ಊಟದಲ್ಲಿ ಜಿರಳೆ, ರೆಸ್ಟೋರೆಂಟ್ ವಿರುದ್ಧ ನಟಿ ನಿವೇತಾ ಅಸಮಾಧಾನ

ತಮಿಳು ನಟಿ ನಿವೇತಾ ಪೆತುರಾಜ್ ಸ್ವಿಗ್ಗಿಯಲ್ಲಿ ಊಟ ಬುಕ್ ಮಾಡಿ ತರಿಸಿಕೊಂಡಿದ್ದರು. ಊಟ ತಿನ್ನಲೆಂದು ಪಾರ್ಸಲ್ ತೆರೆದು ನೋಡಿದಾಗ ಆಘಾತವಾಗಿದೆ. ಏಕಂದ್ರೆ ಊಟದಲ್ಲಿ ಸತ್ತ ಜಿರಳೆ ಕಂಡು ಬಂದಿದೆ. ಈ ಫೋಟೋವನ್ನು ಬುಧವಾರ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ ನಟಿ ರೆಸ್ಟೋರೆಂಟ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

''ಸ್ವಿಗ್ಗಿ ಮತ್ತು ರೆಸ್ಟೋರೆಂಟ್‌ಗಳು ಯಾವ ಮಾನದಂಡಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ನನಗೆ ತಿಳಿದಿಲ್ಲ. ಇತ್ತೀಚಿನ ದಿನಗಳಲ್ಲಿ ಎರಡು ಬಾರಿ ಊಟದಲ್ಲಿ ಜಿರಳೆ ಕಂಡು ಬಂದಿದೆ. ಈ ರೆಸ್ಟೋರೆಂಟ್‌ಗಳನ್ನು ನಿಯಮಿತವಾಗಿ ಪರಿಶೀಲಿಸುವುದು ಮತ್ತು ಇದಕ್ಕೆ ತಕ್ಕ ದಂಡ ವಿಧಿಸುವ ಕೆಲಸ ಆಗಬೇಕಿದೆ'' ಎಂದು ನಿವೇತಾ ಆಗ್ರಹಿಸಿದ್ದಾರೆ.

'ಮೂನ್‌ಲೈಟ್‌ ಟೇಕ್‌ಅವೇ' ರೆಸ್ಟೋರೆಂಟ್ ವಿರುದ್ಧ ನಾನೊಬ್ಬಳೆ ಅಲ್ಲ, ಬಹಳಷ್ಟು ಜನರು ಅಸಮಾಧಾನ ಹೊಂದಿದ್ದಾರೆ. ಅವರಿಗು ಇಂತಹ ಅನುಭವಗಳ ತುಂಬಾ ಸಲ ಆಗಿದೆ. ಕೂಡಲೇ ಈ ರೆಸ್ಟೋರೆಂಟ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ನಟಿ ಒತ್ತಾಯಿಸಿದ್ದಾರೆ.

Tamil Actress Nivetha Pethuraj Finds Cockroach in Her Food

ಇನ್ನು ಸ್ವಿಗ್ಗಿ ಆಪ್‌ 'ಮೂನ್‌ಲೈಟ್‌ ಟೇಕ್‌ಅವೇ' ರೆಸ್ಟೋರೆಂಟ್‌ನ ಜೊತೆಗಿನ ಒಪ್ಪಂದವನ್ನು ಕೈ ಬಿಡಬೇಕು ಎಂದು ನಟಿ ಕೋರಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ವಿಗ್ಗಿ ಸಂಸ್ಥೆ ನಟಿ ನಿವೇತಾ ಬಳಿ ಕ್ಷಮೆ ಕೇಳಿದೆ. ಹಾಗೂ ಈ ಕುರಿತು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದೆಯಂತೆ.

Recommended Video

Sudha Murty ಪ್ರಕಾರ ಸಿನಿಮಾವನ್ನ ಥಿಯೇಟರ್ನಲ್ಲೇ ನೋಡ್ಬೇಕು ಯಾಕೆ ಗೊತ್ತಾ? | Oneindia Kannada

English summary
Tamil actress nivetha pethuraj finds cockroach in her food, she complains to swiggy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X