರೆ. ಮತ ಹಾಕಲಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಅದಕ್ಕೆ ಈ ರೀತಿ ಹೇಳುವುದು ಸರಿಯಲ್ಲ. ಆನ್‌ಲೈನ್‌ನಲ್ಲಿ ಮತದಾನದ ಅವಕಾಶ ಇದ್ಯಾ? ಇಲ್ವಾ? ಎನ್ನುವ ಬಗ್ಗೆಯೂ ತಿಳಿದಿಲ್ಲವೇ? ಎಂದು ಟ್ರೋಲ್ ಮಾಡುತ್ತಿದ್ದಾರೆ. ಪ್ರತಿವರ್ಷ ವೋಟ್ ಹಾಕುತ್ತೇನೆ ಎನ್ನುವುದನ್ನು ಮಾಧ್ಯಮದವರು ತಿದ್ದಿದ್ದಾರೆ.

ಇನ್ನು ಜ್ಯೋತಿಕಾ ಉತ್ತರವನ್ನು ಮತ್ತೊಬ್ಬ ನಟಿ ಕಸ್ತೂರಿ ಖಂಡಿಸಿದ್ದಾರೆ. "ನಮ್ಮಂಥವರೆಲ್ಲ ದಿನವಿಡೀ ಬಿಸಿಲಿನಲ್ಲಿ ನಿಂತು ಮತ ಹಾಕಿದ್ದೇವೆ. ಇದಲ್ಲದೇ ನಾನು ಅಮೆರಿಕಕ್ಕೆ ಹೋಗುವ ವಿಮಾನ ಟಿಕೆಟ್ ರದ್ದುಪಡಿಸಿ ಬೇರೆ ದಿನಾಂಕ ಬದಲಿಸಿಕೊಂಡೆ" ಎಂದು ವ್ಯಂಗ್ಯ ಮಾಡಿ ಟ್ರೋಲ್ ಮಾಡಿದ್ದಾರೆ. ಸದ್ಯ ಕಸ್ತೂರಿ ಕಾಮೆಂಟ್ಸ್ ವೈರಲ್ ಆಗುತ್ತಿದೆ.

ಸಾಮಾನ್ಯವಾಗಿ ನಟಿ ಜ್ಯೋತಿಕಾ ವಿವಾದಗಳಿಂದ ದೂರ ಇರುತ್ತಾರೆ. ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನಡೆಯುವ ಚರ್ಚೆ ಬಗ್ಗೆಯೂ ಮೌನವಾಗಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಆಗೊಮ್ಮೆ ಈಗೊಮ್ಮೆ ಪೋಸ್ಟ್ ಮಾಡುತ್ತಾರೆ. ಕೆಲ ದಿನಗಳ ಹಿಂದೆ ಸೂರ್ಯ- ಜ್ಯೋತಿಕಾ ಚೆನ್ನೈ ಬಿಟ್ಟು ಮುಂಬೈನಲ್ಲಿ ಸೆಟ್ಲ್ ಆಗ್ತಾರೆ, ಇಬ್ಬರೂ ದೂರಾಗುತ್ತಾರೆ ಅಂತೆಲ್ಲಾ ಗುಸುಗುಸು ಕೇಳಿಬಂದಿತ್ತು. ಆಗಲೂ ಪ್ರತಿಕ್ರಿಯಿಸಿರಲಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಜ್ಯೋತಿಕಾ ಹೆಚ್ಚು ನಟಿಸುತ್ತಿದ್ದಾರೆ. 'ಪೊನ್‌ಮಗಳ್ ವಂದಾಲ್', 'ಕಾಥಲ್', 'ಶೈತಾನ್' ಹೀಗೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಾರ್ಚ್ 8ಕ್ಕೆ ಬಂದ ಬಾಲಿವುಡ್ 'ಶೈತಾನ್' ಸಿನಿಮಾ ಸಕತ್ ಸದ್ದು ಮಾಡಿತ್ತು.

More from Filmibeat

English summary
Actress Kasturi angry against jyothika words for Online vote;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X