ಡಿಪ್ರೆಷನ್ ನಲ್ಲಿ 'ಕಿರಾತಕ' ಸುಂದರಿ: ನಟಿ ಒವಿಯಾ ಹೇಳಿದ್ದೇನು?

Recommended Video

ಕಿರಾತಕ ನಟಿ ನಿಜಕ್ಕೂ ಡಿಪ್ರೆಷನ್ ಗೆ ಹೋದ್ರಾ..? | Kirataka | Depression | Filmibeat Kannada

ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಒವಿಯಾ ಹೆಸರು ಕೇಳಿರುತ್ತೀರಾ ಅಲ್ವಾ. ಒವಿಯಾ ಎನ್ನುವುದಕ್ಕಿಂತ ಯಶ್ ಅಭಿನಯದ ಕಿರಾತಕ ಸಿನಿಮಾದ ನಾಯಕಿ ಅಂದರೆ ಥಟ್ ಅಂತ ಗೊತ್ತಾಗುತ್ತೆ. ಇತ್ತೀಚಿಗೆ ಒವಿಯಾ ಹೆಸರು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಅಂದ್ಹಾಗೆ ಒವಿಯಾ ಮತ್ತೆ ಕನ್ನಡಕ್ಕೆ ಬಂದ್ರಾ ಅಂತ ಅಂದ್ಕೋಬೇಡಿ.

ಒವಿಯಾ ಇತ್ತೀಚಿಗೆ ಡಿಪ್ರೆಷನ್ ಗೆ ಒಳಗಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಸಾಕಷ್ಟು ಸಿನಿಮಾಗಳಲ್ಲನ್ನು ಮಾಡಿರುವ ಒವಿಯಾ ಇತ್ತೀಚಿಗೆ ಅವಕಾಶಗಳಿಲ್ಲದೆ ಡಿಪ್ರೆಷನ್ ಗೆ ಹೋಗಿದ್ದಾರೆ, ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಪಟ್ಟಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಈಗ ಒವಿಯಾ ಪ್ರತಿಕ್ರಿಯೆ ನೀಡಿದ್ದಾರೆ.

ಒವಿಯಾ ಟ್ವೀಟ್ ಗೊಂದಲ

ಒವಿಯಾ ಟ್ವೀಟ್ ಗೊಂದಲ

"ಜೀವನಕ್ಕೆ ಯಾವುದೆ ಅರ್ಥವಿಲ್ಲ" ಎನ್ನುವ ಒವಿಯಾ ಟ್ವೀಟ್ ಆಕೆಯ ಮನಸ್ಥಿಯ ಬಗ್ಗೆ ಗೊಂದಲ ಮೂಡಲು ಕಾರಣವಾಗಿದೆ. ಈ ಟ್ವೀಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಕಮೆಂಟ್ ಮಾಡಲು ಶುರು ಮಾಡಿದರು. ಆಕೆಯ ಬೆನ್ನಿಗೆ ನಿಂತು ಸಮಾಧಾನ ಪಡಿಸುತ್ತಿದ್ದಾರೆ. ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಒವಿಯಾ ತಕ್ಷಣ ಸ್ಪಷ್ಟನೆ ನೀಡಿದ್ದಾರೆ.

ಒವಿಯಾ ಪ್ರತಿಕ್ರಿಯೆ

ಒವಿಯಾ ಪ್ರತಿಕ್ರಿಯೆ

"ಇದೊಂದು ಕಲ್ಪನೆ ಅಷ್ಟೆ, ನನಗೆ ಏನು ಆಗಿಲ್ಲ" ಎಂದು ಹೇಳಿದ್ದಾರೆ. ಜೊತೆಗೆ "ಭಾವನಾತ್ಮಕ ದುಃಖದ ಭಯವು ಸಂತೋಷದ ಎತ್ತರವನ್ನು ಅನುಭವಿಸುವ ವ್ಯಕ್ತಿಯ ಸಾಮರ್ಥ್ಯವನ್ನು ನಿರ್ಬಂಧಿಸುತ್ತದೆ. ಅನೇಕ ಜನರು ತಮ್ಮ ಇಡೀ ಜೀವನವನ್ನು ಮಧ್ಯ ವಲಯದಲ್ಲಿ ನಡೆಸುತ್ತಾರೆ. ಅವರು ವಿಪರೀತ ಸಂತೋಷವನ್ನು ಅನುಭವಿಸುವುದಿಲ್ಲ ಅಥವಾ ವಿಪರೀತ ದುಃಖವನ್ನು ಅನುಭವಿಸುವುದಿಲ್ಲ. ಸಮಯ ಬದಲಾಗುತ್ತೆ" ಎಂದು ದೀರ್ಘವಾಗಿ ಬರೆದುಕೊಂಡಿದ್ದಾರೆ.

'ಒವಿಯಾ ಆರ್ಮಿ' ಪ್ರಾರಂಭ

'ಒವಿಯಾ ಆರ್ಮಿ' ಪ್ರಾರಂಭ

ಒವಿಯಾ ಸಿನಿಮಾಗಿಂತ ಹೆಚ್ಚಾಗಿ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಹೆಚ್ಚು ಖ್ಯಾತಿ ಗಳಿಸಿದ್ದಾರೆ. ತಮಿಳು ಬಿಗ್ ಬಾಸ್ ಸೀಸನ್ 1 ರಲ್ಲಿ ಒವಿಯಾ ಸ್ಪರ್ಧಿಯಾಗಿ ಭಾಗಿಯಾಗಿದ್ದರು. ಬಿಗ್ ಮನೆಯಲ್ಲಿ ಒವಿಯಾ ಆಟ, ನಡೆದುಕೊಂಡ ರೀತಿ ನೋಡಿ ಫಿದಾ ಆದ ಅಭಿಮಾನಿಗಳು ಆಕೆಯ ಹೆಸರಿನಲ್ಲಿ ಫ್ಯಾನ್ಸ್ ಗ್ರೂಪ್ ಪ್ರಾರಂಭಿಸಿದ್ದಾರೆ. 'ಒವಿಯಾ ಆರ್ಮಿ' ಎನ್ನುವ ಫ್ಯಾನ್ ಪೇಜ್ ಓಪನ್ ಆಗಿದೆ. ಒವಿಯಾ ಟ್ವೀಟ್ ಮಾಡುತ್ತಿದ್ದಂತೆ ಫ್ಯಾನ್ಸ್ ಗಾಬರಿಯಾಗಿ ಟ್ವೀಟ್ ಮಾಡಿ ಸಮಾಧಾನ ಮಾಡಲು ಶುರುಮಾಡಿದ್ದಾರೆ. ಸದ್ಯ ಒವಿಯಾ ಸ್ಪಷ್ಟನೆ ನೀಡುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಒವಿಯಾ ಬಳಿ ಇರುವ ಸಿನಿಮಾಗಳು

ಒವಿಯಾ ಬಳಿ ಇರುವ ಸಿನಿಮಾಗಳು

ಒವಿಯಾ ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು ಚಿತ್ರಗಳ ಜೊತೆಗೆ ಮಲಯಾಳಂ ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ. ಕನ್ನಡದಲ್ಲಿ ಎರಡು ಸಿನಿಮಾಗಳಲ್ಲಿ ಅಭನಯಿಸಿರುವ ಒವಿಯಾಗೆ ಕಿರಾತಕ ಸಿನಿಮಾ ದೊಡ್ಡ ಮಟ್ಟಕ್ಕೆ ಖ್ಯಾತಿ ತಂದು ಕೊಟ್ಟಿದೆ. ಸದ್ಯ ತಮಿಳಿನ 'ರಾಜ ಭೀಮ' ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Tamil Actress Oviya Helen Depression news going on viral in social media. She is is clarification about her health issues.
Read more about: oviya kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X