"ಮೂರ್ಖರ ಜೊತೆ ವಾದ ಮಾಡಬೇಡಿ"; ನಟಿ ನಯನತಾರ ಕೌಂಟರ್ ಯಾರಿಗೆ?

ಸಿನಿಮಾ ತಾರೆಯರು ಜನರ ಮೇಲೆ ಬಹಳ ಪರಿಣಾಮ ಬೀರುತ್ತಾರೆ. ಅದೇ ಕಾರಣಕ್ಕೆ ದೊಡ್ಡ ದೊಡ್ಡ ಕಂಪೆನಿಗಳು ತಮ್ಮ ಉತ್ಪನ್ನಗಳ ಪ್ರಚಾರಕ್ಕೆ ಕೋಟಿ ಕೋಟಿ ಕೊಟ್ಟು ಸೆಲೆಬ್ರೆಟಿಗಳು ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಗಾಗಿ ತಾರೆಯರು ತಾವು ಪ್ರಚಾರ ಮಾಡುವ ಉತ್ಪನ್ನದ ಬಗ್ಗೆ ಎಚ್ಚರದಿಂದ ಇರಬೇಕು ಎನ್ನಲಾಗುತ್ತದೆ.

ಕೆಲ ತಾರೆಯರು ಜನರನ್ನು ತಪ್ಪು ದಾರಿಗೆ ಇಳಿಸುವುದು ಬೇಡ ಎಂದು ಜಾಹೀರಾತುಗಳಿಂದ ದೂರವೇ ಉಳಿದುಬಿಡುತ್ತಾರೆ. ಇತ್ತೀಚೆಗೆ ನಟಿ ಸಮಂತಾ ತನ್ನ ಪಾಡ್‌ಕಾಸ್ಟ್‌ನಲ್ಲಿ ವೈದ್ಯಕೀಯ ವಿಚಾರಗಳ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತಿದ್ದಾರೆ. ಆದರೆ ಕೆಲ ವೈದ್ಯರೂ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ತಾರೆಯರು ಈ ರೀತಿ ತಪ್ಪು ಮಾಹಿತಿ ನೀಡಬಾರದು ಎನ್ನುತ್ತಿದ್ದಾರೆ.

tamil Actress Nayanthara cryptic post goes viral

ಸಮಂತಾ ಬಳಿಕ ನಟಿ ನಯನತಾರ ಸಹ ಇದೇ ರೀತಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಮಾಡಿರುವ ಪೋಸ್ಟ್ ಭಾರೀ ಚರ್ಚೆ ಹುಟ್ಟಾಕ್ಕಿದೆ. ಇತ್ತೀಚೆಗೆ ನಯನ್ ದಾಳವಾಳದ ಚಹಾ ಬಗ್ಗೆ ಒಂದು ಪೋಸ್ಟ್ ಹಂಚಿಕೊಂಡಿದ್ದರು. ಮಳೆಗಾಲದಲ್ಲಿ ಇದು ಬಹಳ ಉತ್ತಮ. ಸಾಕಷ್ಟು ವಿಟಮಿನ್ ಇದರಲ್ಲಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಮಧುಮೇಹ, ರಕ್ತದೊತ್ತಡ, ಮೊಡವೆ ಹಾಗೂ ಜ್ವರದಿಂದಲೂ ರಕ್ಷಿಸುತ್ತದೆ. ಇದನ್ನು ಹೇಗೆ ತಯಾರಿಸುವುದು ಗೊತ್ತಾ?" ಎಂದು ರೆಸೆಪಿ ಕೊಟ್ಟಿದ್ದರು.

ನಯನತಾರಾ ಪೋಸ್ಟ್ ಬಗ್ಗೆ ಲಿವರ್ ಡಾಕ್ಟರ್ ಎಂದೇ ಖ್ಯಾತರಾಗಿರುವ ಸೈರಿಕ್ ಅಬೆ ಫಿಲಿಪ್ಸ್ ಪ್ರತಿಕ್ರಿಯಿಸಿದ್ದಾರೆ. ಆಕೆಯ ಪೋಸ್ಟ್ ಸ್ಕ್ರೀನ್‌ ಶಾಟ್ ತೆಗೆದು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ದಾಸವಾಳದ ಟೀ ಕುಡಿಯೋಕೆ ಟೆಸ್ಟಿಯಾಗಿರುತ್ತದೆ ಎಂದು ಹೇಳಿ ಸುಮ್ಮನಾಗಿದ್ದರೆ ಸಾಕಿತ್ತು. ಆದರೆ ಈ ರೀತಿ ಗೊತ್ತಿಲ್ಲದ ವಿಚಾರಗಳ ಬಗ್ಗೆ ಮಾತನಾಡಬಾರದು.

tamil Actress Nayanthara cryptic post goes viral

ಪ್ರಜೆಗಳ ಆರೋಗ್ಯದ ಬಗ್ಗೆ ಸರ್ಜಿಕಲ್ ಸ್ಟ್ರೈಕ್ ರೀತಿ ಸೆಲೆಬ್ರೆಟಿಗಳು ಬಿಟ್ಟಿ ಸಲಹೆಗಳನ್ನು ನೀಡುವುದನ್ನು ತಡೆಯಬೇಕು, ಅದಕ್ಕೆ ಬೇಕಾದ ಕಾನೂನು ಜಾರಿಗೆ ಬರಬೇಕು. ಯಾವುದೇ ಆಧಾರ ಇಲ್ಲದೇ ಈ ರೀತಿ ಜನರಿಗೆ ಏನೇನೋ ಸಲಹೆ ನೀಡಬಾರದು. ಇದು ಜನರ ಆರೋಗ್ಯಕ್ಕೆ ಮಾರಕ ಎಂದು ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

ದಾಸವಾಳದ ಟೀ ಕುಡಿಯುವುದರಿಂದ ಮಧುಮೇಹ, ರಕ್ತದೊತ್ತಡ, ಮೊಡವೆ ಸಮಸ್ಯೆ ದೂರಾಗುತ್ತದೆ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ. ವೈದ್ಯಕೀಯವಾಗಿ ರುಜುವಾತು ಆಗಿಲ್ಲ. ಇದು ಆಕೆಗೆ ಗೊತ್ತಿಲ್ಲ ಎಂದು ಲಿವರ್ ಡಾಕ್ ಬರೆದುಕೊಂಡಿದ್ದಾರೆ.

ಸದ್ಯ ಪರೋಕ್ಷವಾಗಿ ಲಿವರ್ ಡಾಕ್ ಆರೋಪಕ್ಕೆ ನಯನತಾರಾ ಪ್ರತಿಕ್ರಿಯಿಸಿದ್ದಾರೆ. "ಮೂರ್ಖರೊಂದಿಗೆ ವಾದ ಮಾಡಬೇಡಿ. ಅವರು ನಿಮ್ಮನ್ನು ತಮ್ಮ ಹಂತಕ್ಕೆ ಇಳಿಸಿ ಬಳಿಕ ಅನುಭವದ ಮೂಲಕ ಹೊಡೆಯುತ್ತಾರೆ" ಎಂದು ಖ್ಯಾತ ಬರಹಗಾರ ಮಾರ್ಕ್ ಟ್ವೈಯಿನ್ ಕೋಟ್ ಅನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ.

ನಾನು ಹೇಳಿದ್ದಕ್ಕೆ ವಿವರಿಣೆ ಬೇಕಿದ್ದರೆ ಇಲ್ಲಿದೆ ನೋಡಿ ಎಂದು ಮತ್ತೊಂದು ಪೋಸ್ಟ್ ಅನ್ನು ನಯನತಾರ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದಾರೆ. ಒಟ್ಟಾರೆ ಪರೋಕ್ಷವಾಗಿ ಲಿವರ್ ಡಾಕ್‌ಗೆ ಟಾಂಗ್ ಕೊಟ್ಟಿದ್ದಾರೆ. ಸದ್ಯ ನಯನತಾರ ಕೈಯಲ್ಲಿ 10ಕ್ಕೂ ಅಧಿಕ ಸಿನಿಮಾಗಳಿವೆ. ಮದುವೆಯ ಬಳಿಕ ಕೂಡ ನಯನ್ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.

ವಿಘ್ನೇಶ್ ಶಿವನ್ ಕೈ ಹಿಡಿದ ನಯನತಾರಾ ಬಳಿಕ ಸಾರೋಗಸಿ ಪದ್ಧತಿಯಲ್ಲಿ ಅವಳಿ ಮಕ್ಕಳನ್ನು ಪಡೆದಿದ್ದರು. ಮಗುವಿನ ಲಾಲನೆ ಪಾಲನೆ ಜೊತೆ ಜೊತೆಗೆ ದಂಪತಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಯನತಾರ ಇತ್ತೀಚೆಗೆ ಇನ್‌ಸ್ಟಾಗ್ರಾಂ ಖಾತೆ ತೆರೆದಿದ್ದರು. ಆಕೆಗೆ 80 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.

More from Filmibeat

English summary
Never argue with stupid people, Nayanthara Nayanthara takes a dig at The Liver Doc;
Read more about: nayanthara tamil kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X