For Quick Alerts
  ALLOW NOTIFICATIONS  
  For Daily Alerts

  ನಿರ್ಮಾಪಕನ ಜೊತೆ ನಟಿ ಮದುವೆ: ನಿಜವಾ-ಸುಳ್ಳಾ? ಗೊಂದಲದಲ್ಲಿ ಅಭಿಮಾನಿಗಳು

  |

  ತಮಿಳು ಕಿರುತೆರೆ ಹಾಗೂ ಸಿನಿಮಾಗಳಲ್ಲಿ ದೊಡ್ಡ ಹೆಸರು ಮಾಡಿರುವ ನಟಿ, ನಿರೂಪಕಿಯೂ ಆಗಿರುವ ಮಹಾಲಕ್ಷ್ಮಿ ಖ್ಯಾತ ನಿರ್ಮಾಪಕನ ಜೊತೆ ವಿವಾಹವಾಗಿದ್ದಾರೆ. ಆದರೆ ಈ ವಿವಾಹ ನಿಜವೋ ಅಥವಾ ಸುಳ್ಳೋ ಎಂದು ಅಭಿಮಾನಿಗಳು ಗೊಂದಲಕ್ಕೆ ಈಡಾಗಿದ್ದಾರೆ.

  ನಿನ್ನೆ (ಸೆಪ್ಟೆಂಬರ್ 01) ಬೆಳಿಗ್ಗೆ ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದ್ರ ಚಂದ್ರಶೇಖರನ್ ವಿವಾಹ ನೆರವೇರಿದೆ. ಮದುವೆಯ ಚಿತ್ರಗಳನ್ನು ನಟಿ ಮಹಾಲಕ್ಷ್ಮಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಅಭಿಮಾನಿಗಳು ಈ ಸುದ್ದಿಯನ್ನು ನಂಬಲು ತಯಾರಿಲ್ಲ.

  ಚೆನ್ನೈನಲ್ಲಿ ದುಬಾರಿ ಮನೆ ಖರೀದಿಸಿದ ತಮಿಳು ನಟ ವಿಜಯ್!ಚೆನ್ನೈನಲ್ಲಿ ದುಬಾರಿ ಮನೆ ಖರೀದಿಸಿದ ತಮಿಳು ನಟ ವಿಜಯ್!

  ಇದಕ್ಕೆ ಕಾರಣ ನಿರ್ಮಾಪಕ ರವೀಂದ್ರ ಚಂದ್ರಶೇಖರ್ ಭಾರಿ ಧಡೂತಿ ವ್ಯಕ್ತಿ. ನಟಿ ಮಹಾಲಕ್ಷ್ಮಿಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚು ದಪ್ಪ ಇದ್ದಾರೆ ರವೀಂದ್ರ. ಹೀಗಿದ್ದಾಗಿಯೂ ಮಹಾಲಕ್ಷ್ಮಿ ಹೇಗೆ ಮದುವೆಗೆ ಒಪ್ಪಿಕೊಂಡರು ಎಂದು ಅಭಿಮಾನಿಗಳು ಅವಾಕ್ಕಾಗಿದ್ದಾರೆ.

  ತಿರುಪತಿಯಲ್ಲಿ ಮಹಾಲಕ್ಷ್ಮಿ ಹಾಗೂ ರವೀಂದ್ರ ವಿವಾಹ ನಡೆದಿದೆ. ಇಬ್ಬರಿಗೂ ಇದು ಎರಡನೇ ಮದುವೆ. ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟಿ, ''ನಿನ್ನನ್ನು ಪಡೆಯಲು ನಾನು ಅದೃಷ್ಟ ಮಾಡಿದ್ದೆ. ನನ್ನ ಜೀವನವನ್ನು ನಿನ್ನ ಬೆಚ್ಚನೆಯ ಪ್ರೀತಿಯಿಂದ ತುಂಬಿದ್ದೀಯ. ಲವ್ ಯು ಅಮ್ಮು'' ಎಂದಿದ್ದಾರೆ.

  ನಟಿಯ ಚಿತ್ರಗಳಿಗೆ ಪ್ರತಿಕ್ರಿಯಿಸಿರುವ ಹಲವರು ಇಬ್ಬರಿಗೂ ಶುಭಾಶಯ ಕೋರಿದ್ದಾರೆ. ಆದರೆ ಇನ್ನು ಕೆಲವರು ನಟಿಯ ಆಯ್ಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರಂತೂ ಇನ್ನೂ ಮುಂದೆ ಹೋಗಿ, ನಟಿ ಮಹಾಲಕ್ಷ್ಮಿ ಹಣಕ್ಕಾಗಿ ವಿವಾಹವಾಗಿದ್ದಾರೆ ಎಂದೆಲ್ಲ ಮೂದಲಿಸಿದ್ದಾರೆ. ಇನ್ನು ಕೆಲವರು ಇದು ನಿಜವಾದ ಮದುವೆ ಅಲ್ಲ ಎನಿಸುತ್ತದೆ. ಯಾವುದೋ ಧಾರಾವಾಹಿಗಾಗಿ ಇಬ್ಬರೂ ಮದುವೆ ಆಗಿರುವಂತಿದೆ. ನಟಿ ಮಹಾಲಕ್ಷ್ಮಿ ಈ ರೀತಿಯ ಧಡೂತಿ ವ್ಯಕ್ತಿಯನ್ನು ಪತಿಯಾಗಿ ಆಯ್ಕೆ ಮಾಡಿಕೊಳ್ಳುವುದಿಲ್ಲ'' ಎಂದಿದ್ದಾರೆ.

  Tamil Actress Mahalakshmi Married To Producer Ravindra Chandrashekaran

  ಮಹಾಲಕ್ಷ್ಮೀ, ತಮಿಳು ಧಾರಾವಾಹಿ ಕ್ಷೇತ್ರದಲ್ಲಿ ಚಿರಪರಿಚಿತರು. ಹಲವು ತಮಿಳು ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ. ಸದ್ಯ ಮಹಾಲಕ್ಷ್ಮಿ ನಟನೆಯ 'ಮಹಾರಸಿ' ಧಾರಾವಾಹಿ ಪ್ರಸಾರ ಆಗುತ್ತಿದೆ. ರವೀಂದ್ರ ಅವರು ತಮಿಳು ಚಿತ್ರರಂಗದಲ್ಲಿ ಫೇಮಸ್ ಆಗಿದ್ದಾರೆ. ಲಿಬ್ರಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ರವೀಂದ್ರ ನಿರ್ಮಿಸಿರುವ 'ವಿಡಿಯುಂ ವಾರೈ ಕಾಥಿರು' ಸಿನಿಮಾದಲ್ಲಿ ಮಹಾಲಕ್ಷ್ಮಿ ನಟಿಸಿದ್ದಾರೆ.

  English summary
  Tamil tv and movie actress Mahalakshmi married to producer Ravindra Chandrashekaran. This is their second marriage for both of them.
  Friday, September 2, 2022, 10:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X