"ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕಿರುಕುಳ ಕೊಟ್ಟಿದ್ದು ಸರೀನಾ? ದರ್ಶನ್ ಶಾರ್ಟ್ ಟೆಂಪರ್, ಅದ್ಕೆ ಹೀಗಾಯ್ತು": ಕಸ್ತೂರಿ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಸಂಕಷ್ಟ ಎದುರಾಗಿದೆ. ಪ್ರಕರಣದ ಸಂಬಂಧ ದರ್ಶನ್, ಪವಿತ್ರಾ ಗೌಡ ಸೇರಿದಂತೆ 13 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ದರ್ಶನ್ ಅಂಡ್ ಗ್ಯಾಂಗ್ ವಿರುದ್ದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ ಚಿತ್ರರಂಗದವರು ಈ ಬಗ್ಗೆ ಸೈಲೆಂಟ್ ಆಗಿದ್ದಾರೆ.

ನಟಿ ರಮ್ಯಾ ಬಿಟ್ಟರೆ ಯಾರೊಬ್ಬರು ದರ್ಶನ್ ಬಂಧನದ ಬಗ್ಗೆ ಮಾತನಾಡುತ್ತಿಲ್ಲ. ಆದರೆ ತಮಿಳು ನಟಿ ಕಸ್ತೂರಿ ಇದೀಗ ಪ್ರತಿಕ್ರಿಯಿಸಿದ್ದಾರೆ. ಆಕೆ ಕನ್ನಡದಲ್ಲಿ 'ಜಾಣ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಪ್ರಪಂಚದ ಆಗುಹೋಗುಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇದೀಗ ತೆಲುಗು ಸಂದರ್ಶನವೊಂದರಲ್ಲಿ ನಟ ದರ್ಶನ್ ಬಂಧನ ವಿಚಾರದ ಬಗ್ಗೆ ನಟಿ ಕಸ್ತೂರಿ ಮಾತನಾಡಿದ್ದಾರೆ.

Tamil actress Kasthuri shankar bats for Darshan in Renukaswamy murder case

"ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕೆಟ್ಟ ಕೆಟ್ಟ ಮೆಸೇಜ್ ಕಳುಹಿಸಿದ್ದಾನೆ. ಪವಿತ್ರಾ ಗೌಡ, ದರ್ಶನ್ ಹೆಂಡತಿ ಅಲ್ಲ. ಅವರಿಬ್ಬರೂ ರಿಲೇಷನ್‌ಶಿಪ್‌ನಲ್ಲಿದ್ದಾರೆ. ಅವರ ಪರ್ಸನಲ್ ಲೈಫ್ ಅವ್ರದ್ದು ಕಣ್ರೀ. ಸೋಶಿಯಲ್ ಮೀಡಿಯಾ ಕಾರಣದಿಂದ ಎಲ್ಲರ ವೈಯಕ್ತಿಕ ಜೀವನದ ಬಗ್ಗೆ ಎಲ್ಲಾ ನಮ್ಮದೇ ಎನ್ನುವಂತೆ ದೊಡ್ಡ ನ್ಯಾಯಧೀಶರಂತೆ ಹರಿಶ್ಚಂದ್ರರಂತೆ ಕಾಮೆಂಟ್ ಮಾಡುತ್ತಾರೆ."

"ನಿಮ್ಮ ವೈಯಕ್ತಿಕ ಜೀವನದಲ್ಲಿ ಏನಾಗುತ್ತಿದೆ ನೋಡಲ್ಲ, ಕಂಡವರ ಜೀವನದ ಬಗ್ಗೆ ಕಣ್ಣು. ಅದಕ್ಕೆ ಜಡ್ಜ್‌ಮೆಂಟ್ ಹೇಳಬೇಕು, ಅವರಿಗೆ ಕಿರುಕುಳ ಕೊಡಬೇಕು, ಕ್ಷಮಿಸಿ, ಹಿಂಸೆಯನ್ನು ಪ್ರೋತ್ಸಾಹಿಸಬಾರದು. ಆದರೆ ರೇಣುಕಾಸ್ವಾಮಿ ಒಳ್ಳೆಯವನಲ್ಲ. ಆತ ಪವಿತ್ರಾ ಗೌಡಗೆ ಮೆಸೇಜ್‌ಗಳನ್ನು ಮಾಡಿ ಕಿರುಕುಳ ನೀಡಿದ್ದಾನೆ. ಆತನ ಕೆಲಸ ಏನು? ಆತ ಯಾಕೆ ಆಕೆಗೆ ಮೆಸೇಜ್‌ ಕಳುಹಿಸುತ್ತಿದ್ದ? ಹೌದು ದರ್ಶನ್ ಮಾಡಿದ್ದು ತಪ್ಪು, ಅದಕ್ಕೆ ಕಾನೂನಿದೆ. ಅವರ ಮೊದಲ ಪತ್ನಿ ಇದ್ದಾರೆ. ಅದು ಅವರ ವೈಯಕ್ತಿಕ. ಆದರೆ ಸೆಲೆಬ್ರೆಟಿಗೆ ಮೆಸೇಜ್ ಮಾಡಿ ಕಿರುಕುಳ ನೀಡುವ ಅಧಿಕಾರ ಸಾರ್ವಜನಿಕರಿಗೆ ಯಾರು ಕೊಟ್ಟರು?" ಎಂದು ಪ್ರಶ್ನಿಸಿದ್ದಾರೆ.

Tamil actress Kasthuri shankar bats for Darshan in Renukaswamy murder case

"ದರ್ಶನ್ ವಿಚಾರದಲ್ಲಿ ಈ ಕೆಟ್ಟ ಕಾಮೆಂಟ್ಸ್‌ ಎನ್ನುವುದು ಬಹಳ ದೂರ ಹೋಗಿಬಿಟ್ಟಿದೆ. ಆತ ಶಾರ್ಟ್‌ ಟೆಂಪರ್ ವ್ಯಕ್ತಿ. ಆತ ಮತ್ತು ಆತ ಅಭಿಮಾನಿಗಳು ಬುದ್ಧಿ ಕಲಿಸಬೇಕು ಅಂತ ರೇಣುಕಾಸ್ವಾಮಿಗೆ ಹೊಡೆದು, ಆತ ಸತ್ತು ಹೋಗಿದ್ದಾನೆ. ಅದು ತಪ್ಪು. ಆದರೆ ಎಲ್ಲದ್ದಕ್ಕೂ ಒಂದು ಎಲ್ಲೆ ಇರಬೇಕು. ರಶ್ಮಿಕಾ ವಿಚಾರ ತಗೊಳ್ಳಿ, ಡೀಪ್‌ ಫೇಕ್ ವೀಡಿಯೋ ಮಾಡಿ ಎಷ್ಟು ಅಸಹ್ಯವಾಗಿ ಬಳಸಿದರು. ಎಐ ಮೂಲಕ ಯಾರ ಬೆತ್ತಲೆ ಫೋಟೊ, ವಿಡಿಯೋ ಬೇಕಾದರೂ ಸಿಕ್ಕಿಬಿಡುತ್ತದೆ. ಇದು ಬಹಳ ಆತಂಕ ಹುಟ್ಟಿಸಿದೆ"

"ಕೆಲಸ ಕಾರ್ಯ, ಇಲ್ಲದವರು ಈ ರೀತಿ ಮಾಡಿಕೊಂಡಿದ್ದರೆ ಯಾರಿಗಾದರೂ ಒಮ್ಮೆ ಟ್ರಿಗರ್ ಆಗುತ್ತದೆ. ಒಬ್ಬ ರಾಜಕಾರಣಿ, ಉದ್ಯಮಿಗೆ ಈ ರೀತಿ ಮಾಡಿದ್ರೆ ಸುಮ್ಮನಿರ್ತಾರಾ? ನಿಮ್ಮನ್ನು ಮಾಯ ಮಾಡಿಬಿಡ್ತಾರೆ. ಏನಾಯ್ತು ಅಂತ ಗೊತ್ತಾಗಲ್ಲ. ಆದರೆ ಒಬ್ಬ ಸಿನಿಮಾ ಸೆಲೆಬ್ರೆಟಿಗೆ ಮಾಡಿದ್ರೆ ಸುಮ್ಮನಿರಬೇಕಾ? ಯಾಕೆ ಹೀಗೆ? ನಾನು ಯಾರನ್ನು ಹೊಡೆಯಿರಿ, ಸಾಯಿಸಿ ಎಂದು ಹೇಳಲ್ಲ. ಆದರೆ ಎಷ್ಟು ಅಂತ ಸಹಿಸಿಕೊಳ್ಳುವುದು. ಯಾರಿಗಾದರೂ ತಲೆ ಕೆಡುತ್ತೆ ಅಲ್ವಾ? ಮತ್ತೊಬ್ಬರ ಜೀವನದಲ್ಲಿ ಇಣುಕಿ ನೋಡುವುದು ಸರಿಯಲ್ಲ. ರಿಲೇಷನ್‌ಶಿಪ್ ಎನ್ನುವುದು ತಪ್ಪಲ್ಲ, ಅದು ಅವರವರ ವೈಯಕ್ತಿಕ" ಎಂದು ನಟಿ ಕಸ್ತೂರಿ ಹೇಳಿದ್ದಾರೆ.

More from Filmibeat

English summary
Tamil actress Kasthuri reacts on Darshan arrest case;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X