"ಅಲ್ಲು ಅರ್ಜುನ್ ಜೊತೆ ಲಿಪ್ ಲಾಕ್ ಮಾಡ್ಬೇಕು"; ಆಸೆ ವ್ಯಕ್ತಪಡಿಸಿದ ಈ ತಮಿಳು ನಟಿ ಯಾರು?

By ಫಿಲ್ಮಿಬೀಟ್ ಡೆಸ್ಕ್

ಪುಷ್ಪರಾಜ್ ಅಲಿಯಾಸ್ ಪುಷ್ಪ ಅಲಿಯಾಸ್ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾದ ಅತೀ ದೊಡ್ಡ ಸ್ಟಾರ್ ಆಗಿದ್ದಾರೆ. 'ಪುಷ್ಪ 2' ತೆರೆಕಂಡ ಬಳಿಕ ಐಕಾನಿಕ್ ಸ್ಟಾರ್ ರೇಂಜ್ ದೇಶದ ಉದ್ದಗಲಕ್ಕೂ ಹೋಗಿದ್ದರು ಮಾತ್ರ. ಅಲ್ಲಿ ಅಲ್ಲು ಅರ್ಜುನ್ ಈಗ ಕೇವಲ ತೆಲುಗು ಚಿತ್ರರಂಗಕ್ಕೆ ಮಾತ್ರ ಅಲ್ಲ. ಹಿಂದಿ ಏರಿಯಾಗಳಲ್ಲೂ ಇವರಿಗೆ ಸಿಕ್ಕಾಪಟ್ಟೆ ಕ್ರೇಜ್ ಇದೆ.

'ಪುಷ್ಪ 2' ಸಿನಿಮಾವನ್ನು ದಕ್ಷಿಣ ಭಾರತಕ್ಕಿಂತ ಹೆಚ್ಚಾಗಿ ಉತ್ತರ ಭಾರತದ ಮಂದಿನೇ ಹೆಚ್ಚು ವೀಕ್ಷಿಸಿದ್ದಾರೆ. ಬಾಕ್ಸಾಫೀಸ್‌ನಲ್ಲಿ 'ಪುಷ್ಪ 2' ಗಳಿಸಿದ 1870 ಕೋಟಿ ರೂಪಾಯಿಯಲ್ಲಿ ಬಹುಪಾಲು ಹಣ ಹಿಂದಿ ಬೆಲ್ಟ್‌ನಿಂದಲೇ ಬಂದಿದೆ ಅನ್ನೋದು ಸತ್ಯ. 'ಪುಷ್ಪ 2' ಅಲ್ಲು ಅರ್ಜುನ್‌ಗೆ ಆ ಮಟ್ಟಿಗೆ ಯಶಸ್ಸು ತಂದುಕೊಟ್ಟಿದೆ. 'ಪುಷ್ಪ 2' ಸಕ್ಸಸ್ ಕಾಣುತ್ತಿದ್ದಂತೆ ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡುವುದಕ್ಕೆ ನಿರ್ಮಾಣ ಸಂಸ್ಥೆ ತುದಿಗಾಲಲ್ಲಿ ನಿಂತಿದ್ದಾರೆ.

Tamil Actress Priya Bhavani Shankar Expresses Desire to Romance Allu Arjun in films

ಅದರಲ್ಲೂ ನಾಯಕ ನಟಿಯರು ಅಲ್ಲು ಅರ್ಜುನ್ ಜೊತೆ ನಟಿಸಬೇಕು ಅಂತ ಆಸೆ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆ ನಟಿಸೋ ಅವಕಾಶ ಯಾರಿಗೆ ಸಿಗುತ್ತೋ ಗೊತ್ತಿಲ್ಲ. ಆದರೆ, ಇಲ್ಲೊಬ್ಬ ನಟಿ ಅಲ್ಲು ಅರ್ಜುನ್ ಜೊತೆ ಸಿನಿಮಾದಲ್ಲಿ ಲಿಪ್‌ಲಾಕ್ ಮಾಡಬೇಕು ಅಂತ ಹೇಳಿಕೆ ಕೊಟ್ಟಿದ್ದರು. ಆ ವಿಡಿಯೋ ಈಗ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆ ನಟಿ ಹೇಳಿದ್ದೇನು? ಅಂತ ನೋಡುವುದಾರೇ..

'ಬಾಹುಬಲಿ 2' ಸಿನಿಮಾದ ಬಾಕ್ಸಾಫೀಸ್ ದಾಖಲೆಯನ್ನು 'ಪುಷ್ಪ 2' ಉಡೀಸ್ ಮಾಡಿದಾಗ ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದರು. ಮೊದಲ ದಿನವೇ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಬಾಕ್ಸಾಫೀಸ್‌ನಲ್ಲಿ ಮಾತ್ರ ಕಲೆಕ್ಷನ್ ಭರ್ಜರಿಯಾಗಿ ಆಗುತ್ತಲೇ ಇತ್ತು. 'ಬಾಹುಬಲಿ 2' ಬಾಕ್ಸಾಫೀಸ್ ಕಲೆಕ್ಷನ್ ಅನ್ನು 'ಪುಷ್ಪ 2' ಉಡೀಸ್ ಮಾಡಿದಾಗ ಅಂದಾಗಲೂ ಕೆಲವರು ಅನುಮಾನವನ್ನು ವ್ಯಕ್ತಪಡಿಸಿದ್ದೂ ಇದೆ. ಇವೆಲ್ಲದರ ಮಧ್ಯೆ ಅಲ್ಲು ಅರ್ಜುನ್ ಹೀರೋಯಿನ್‌ಗಳ ಫೇವರಿಟ್ ಸ್ಟಾರ್ ಆಗಿದ್ದಾರೆ.

Tamil Actress Priya Bhavani Shankar Expresses Desire to Romance Allu Arjun in films

ಅಲ್ಲುಅರ್ಜುನ್ ಜೊತೆ ನಟಿಸಬೇಕು. ಅವರೊಂದಿಗೆ ನಟಿಸುವುದಕ್ಕೆ ಒಂದೇ ಒಂದು ಅವಕಾಶ ಸಿಕ್ಕರೆಷ ಸಾಕು ಅಂತ ಹಪಾಹಪಿಸುತ್ತಿದ್ದಾರೆ. ಈ ಕಾರಣಕ್ಕೆ ಅವಕಾಶ ಸಿಕ್ಕಾಗಲೆಲ್ಲಾ ಅಲ್ಲು ಅರ್ಜುನ್ ಜೊತೆ ನಟಿಸ ಆಸೆಯನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ. ಇಂತಹ ನಟಿಯರಲ್ಲಿ ತಮಿಳಿನ ಸ್ಟಾರ್ ನಟಿ ಪ್ರಿಯಾ ಭವಾನಿ ಶಂಕರ್ ಕೂಡ ಒಬ್ಬರು. ಆದರೆ, ಇವರ ಆಸೆ ತುಂಬಾನೇ ದುಬಾರಿ. ಇವರಿಗೆ ಅಲ್ಲು ಅರ್ಜುನ್ ಜೊತೆ ತೆರೆಮೇಲೆ ಲಿಪ್‌ಲಾಕ್ ಮಾಡಬೇಕು ಅಂತ ಆಸೆಯೆಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಪ್ರಿಯಾ ಭವಾನಿ ಶಂಕರ್ ಸಂದರ್ಶನವೊಂದರಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರು. ಸಂತೋಷ್ ಶೋಭನ್ ನಟಿಸಿದ 'ಕಲ್ಯಾಣಂ ಕಮನಿಯಂ' ಸಿನಿಮಾದಲ್ಲಿ ಪ್ರಿಯಾ ಭವಾನಿ ಶಂಕರ್ ನಟಿಸಿದ್ದಾರೆ. ಈ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ತೆಲುಗು ಹಾಗೂ ತಮಿಳು ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಈ ನಟಿಯ ಆಸೆ ಈಡೇರುತ್ತಾ? ಅಲ್ಲು ಅರ್ಜುನ್ ಜೊತೆ ನಟಿಸುತ್ತಾರಾ? ಅನ್ನೋ ಕುತೂಹಲವಿದೆ.

ಪ್ರಿಯಾ ಭವಾನಿ ಶಂಕರ್ ತೆಲುಗಿನಲ್ಲಿ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಕಲ್ಯಾಣಂ ಕಮನಿಯಂ', 'ಭೀಮಾ', 'ಜೀಬ್ರಾ' ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದರೊಂದಿಗೆ ತಮಿಳಿನಲ್ಲಿ ಹೆಚ್ಚಾಗಿ ಸಿನಿಮಾಗಳನ್ನು ನಟಿಸುತ್ತಿದ್ದಾರೆ. 'ಇಂಡಿಯನ್ 2', 'ಡೆಮಾಂಟಿ ಕಾಲೋನಿ 2', 'ಬ್ಲ್ಯಾಕ್' ಅಂತಹ ಸಿನಿಮಾದಲ್ಲಿ ನಟಿಸಿದ್ದಾರೆ.. ಈಗ 'ಇಂಡಿಯನ್ 3'ನಲ್ಲಿ ನಟಿಸಿದ್ದಾರೆ.

More from Filmibeat

English summary
Tamil actress Priya Bhavani Shankar shares her aspiration to star alongside Pushpa 2 actor Allu Arjun in a romantic role;
Read more about: allu arjun actress romance
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X