"ವಿಶ್ವೇಶ್ವರಯ್ಯ ಕಾವೇರಿ ನದಿ ಅಗೆದು ಕಂಡು ಹಿಡಿದ್ರಾ? ಸಿದ್ದಾರ್ಥ್ ಅವತ್ತು ಅಲ್ಲೇ ತಮ್ಮ ಪೌರುಷ ತೋರಿಸಬೇಕಿತ್ತು": ನಟಿ ಕಸ್ತೂರಿ

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ತಮಿಳು ನಟಿ ಕಸ್ತೂರಿ ಶಂಕರ್ ಹೇಳಿಕೆ ಇತ್ತೀಚೆಗೆ ವೈರಲ್ ಆಗಿತ್ತು. ಕಾವೇರಿ ನೀರಿನ ಮುಕ್ಕಾಲು ಭಾಗ ತಮಿಳುನಾಡು ಪಾಲು, ಬೆಂಗಳೂರಿಗೆ ಕಾವೇರಿ ನೀರೇ ಬೇಕಾ? ಎಂದು 'ಜಾಣ' ಸಿನಿಮಾ ನಟಿ ಪ್ರಶ್ನಿಸಿದ್ದರು. ಇನ್ನು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನಟಿ ತಮಿಳು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

"ತಮಿಳುನಾಡಿನವರು ಕಾವೇರಿ ನೀರಿನ ಸಮಸ್ಯೆಯನ್ನು ಇನ್ನು ಶಾಂತವಾಗಿ ಡೀಲ್ ಮಾಡುತ್ತಿದ್ದೇವೆ ಎಂದು ನನಗೆ ಅನ್ನಿಸುತ್ತಿದೆ. ರಾಜ್ಯದಲ್ಲಿ ಆಡಳಿತ ಪಕ್ಷ ಈ ಬಗ್ಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ವಿರೋಧ ಪಕ್ಷಗಳು ಕೇಳುತ್ತಿವೆ. ಕಾವೇರಿ ಒಪ್ಪಂದವನ್ನು ಎಲ್ಲರೂ ತಿಳಿದುಕೊಳ್ಳಬೇಕು. ಕಾವೇರಿ ಎಲ್ಲಿ ಹುಟ್ಟಿ ಹರಿಯುತ್ತದೋ ಅವರಿಗೆ ಸ್ವಂತ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ನದಿ ಎಲ್ಲಿ ಬಂದು ಸಮುದ್ ಸೇರುತ್ತದೋ ಅವರಿಗೆ ಸ್ವಂತ ಅನ್ನೋದು ಅರ್ಥವಾಗ್ತಿಲ್ಲ"

Tamil Actress kasturi reacts on Siddharths Event Disrupted Over Cauvery Row

"ಒಪ್ಪಂದದ ಪ್ರಕಾರ ತಮಿಳುನಾಡು, ಪಾಂಡಿಚೇರಿ, ಕರ್ನಾಟಕ, ಕೇರಳ ಈ ನಾಲ್ಕು ರಾಜ್ಯಗಳಿಗೂ ಕಾವೇರಿ ಮೇಲೆ ಹಕ್ಕು ಇದೆ. ಮುಕ್ಕಾಲು ಭಾಗ ನೀರು ತಮಿಳುನಾಡಿಗೆ ಸ್ವಂತ ಅನ್ನೋದು ಒಪ್ಪಂದದಲ್ಲಿದೆ. ಅದರಲ್ಲಿ ಇಳಿಸಿ ಇಳಿಸಿ ಇವತ್ತು 172 ಟಿಎಂಸಿ ನೀರು ಕೊಡಿ ಕೇಳುವಂತಾಗಿದೆ. ಈ ಮತ್ತೆ ಕೇಳುವಂತಾಗಿದೆ. ಈಗ ಕೇಳೋಕೆ ಹೋದರೆ ಕೋರ್ಟ್‌ನಲ್ಲಿ ನಮ್ಮನ್ನೇ ಕಾಂಪ್ರಮೈಸ್ ಮಾಡಿಕೊಳ್ಳಲು ಹೇಳುತ್ತಾರೆ"

"ಕರ್ನಾಟಕದಲ್ಲಿರುವ ರಾಜಕೀಯ ಪಕ್ಷಗಳು ಕಾವೇರಿ ತಮ್ಮ ಆಸ್ತಿ ಎನ್ನುವಂತೆ ಜನರನ್ನು ನಂಬಿಸಿದ್ದಾರೆ. ಕರ್ನಾಟಕದಲ್ಲಿ ವಿದ್ಯಾವಂತರು ಕೂಡ ಸರ್‌. ಎಂ ವಿಶ್ವೇಶ್ವರಯ್ಯ ಕಾವೇರಿ ನದಿಯನ್ನು ಅಗೆದು ಕಂಡು ಹಿಡಿದಂತೆ ಭಾವಿಸಿದ್ದಾರೆ. ಇಂತಹ ಸಮಯದಲ್ಲಿ ಕರ್ನಾಟಕ ಕಾಜಕೀಯ ಮುಖಂಡರನ್ನು ನಾವು ಖಂಡಿಸುತ್ತೇವೆ. ಆದರೆ ನಮ್ಮ ಸಿಎಂ ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

"ಇಂಡಿಯಾ ಮೈತ್ರಿಕೂಟದಲ್ಲಿ ಇದ್ದಾರೆ ಅಲ್ವಾ? ಯಾಕೆ ಕೇಳಲ್ಲ. ನೀರು ಬಿಡ್ತೀರಾ? ಇಲ್ಲ ಮೈತ್ರಿ ಇಂದ ಹಿಂದೆ ಸರಿಯೋದಾ? ಎಂದು ಕೇಳಬಹುದು ಅಲ್ವಾ? ಕಾನೂನಾತ್ಮಕವಾಗಿ ಕೇಳುತ್ತೇನೆ ಅನ್ನೋದರಲ್ಲಿ ಅರ್ಥವಿಲ್ಲ. ಇಲ್ಲಿರುವ ಪ್ರತಿಯೊಬ್ಬ ತಮಿಳರು ಕಾವೇರಿಗಾಗಿ ಒಟ್ಟಾಗಿ ಹೋರಾಡಲು ಸಿದ್ಧರಾಗಿದ್ದೇವೆ. ಕಾವೇರಿ ನಮ್ಮ ಸ್ವತ್ತು. ನಮ್ಮ ತಾಯಿ. ಕರ್ನಾಟಕದವರಿಗೆ ಅದು ಮಗು. ನಮಗೆ ತಾಯಿ" ಎಂದಿದ್ದಾರೆ.

Tamil Actress kasturi reacts on Siddharths Event Disrupted Over Cauvery Row

ಇನ್ನು ಬೆಂಗಳೂರಿನಲ್ಲಿ ನಟ ಸಿದ್ದಾರ್ಥ್ ತಮಿಳು ಸಿನಿಮಾ ಸುದ್ದಿಗೋಷ್ಠಿಗೆ ತಡೆದ ವಿಚಾರದ ಬಗ್ಗೆಯೂ ನಟಿ ಕಸ್ತೂರಿ ಮಾತನಾಡಿದ್ದಾರೆ. "ನಟ ಸಿದ್ದಾರ್ಥ್‌ ಅವ್ರು ಕೂಡ ಮೋದಿಗೆ ವಿರುದ್ಧವಾಗಿ ಕಾಂಗ್ರೆಸ್‌ ಪರ ನಿಲ್ಲುವ ವ್ಯಕ್ತಿ ಅಲ್ಲವೇ? ಈಗಲಾದರೂ ಅದು ಅವ್ರಿಗೆ ಗೊತ್ತಾಗಿರಬಹುದು ಅನ್ನಿಸುತ್ತದೆ. ಅವ್ರು ನನಗೆ ಸ್ನೇಹಿತರು. ಒಳ್ಳೆ ವ್ಯಕ್ತಿ. ಅವ್ರು ಅಲ್ಲಿರುವ ಕಾಂಗ್ರೆಸ್, ಇಲ್ಲಿರುವ ಆಡಳಿತ ಪಕ್ಷಕ್ಕೆ ಆಪ್ತರು ಅಲ್ಲವೇ?"

"ಬೆಂಗಳೂರಿನಲ್ಲಿ ಘಟನೆ ನಡೆದಾಗ ಒಬ್ಬ ಪೊಲೀಸ್ ಇರಲಿಲ್ಲ. ಅಲ್ಲಿ ಅಷ್ಟು ದೊಡ್ಡ ಗುಂಪು ಬಂದು ಸಿದ್ದಾರ್ಥ್ ಅವರನ್ನು ಬೆದರಿಸಿತು. ಅವರು ಸುಮ್ಮನೆ ಕುಳಿತ್ತಿದ್ದರು. ನನಗೆ ಅದರಲ್ಲಿ ಎರಡು ವಿಚಾರಕ್ಕೆ ಬೇಸರ ಇದೆ. ಒಬ್ಬ ಪೊಲೀಸ್ ಇಲ್ಲದೇ ಒಂದು ಗುಂಪು ಬಂದು ಬೆದರಿಸುತ್ತದೆ ಅಂದ್ರೆ ರಾಜ್ಯದ ಬೆಂಬಲ ಇಲ್ಲದೇ ಮಾಡೋಕೆ ಸಾಧ್ಯವಿಲ್ಲ. ಒಂದು ಫೋನ್ ಮಾಡಿದರೂ ಪೊಲೀಸ್ ಬರಬೇಕಿತ್ತು. ಇವರು ಸುಮ್ಮನೆ ಕುಳಿತ್ತಿದ್ದು ಯಾಕೆ ಗೊತ್ತಾಗಲಿಲ್ಲ"

"ಟ್ವಿಟ್ಟರ್‌ನಲ್ಲಿ ಇಷ್ಟಿಷ್ಟು ಉದ್ದ ಬರೆಯುತ್ತಾರೆ. ಅವ್ರ ಪೌರುಷ ಆಗ ಎಲ್ಲಿ ಹೋಗಿತ್ತು. ಹೋಗು ಅಂತ ತಕ್ಷಣ ಎದ್ದು ಹೊರಟುಬಿಟ್ಟರು. ಆ ಜಾಗದಲ್ಲೇ ಅವರು ತಮಿಳುನಾಡಿಗಾಗಿ ಕಾವೇರಿಗಾಗಿ ಮಾತನಾಡಿದ್ದರೆ ಎಲ್ಲರೂ ಸಿದ್ದಾರ್ಥ್‌ನ ಕೊಂಡಾಡುತ್ತಿದ್ದರು. ಈಗ ಬಂದು ನನ್ನ ಸಿನಿಮಾ ನೋಡಿ ನೋಡಿ ಎಂದು ಕೇಳುತ್ತಿದ್ದಾರೆ. ಅವ್ರು ಧೈರ್ಯವಾಗಿ ಅಲ್ಲಿ ಮಾತನಾಡಿದ್ದರೆ ಎಲ್ಲರೂ ಅವ್ರ ಸಿನಿಮಾ ನೋಡುತ್ತಿದ್ದೆವು. ಸಿನಿಮಾ ಚೆನ್ನಾಗಿಲ್ಲದಿದ್ದರೂ ನೋಡುತ್ತಿದ್ದೆವು, ಯಾಕಂದ್ರೆ ಅದು ನಮ್ಮ ಸ್ವಾಭಿಮಾನವಾಗುತ್ತಿತ್ತು. ಆದರೆ ಅವ್ರು ಓಡಿ ಹೋಗಿಬಿಟ್ಟರು ಎಂದು ನನಗೆ ಅನಿಸುತ್ತದೆ" ಎಂದು ನಟಿ ಕಸ್ತೂರಿ ಹೇಳಿದ್ದಾರೆ.

More from Filmibeat

English summary
cauvery dispute: Actress kasturi opens up on Siddharth Chithha PC in bengaluru;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X