For Quick Alerts
  ALLOW NOTIFICATIONS  
  For Daily Alerts

  ಖಿನ್ನತೆ ಕಾಡ್ತಿದೆ, ಹಿಂಸೆ ಹೆಚ್ಚಾಗಿದೆ, ಆತ್ಮಹತ್ಯೆ ಮಾಡಿಕೊಳ್ಳುವೆ: ತಮಿಳು ನಟಿ ಕಣ್ಣೀರು

  |

  ತಮಿಳು ನಟಿ, ಮಾಡೆಲ್ ಮೀರಾ ಮಿಥುನ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಆತಂಕ ಸೃಷ್ಟಿಸಿದ್ದಾರೆ.

  ನನಗೆ ಖಿನ್ನತೆ ಕಾಡ್ತಿದೆ, ಸಾಮಾಜಿಕ ಜಾಲತಾಣದಲ್ಲಿ ನನಗೆ ಕಿರುಕುಳ ನೀಡಲಾಗಿದೆ, ಮಾನಸಿಕವಾಗಿ ನಾನು ಬಹಳ ನೊಂದಿದ್ದೇನೆ ಎಂದು ವಿಡಿಯೋ ಸಹ ಮಾಡಿ ಕಣ್ಣೀರಿಟ್ಟಿದ್ದಾರೆ.

  ಜಯಶ್ರೀ ರಾಮಯ್ಯ ಸಾವಿನ ಬಗ್ಗೆ ಟಿಎನ್ ಸೀತಾರಾಮ್ ಬೇಸರಜಯಶ್ರೀ ರಾಮಯ್ಯ ಸಾವಿನ ಬಗ್ಗೆ ಟಿಎನ್ ಸೀತಾರಾಮ್ ಬೇಸರ

  ಸೋಶಿಯಲ್ ಮೀಡಿಯಾದಲ್ಲಿ ಬರುತ್ತಿರುವ ಕಾಮೆಂಟ್‌ಗಳು ನನ್ನನ್ನು ಸಾಯುವಂತೆ ಮಾಡುತ್ತಿದೆ. ಕೆಲವರನ್ನು ನನ್ನ ಬಗ್ಗೆ ಬಹಳ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಸತ್ತು ಹೋಗು ಎಂದು ಹೀಯಾಳಿಸುತ್ತಿದ್ದಾರೆ. ನನಗೆ ಬದುಕಬೇಕು ಎಂದು ಅನಿಸುತ್ತಿಲ್ಲ ಎಂದು ಮೀರಾ ಮಿಥುನ್ ಟ್ವಿಟ್ಟರ್‌ನಲ್ಲಿ ಅಳಲು ತೋಡಿಕೊಂಡಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ನನಗೆ ನೀಡುತ್ತಿರುವ ಕಿರುಕುಳ ನಿಲ್ಲುವುದಿಲ್ಲ. ಈ ಬಗ್ಗೆ ನಾನು ಎಲ್ಲವೂ ದಾಖಲಿಸುತ್ತಿದ್ದೇನೆ, ಮಾನಸಿಕವಾಗಿ ನನ್ನ ಆರೋಗ್ಯ ಹದಗೆಡುತ್ತಿದೆ, ನನ್ನ ಸಾವಿಗೆ ಕಾರಣರಾದ ಪ್ರತಿಯೊಬ್ಬರನ್ನು ಗಲ್ಲಿಗೇರಿಸಬೇಕು ಎಂದು ಪ್ರಧಾನಿ ಮೋದಿ ಅವರನ್ನು ಟ್ಯಾಗ್ ಮಾಡಿ ಪೋಸ್ಟ್ ಹಾಕಿದ್ದಾರೆ.

  ನಾನೊಬ್ಬಳು ಲೂಸರ್, ನಾನು ಹುಚ್ಚಿ, ನಾನು ಸಾಯಬೇಕು; ದಯಾಮರಣ ನೀಡಿ ಎಂದಿದ್ದ ಜಯಶ್ರೀ ನಾನೊಬ್ಬಳು ಲೂಸರ್, ನಾನು ಹುಚ್ಚಿ, ನಾನು ಸಾಯಬೇಕು; ದಯಾಮರಣ ನೀಡಿ ಎಂದಿದ್ದ ಜಯಶ್ರೀ

  ''ಕಳೆದ ಮೂರು ವರ್ಷದಿಂದ ನಿರಂತರವಾಗಿ ನಾನು ಖಿನ್ನತೆಗೆ ಒಳಗಾಗಿದ್ದೇನೆ. ಸಮಾಜದಲ್ಲಿ ನನಗೆ ಯಾವುದೇ ರೀತಿ ಗೌರವ ಕೊಡ್ತಿಲ್ಲ. ಪ್ರತಿಕ್ಷಣವೂ ನನಗೆ ಅನ್ಯಾಯವಾಗ್ತಿದೆ. ನನ್ನ ಈ ನೋವನ್ನು ಕೊನೆಯಾಗಿಸಲು ನಾನು ನಿರ್ಧರಿಸಿದ್ದೇನೆ'' ಎಂದು ಆತಂಕ ಸೃಷ್ಟಿಸಿದ್ದಾರೆ.

  ಸುಮಾರು 20 ನಿಮಿಷಗಳ ಕಾಲ ವಿಡಿಯೋದಲ್ಲಿ ಕಣ್ಣೀರಿಟ್ಟಿರುವ ನಟಿ ಮೀರಾ ಮಿಥುನ್ ''ಸಿನಿಮಾ ಇಂಡಸ್ಟ್ರಿಯಲ್ಲಿ ಹಾಗೂ ಫ್ಯಾಶನ್ ಇಂಡಸ್ಟ್ರಿಯಲ್ಲಿ ನನ್ನನ್ನು ತುಳಿಯಲಾಗಿದೆ. ನಾನು ಮಾಡಿದ ಕೆಲಸಗಳನ್ನು ಕಾಪಿ ಮಾಡಿದ್ದಾರೆ, ನನ್ನ ಸಾಧನೆಯನ್ನು ಗುರುತಿಸಿ, ಅದನ್ನು ತಾವೇ ಮಾಡಿರವಂತೆ ಕಾಪಿ ಮಾಡಿದ್ದಾರೆ. ನಾನು ತಮಿಳುನಾಡಿನಲ್ಲಿ ಹುಟ್ಟಿದ್ದರೂ, ಓರ್ವ ತಮಿಳು ಹುಡುಗಿಯಾಗಿದ್ದರೂ ನನಗೆ ತೊಂದರೆ ಕೊಟ್ಟಿದ್ದಾರೆ'' ಎಂದು ಆರೋಪಿಸಿದ್ದಾರೆ.

  ಟ್ರೈಲರ್ ಬಿಡುಗಡೆಯಲ್ಲೂ ಕುತೂಹಲ ಮೂಡಿಸಿದ ದರ್ಶನ್ | Filmibeat Kannada

  2017ರಲ್ಲಿ '8 ತೋಟಕ್ಕಲ್' ಚಿತ್ರದಲ್ಲಿ ನಟಿಸುವ ಮೂಲಕ ಇಂಡಸ್ಟ್ರಿ ಪ್ರವೇಶಿಸಿದ್ದರು. 'ಜೋಡಿ ನಂಬರ್ 1' ಹಾಗೂ ಬಿಗ್ ಬಾಸ್ 3ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದರು.

  English summary
  Tamil Actress Meera Mithun suffering from mental depression and she said that tortured in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X