"ಅಂದು ಬಹಳ ಭಯ ಆಗಿತ್ತು": ವೈರಲ್ ಫೋಟೊಶೂಟ್ ಬಗ್ಗೆ ನಟಿ ಕಸ್ತೂರಿ ಹೇಳಿದ್ದಿಷ್ಟು
ತಮಿಳು ನಟಿ ಕಸ್ತೂರಿ ಕಿರುತೆರೆ ಧಾರಾವಾಹಿಗಳ ಮೂಲಕ ಮತ್ತೆ ಕ್ರೇಜ್ ಸಂಪಾದಿಸಿದ್ದಾರೆ. ಜೊತೆಗೆ ಟ್ವಿಟ್ಟರ್‌ನಲ್ಲಿ ವಿವಾದಾತ್ಮಕ ಪೋಸ್ಟ್‌ಗಳಿಂದಲೂ ಸದಾ ಸುದ್ದಿಯಲ್ಲಿ ಇರುತ್ತಾರೆ. ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಚೆಲುವೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. 'ಇಂಡಿಯನ್', 'ಅನ್ನಮಯ್ಯ' ರೀತಿಯ ಹಿಟ್ ಸಿನಿಮಾಗಳಲ್ಲಿ ಮಿಂಚಿದ ಚೆಲುವೆ ಕನ್ನಡದ 'ಜಾಣ' ಚಿತ್ರದಲ್ಲಿ ಕ್ರೇಜಿಸ್ಟಾರ್‌ಗೆ ಜೋಡಿ ಆಗಿದ್ದರು.
8 ವರ್ಷಗಳ ಹಿಂದೆ ನಟಿ ಕಸ್ತೂರಿ ವಿಶೇಷ ಫೋಟೊಶೂಟ್‌ವೊಂದು ಭಾರೀ ಸದ್ದು ಮಾಡಿತ್ತು. ಅರೆಬೆತ್ತಲಾಗಿ ಮಗುವನ್ನು ಎದೆಗೆ ಅವುಚಿಟ್ಟುಕೊಂಡು ಪೋಸ್ ಕೊಟ್ಟಿದ್ದರು. ಜೇಡ್ ಬೀಲ್ಸ್ ಬರೆದ 'ದಿ ಬಾಡೀಸ್ ಆಫ್ ಮದರ್' ಎನ್ನುವ ಪುಸ್ತಕಕ್ಕಾಗಿ ಈ ಫೋಟೊಶೂಟ್ ಮಾಡಿಸಿದ್ದರು. ಆಗ ಸೌತ್ ನಟಿಯರು ಅಷ್ಟಾಗಿ ಟಾಪ್ ಲೆಸ್ ಫೋಟೊಶೂಟ್ ಮಾಡಿಸುತ್ತಿರಲಿಲ್ಲ. ಹಾಗಾಗಿ ಈ ಫೋಟೊಗಳು ಗಮನ ಸೆಳೆಯುವ ಜೊತೆಗೆ ಚರ್ಚೆ ಹುಟ್ಟಾಕಿತ್ತು.

ಕಸ್ತೂರಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ತಮ್ಮ ವೈಯಕ್ತಿಕ ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ವಿಶೇಷವಾಗಿ ಹಿಂದೆ ಆಕೆಯ ಆ ಮದರ್ ಹುಡ್ ಫೋಟೋಶೂಟ್ ಬಗ್ಗೆ ಮಾತನಾಡಿದ್ದಾರೆ. ಆ ಟಾಪ್‌ಲೆಸ್ ಫೋಟೊಶೂಟ್ ಬಗ್ಗೆ ವಿವರಿಸಿದ್ದಾರೆ. ಅದರ ಬಗ್ಗೆ ಕ್ಲಾರಿಟಿ ಕೂಡ ಕೊಟ್ಟಿದ್ದಾರೆ.
"ಅಮೆರಿಕಾದ ಸಂಸ್ಥೆಗಾಗಿ ಆ ಫೋಟೊಶೂಟ್ ಮಾಡಬೇಕಾಯಿತು. ಆದರೆ ಅಲ್ಲಿ ಮಾಡಿದ ಫೋಟೊಶೂಟ್ ಫೋಟೊಗಳು ಇಲ್ಲಿಗೆ ಹೇಗೆ ಬಂತು ಗೊತ್ತಿಲ್ಲ. ಆ ಫೋಟೊಗಳು ಇಲ್ಲಿ ವೈರಲ್ ಆದಾಗ ಕೊಂಚ ಭಯವಾಗಿತ್ತು. ಅಮೆರಿಕಾದಲ್ಲಿ ಇದೆಲ್ಲಾ ಓಕೆ. ನಮ್ಮವರು ಒಪ್ಪಿಕೊಳ್ಳುವುದಿಲ್ಲವೇನೋ, ಟ್ರೋಲ್ ಮಾಡುತ್ತಾರೆ ಎಂದು ಆತಂಕಗೊಂಡಿದ್ದೆ. ಆದರೆ ಆ ಫೋಟೊಗಳ ಬಗ್ಗೆ ಒಂದೇ ಒಂದು ನೆಗೆಟಿವ್ ಕಾಮೆಂಟ್‌ಗಳು ಬರಲಿಲ್ಲ."
"ನಾನು ತಮಿಳುನಾಡಿಗೆ ಹೋದಾಗ ಮಹಿಳೆಯರು ಬಹಳ ಡಿವೋಷನಲ್ ಆಗಿದೆ ಎಂದು ಅಭಿನಂದಿಸಿದರು. ಅವರ ಮೆಚ್ಯುರಿಟಿಗೆ ಸಂತಸವಾಯಿತು. ಕೆಲವರು ಮಾತ್ರ ಅದಕ್ಕೆ ಚಕಾರ ಎತ್ತಿದ್ದರು. ಅಂತಹ ಕೆಲವರು ಇರುತ್ತಾರೆ ಬಿಡಿ" ಎಂದು ಕಸ್ತೂರಿ ಹೇಳಿದ್ದಾರೆ. 'ಗೃಹಲಕ್ಷ್ಮಿ' ಎನ್ನುವ ಧಾರಾವಾಹಿಯಲ್ಲಿ ಸದ್ಯ ಕಸ್ತೂರಿ ತುಳಸಿ ಪಾತ್ರ ಮಾಡುತ್ತಿದ್ದಾರೆ. ಅದರ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದೆ.

"ತಮ್ಮ ಡ್ರೆಸ್ಸಿಂಗ್ ಬಗ್ಗೆಯೂ ಮಾತನಾಡಿದ್ದಾರೆ. ನನಗೆ ಕಂಫರ್ಟ್ ಎನಿಸಿದ್ದನ್ನು ಮಾತ್ರ ಧರಿಸುತ್ತೇನೆ. ಅವರು ಏನು ಅಂತಾರೆ, ಇವರು ಏನಂತಾರೆ ಅಂತೆಲ್ಲಾ ಯೋಚಿಸುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ಇನ್ನು ಸಿನಿಮಾಗಳ ವಿಚಾರದಲ್ಲಿ ಅಂತಹ ಬಟ್ಟೆ ಧರಿಸಬೇಕಾಗುತ್ತದೆ. ಅದು ನಮ್ಮ ವೃತ್ತಿಯ ಭಾಗ. ಇದನ್ನು ಕೆಲವರು ಒಪ್ಪಲಿಲ್ಲ. ಪಾಸಿಟಿವ್ ಆಗಿ ನೋಡಿದರೆ ಎಲ್ಲಾ ಸರಿಯಾಗಿಯೇ ಇರುತ್ತದೆ" ಎಂದು ಕಸ್ತೂರಿ ವಿವರಿಸಿದ್ದಾರೆ.


Click it and Unblock the Notifications











