ರಮ್ಯಾ ಕೈ ಹಿಡಿದ ಲವ್ಲ್ ಧವನ್ ಯಾರು ? ಇವರ ಲವ್ ಸ್ಟೋರಿ ಶುರುವಾಗಿದ್ದು ಹೇಗೆ..?

ಚಿತ್ರರಂಗನೇ ಹಾಗೇ ಅನ್ಸುತ್ತೆ. ಇಲ್ಲಿ ಪ್ರಣಯ ಪಕ್ಷಿಗಳ ಹಾಗೇ ಜೊತೆ ಜೊತೆಯಾಗಿ ಓಡಾಡುತ್ತಾ, ಖಾಸಗಿ ಕಾರ್ಯಕ್ರಮಗಳಲ್ಲಿ ಎಲ್ಲರ ಕಣ್ಣು ಕುಕ್ಕುವಂತೆ ಸುತ್ತಾಡುತ್ತಾ, ಇಲ್ಲ ಸಲ್ಲದ ಮಾತುಗಳು ಕೇಳಿ ಬಂದರು ಕೂಡ ಮೌನ ಮುರಿಯದೇ ಕೊನೆಯದಾಗಿ ನಾವು ಮದುವೆಯಾಗಲಿದ್ದೇವೆ, ಬೇರೆಯಾಗಲಿದ್ದೇವೆ ಎಂಬ ವಿಚಾರಗಳನ್ನು ಅನೇಕರು ಹೇಳಿ ಬಿಡುತ್ತಾರೆ. ಇನ್ನೂ ಕೆಲ ಒಮ್ಮೆ ಜೊತೆಯಾಗಿ ಓಡಾಡಿರುವುದಿಲ್ಲ. ಎಲ್ಲಿಯೂ ಕಾಣಿಸಿಕೊಂಡಿರುವುದಿಲ್ಲ. ಏಕಾಏಕಿ ನಾವು ಮದುವೆಯಾಗಿದ್ದೇವೆ ಎಂದು ಹೇಳುತ್ತಾರೆ. ಇದಕ್ಕೆ ರಮ್ಯಾ ಸದ್ಯದ ಉದಾಹರಣೆ.

ಹೌದು, ರಮ್ಯಾ ಪಾಂಡಿಯನ್. ಪಕ್ಕದ ಕಾಲಿವುಡ್‌ನ ಕಿನ್ನರಿ. ನಿರ್ದೇಶಕ ದೊರೈ ಪಾಂಡಿಯನ್ ಮಗಳು. ಡಮ್ಮಿ ತಪ್ಪಸು ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ ರಮ್ಯಾಗೆ ತಮಿಳು ಚಿತ್ರರಂಗದಲ್ಲಿ ಗೆಲುವು ಸಿಗಲಿಲ್ಲ. 'ಜೋಕರ್' ಚಿತ್ರ ಹೊರತು ಪಡಿಸಿ ಆನ್ ದೇವತಾಯ್', 'ರಾಮೆ ಆಂಡಲುಂ ರಾವನೆ ಅಂದಳುಂ' ಮತ್ತು ಇತರ 'ನನ್ಪಕಲ್ ನೆರತು ಮಾಯಕ್ಕಂ' ಹೀಗೆ ಇವರು ಅಭಿನಯಿಸಿದ್ದ ಯಾವ ಚಿತ್ರ ಕೂಡ ಗೆಲ್ಲಲಿಲ್ಲ. ಇನ್ನೂ ಮುಗಿಲನ್ ಮತ್ತು ಆಕ್ಸಿಡೆಂಟಲ್ ಫಾರ್ಮರ್ ಆಂಡ್ ಕೋ ವೆಬ್ ಸರಣಿಯಲ್ಲಿ ಕಾಣಿಸಿಕೊಂಡರು ಕೂಡ ರಮ್ಯಾ ಅದೃಷ್ಟ ಖುಲಾಯಿಸಲಿಲ್ಲ. ಈ ಕಾರಣಕ್ಕೆ ಬೇಸತ್ತ ರಮ್ಯಾ ಕೊನೆಗೆ ಕಾಣಿಸಿಕೊಂಡಿದ್ದು ಕಿರುತೆರೆಯಲ್ಲಿ. ಕುಕ್ ವಿತ್ ಕೋಮಾಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ಅಡುಗೆ ಕೈಚಳಕವನ್ನ ತೋರಿಸಿದ ರಮ್ಯಾ ಬಿಗ್ ಬಾಸ್ ಮನೆಗೆ ಕೂಡ ಹೋಗಿ ಬಂದರು.

Tamil actress Ramya Pandian marries her boyfriend from Bengaluru here s their love story

ಇಂಥಾ ರಮ್ಯಾ ಇದೀಗ ಲವ್ಲ್‌ ಧವನ್ ಜೊತೆ ಋಷಿಕೇಶ, ಶಿವಪುರಿ ಗಂಗೈಕರೈನಲ್ಲಿ ಸಪ್ತಪದಿ ತುಳಿದಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನೂ ಸರಳವಾಗಿ ನಡೆದ ಈ ಮದುವೆ ಸಮಾರಂಭದಲ್ಲಿ ಲೋವನ್ ಧವನ್ ಮತ್ತು ರಮ್ಯಾ ಪಾಂಡ್ಯಯನ್ ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ಭಾಗಿಯಾಗಿ ನವ ಜೋಡಿಗೆ ಶುಭಾಶಯವನ್ನು ಕೋರಿದ್ದಾರೆ. ಚೆನ್ನೈನಲ್ಲಿ ನವೆಂಬರ್ 15ರಂದು ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.

ಅಂದ್ಹಾಗೇ ರಮ್ಯಾ ಅವರ ಹೃದಯ ಗೆದ್ದ ಲವ್ಲ್ ಧವನ್ ಬೆಂಗಳೂರಿನ ಹುಡುಗ. ಬೆಂಗಳೂರಿನ ರವಿಶಂಕರ್ ಗುರೂಜಿ ಅವರ ಆರ್ಟ್‌ ಆಫ್ ಲಿವಿಂಗ್ ಫೌಂಡೇಶನ್‌ನಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಲೋವನ್ ಯೋಗ ತರಬೇತುದಾರ ಕೂಡ ಹೌದು. ಈ ಯೋಗನೇ ಮದುವೆಯ ಯೋಗ ಕೂಡಿ ಬರಲು ಕಾರಣವಾಗಿರುವುದು ವಿಶೇಷ. ಹೌದು, ಲವ್ಲ್ ಧವನ್ ನಡೆಸಿಕೊಡುವ ಯೋಗ ಶಿಬಿರದಲ್ಲಿ ಕಳೆದ ವರ್ಷ ರಮ್ಯಾ ಭಾಗವಹಿಸಿದ್ದರು. ಯೋಗ ಕಲಿಯಲು ಶುರು ಮಾಡಿದ್ದರು.

ಹೀಗೆ ಯೋಗ ನೆಪದಲ್ಲಿ ಆದ ಪರಿಚಯ ಆ ನಂತರ ಸ್ನೇಹಕ್ಕೆ ತಿರುಗಿತು. ಇಬ್ಬರ ನಡುವೆ ಕಾಲ ಉರುಳಿದಂತೆ ಪ್ರೇಮಾಂಕುರ ಕೂಡ ಆಯಿತು. ಈ ಸಂಬಂಧಕ್ಕೆ ಈಗ ಅಧಿಕೃತವಾಗಿ ಮದುವೆಯ ಮುದ್ರೆ ಬಿದ್ದಿದೆ. ಹೊಸ ಬದುಕಿಗೆ ಜೋಡಿ ಮುನ್ನುಡಿ ಬರೆದಿದೆ. ಸದ್ಯಕ್ಕೆ ರಮ್ಯಾ ಪಾಂಡಿಯನ್ ಮತ್ತು ಲವ್ಲ್ ಧವನ್ ಅವರಿಗೆ ಅನೇಕರು ಶುಭಾಶಯವನ್ನು ಕೋರುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಹರಸಿ ಹಾರೈಸುತ್ತಿದ್ದಾರೆ.

More from Filmibeat

Read more about: marriage actress kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X