"ಜೈಲಿನಲ್ಲಿ ಬಟ್ಟೆ ಬಿಚ್ಚಿಸಿ ಕೂರಿಸಿದ್ರು, ಪ್ರೈವೇಟ್ ಪಾರ್ಟ್ಸ್‌ ಕೂಡ ಬಿಡಲ್ಲ"; ಜೈಲು ದಿನಗಳನ್ನು ನೆನೆದ ನಟಿ ಕಸ್ತೂರಿ

ವಿವಾದಾತ್ಮಕ ಹೇಳಿಕೆಗಳಿಂದ ತಮಿಳು ನಟಿ ಕಸ್ತೂರಿ ಪದೇ ಪದೆ ಸಂಕಷ್ಟಕ್ಕೆ ಸಿಲುಕುತ್ತಾರೆ. ಇತ್ತೀಚೆಗೆ ಆಕೆ ನೀಡಿದ ಹೇಳಿಕೆವೊಂದು ಭಾರೀ ವಿವಾದ ಸೃಷ್ಟಿಸಿತ್ತು. ಕೊನೆಗೆ ಬಂಧನವಾಗಿ ವಿಚಾರಣಾಧೀನ ಕೈದಿಯಾಗಿ ಜೈಲಿಗೂ ಹೋಗುವಂತಾಯಿತು. ಜಾಮೀನು ಪಡೆದು ಹೊರ ಬಂದ ನಟ ಜೈಲಿನ ಕರಾಳ ದಿನಗಳನ್ನು ನೆನೆದಿದ್ದಾರೆ.

ತಮಿಳುನಾಡಿನಲ್ಲಿ ನೆಲೆಸಿರುವ ತೆಲುಗು ಜನರ ಬಗ್ಗೆ ಸಮಾವೇಶವೊಂದರಲ್ಲಿ ನಟಿ ಕಸ್ತೂರಿ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಈ ಸಂಬಂಧ ದೂರು ದಾಖಲಾಗಿತ್ತು. ಚೆನ್ನೈ ಪೊಲೀಸರ ವಿಶೇಷ ತಂಡ ನವೆಂಬರ್ 16ರಂದು ಹೈದರಾಬಾದ್‌ನಲ್ಲಿ ಆಕೆಯನ್ನು ಬಂಧಿಸಿದ್ದರು. ಬಳಿಕ ಚೆನ್ನೈ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಹಾಜರು ಪಡಿಸಿದ್ದರು. ಬಳಿಕ ನವೆಂಬರ್ 29ರವರೆಗೆ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು.

Tamil actress kasthuri Shankar recalls her jail days

ನವೆಂಬರ್ 22ರಂದು ನಟಿ ಕಸ್ತೂರಿ ಷರತ್ತುಬದ್ಧ ಜಾಮೀನು ಪಡೆದು ಹೊರ ಬಂದರು. ಆದರೆ ಮೂರು ದಿನಗಳ ಕಾಲ ಆಕೆ ಜೈಲಿನಲ್ಲಿ ಇರಬೇಕಾಯಿತು. ಇದೀಗ ತಮ್ಮ ಜೈಲುಗಳ ದಿನಗಳ ತೆಲುಗು ಸಂದರ್ಶನದಲ್ಲಿ ನಟಿ ಕಸ್ತೂರಿ ಮಾತನಾಡಿದ್ದಾರೆ. ಬೇಕೆಂದೇ ನನ್ನನ್ನು ಶನಿವಾರ ಬಂಧಿಸಿದರು ಎನಿಸುತ್ತದೆ. ಅಲ್ಲು ಅರ್ಜುನ್ ವಿಚಾರದಲ್ಲೂ ಹೀಗೆ ಆಯಿತು ಎಂದಿದ್ದಾರೆ.

ನನ್ನ ಪ್ರಕರಣದಲ್ಲಿ ಪೊಲೀಸರು ಹಾಗೂ ಜೈಲು ಸಿಬ್ಬಂದಿ ಒಳ್ಳೆ ರೀತಿಯಲ್ಲೇ ವರ್ತಿಸಿದ್ದರು. ಆದರೂ ಯಾರೂ ಕಾನೂನು ಮೀರಿ ಸಹಾಯ ಮಾಡಲಿಲ್ಲ. ಆದರೆ ನಯವಾಗಿಯೇ ನನ್ನೊಟ್ಟಿಗೆ ಮಾತನಾಡಿದರು. ಅಲ್ಲು ಅರ್ಜುನ್‌ಗೆ ಜೈಲು ತೋರಿಸಬೇಕು ಎಂದೇ ಅಷ್ಟೆಲ್ಲಾ ಮಾಡಿದರು ಅನ್ನಿಸುತ್ತದೆ. ಕಾರಣ ಇದಕ್ಕಿಂತ ದೊಡ್ಡ ತಪ್ಪು ಮಾಡಿದವರು ಹೊರಗಡೆ ಸುತ್ತಾಡುತ್ತಿದ್ದಾರೆ ಎಂದು ಕಸ್ತೂರಿ ಹೇಳಿದ್ದಾರೆ.

ತಾವು ವಿಚಾರಣಾಧೀನ ಕೈದಿಯಾಗಿ ಜೈಲಿಗೆ ಹೋದ ದಿನ ಏನೆಲ್ಲಾ ಆಯಿತು ಎಂದು ಐಡ್ರೀಮ್ ಮೀಡಿಯಾ ಯೂಟ್ಯೂಬ್ ಸಂದರ್ಶನದಲ್ಲಿ ನಟಿ ಕಸ್ತೂರಿ ಹೇಳಿದ್ದಾರೆ. "ಎರಡು ಬೆಡ್‌ಶೀಟ್ ಕೊಡುತ್ತಾರೆ. ಹಾಸಿಗೆ ಸಿಗಲ್ಲ. ಹೊಸ ತಟ್ಟೆ, ಲೋಟ ಕೊಟ್ಟರು. ನಾನು ಹೋದಾಗ ಅಲ್ಲಿ 49 ಕೈದಿಗಳಿದ್ದರು. ಮೊದಲಿಗೆ ನನ್ನು ಕ್ವಾರಂಟೈನ್ ಸೆಲ್‌ಗೆ ಕಳುಹಿಸಿದ್ದರು" ಎಂದು ಕಸ್ತೂರಿ ತಿಳಿಸಿದ್ದಾರೆ.

"ಕೆಲ ಕೈದಿಗಳು ನಮ್ಮ ಬಳಿ ಇರುವ ತಟ್ಟೆ, ಲೋಟ ಕೂಡ ಕೇಳುತ್ತಾರೆ. ದಬ್ಬಾಳಿಕೆ ಮಾಡುತ್ತಾರೆ. ಮೊದಲ ದಿನ ನನಗೆ ಹುಚ್ಚು ಹಿಡಿಸುತ್ತೆ ಎನಿಸಿಬಿಟ್ಟಿತು. ಇಡೀ ರಾತ್ರಿ ಸಮಯ ಎಷ್ಟು ಎಂದು ಕೇಳುತ್ತಲೇ ಕಳೆದೆ. ಅದು ವಿಚಿತ್ರ ಅನುಭವ. ಒಳಗೆ ಹೋದಮೇಲೆ ಯಾವುದೇ ಆಭರಣ ಧರಿಸುವಂತಿಲ್ಲ, ಒಳಗೆ ಹೋಗುವುದೇ ದೊಡ್ಡ ಅಡ್ವೆಂಚರ್ ಎಂದು ಕಸ್ತೂರಿ ಹೇಳಿದ್ದಾರೆ.

"ಸಂಪೂರ್ಣ ಬಟ್ಟೆ ಬಿಚ್ಚಿಸಿ ಪರಿಶೀಲನೆ ನಡೆಸುತ್ತಾರೆ. ನಟ ಅಲ್ಲು ಅರ್ಜುನ್‌ಗೆ ಕೂಡ ಇದೇ ನಡೆದಿರುತ್ತದೆ. ಹುಟ್ಟಿದಾಗ ಹೇಗಿದ್ದೆವೋ ಹಾಗೆ ಬೆತ್ತಲಾಗಿ ನಿಲ್ಲಬೇಕು. ಹೆಣ್ಣು ಮಕ್ಕಳಾದರೆ ಸ್ವಲ್ಪ ಪರವಾಗಿಲ್ಲ, ಆದರೂ ಮೈಯೆಲ್ಲಾ ಮುಟ್ಟಿ ಹುಡುಕುತ್ತಾರೆ. ದೇಹದ ಯಾವುದಾದರೂ ಭಾಗದಲ್ಲಿ ಏನಾದರೂ ಇಟ್ಟುಕೊಂಡಿದ್ದೀವಾ? ಎಂದು ನೋಡುತ್ತಾರೆ. ಕೊನೆಗೆ ಪ್ರೈವೇಟ್ ಪಾರ್ಟ್‌ನಲ್ಲಿ ಚೆಕ್ ಮಾಡ್ತಾರೆ" ಎಂದು ಕಸ್ತೂರಿ ಆ ಬಗ್ಗೆ ವಿವರಿಸಿದ್ದಾರೆ.

ಪ್ರೈವೇಟ್ ಪಾರ್ಟ್ ಮುಟ್ಟಲ್ಲ. ಆದರೆ ಒಳ ಉಡಪುಗಳಲ್ಲಿ ನಿಲ್ಲಿಸಿ ಬಸ್ಕಿ ಹೊಡೆಯುವಂತೆ ಹೇಳುತ್ತಾರೆ. ಪ್ರೈವೇಟ್ ಪಾರ್ಟ್‌ನಲ್ಲಿ ಬಚ್ಚಿಟ್ಟುಕೊಂಡಿದ್ದರೆ ಹೊರಗೆ ಬರಬೇಕು ಎಂದು ಹೀಗೆ ಮಾಡಿಸುತ್ತಾರೆ. ಸಂಪೂರ್ಣ ಬಟ್ಟೆ ಬಿಚ್ಚಬೇಕಾ? ಎಂದು ನಾನು ಮೂರ್ಮೂರು ಬಾರಿ ಕೇಳಿದೆ. ಹೌದು ಮೇಡಂ ಅಂದರು" ಎಂದು ಕಸ್ತೂರಿ ಹೇಳಿರುವುದು ವೈರಲ ಆಗುತ್ತಿದೆ.

ಒಮ್ಮೆ ಜೈಲಿಗೆ ಹೋದರೆ ಮುಗೀತು. ನಿಮ್ಮ ಹೆಸರು ಕೈದಿ ಲಿಸ್ಟ್ ಸೇರುತ್ತದೆ. ಅಲ್ಲು ಅರ್ಜುನ್‌ಗೆ ಮಧ್ಯಂತರ ಜಾಮೀನು ಸಿಕ್ಕಾಗ ಪರವಾಗಿಲ್ಲ ಎಂದಿಕೊಂಡೆ. ಆದರೆ ಜೈಲಿಗೆ ಹೋದಮೇಲೆ ಅವರು ಕೂಡ ಕೈದಿ ಎಂದೇ ಹೆಸರು ದಾಖಲಾಗಿರುತ್ತದೆ. ಕೈದಿ ಎಂದು ನನ್ನ ಫೋಟೊ ತೆಗೆದು, ದಾಖಲಾತಿ ಪುಸ್ತಕದಲ್ಲಿ ನನ್ನ ವಿವರ ಬರೆದರು. ಕೈದಿ ನಂಬರ್ ಕೂಡ ಕೊಟ್ಟರು, ನನಗೆ ಕೈದಿ ರೆಕಾರ್ಡ್ ಇದೆ" ಎಂದು ಕಸ್ತೂರಿ ಜೈಲು ದಿನಗಳನ್ನು ವಿವರಿಸಿದ್ದಾರೆ.

More from Filmibeat

English summary
Actress Kasthuri Shankar opens up about her three days in jail, and also comments on Allu Arjun arrest;
Read more about: kasthuri allu arjun kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X