14 ನಿಮಿಷ ಖಾಸಗಿ ವೀಡಿಯೋ? ಕೊನೆಗೂ ಮೌನ ಮುರಿದ ನಟಿ ಶ್ರುತಿ ನಾರಾಯಣನ್

ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ತಾರೆಯರ ಖಾಸಗಿ ಫೋಟೊ, ವೀಡಿಯೋ ಲೀಕ್ ಆಗುವುದು ಹೊಸದೇನು ಅಲ್ಲ. ಸದ್ಯ ತಮಿಳು ನಟಿ ಶ್ರುತಿ ನಾರಾಯಣನ್ ಅವರದ್ದು ಎನ್ನಲಾದ ಖಾಸಗಿ ವೀಡಿಯೋ ಸಖತ್ ಸಂಚಲನ ಸೃಷ್ಟಿಸಿದೆ. ಸಾಕಷ್ಟು ಜನ ಈ ವೀಡಿಯೋಗಾಗಿ ತಡಕಾಡುತ್ತಿದ್ದಾರೆ.

ತಮಿಳು ನಟಿ ಶ್ರುತಿ ನಾರಾಯಣನ್ ಕೆಲ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿತ್ರರಂಗದಲ್ಲಿರುವ ಕಾಸ್ಟಿಂಗ್ ಕೌಚ್ ಎನ್ನುವ ಹೀನ ಸಂಸ್ಕೃತಿ ಬಗ್ಗೆ ಗೊತ್ತೇಯಿದೆ. ಪಾತ್ರಕ್ಕಾಗಿ ಮಂಚಕ್ಕೆ ಕರೆಯುವ ಕಾಮುಕರು ಬಣ್ಣದ ಲೋಕದಲ್ಲಿದ್ದಾರೆ. ಅದೇ ರೀತಿ ಶ್ರುತಿ ಬೆತ್ತಲಾಗಿ ಆಡಿಷನ್ ಕೊಟ್ಟಿರುವಂತೆ 14 ನಿಮಿಷಗಳ ವಿಡಿಯೋವೊಂದು ಹರಿದಾಡ್ತಿದೆ. ಆದರೆ ಇದು ನಿಜಕ್ಕೂ ಆಕೆಯ ಖಾಸಗಿ ವೀಡಿಯೋನಾ? ಎನ್ನುವ ಬಗ್ಗೆ ಇದೀಗ ಸ್ಪಷ್ಟನೆ ಸಿಕ್ಕಿದೆ.

Tamil Actress Shruthi Narayanan indirectly reacts on viral video

ತಂತ್ರಜ್ಞಾನ ಬೆಳೆದಂತೆ ಡೀಪ್‌ಫೇಕ್ ವೀಡಿಯೋ, ಫೋಟೊಗಳ ಹಾವಳಿ ಹೆಚ್ಚಾಗಿದೆ. ಅದೇ ರೀತಿ ಬೇರೆ ವೀಡಿಯೋಗೆ ನಟಿ ಶ್ರುತಿ ನಾರಾಯಣನ್ ಅವರ ಮುಖ ಅಂಟಿಸಿ ಕಿಡಿಗೇಡಿಗಳು ವೈರಲ್ ಮಾಡಿದ್ದಾರಾ? ಎನ್ನುವ ಅನುಮಾನ ಕೆಲವರನ್ನು ಕಾಡಿತ್ತು. ಆದರೆ ನಟಿ ಶ್ರುತಿ ಮಾತ್ರ ಈ ವೀಡಿಯೋ ಬಗ್ಗೆ ಬಹಳ ಸಮಯ ಪ್ರತಿಕ್ರಿಯಿಸಿರಲಿಲ್ಲ. ಇನ್ನು ಇಂತಾದೊಂದು ವೀಡಿಯೋ ಬಗ್ಗೆ ಚರ್ಚೆ ಶುರುವಾಗುತ್ತಿದ್ದಂತೆ ಆಕೆ ತನ್ನ ಇನ್‌ಸ್ಟಾಗ್ರಾಮ್ ಖಾತೆ ಪ್ರೈವೇಟ್ ಮಾಡಿಟ್ಟುಕೊಂಡಿದ್ದಾರೆ.

ತಮಿಳಿನ 'ಕಾರ್ತಿಕ ದೀಪಂ' ಎಂಬ ಧಾರಾವಾಹಿಯಲ್ಲಿ ಶ್ರುತಿ ನಾರಾಯಣನ್ ನಟಿಸಿದ್ದರು. 'ಸಿರಗಾದಿಕ ಆಸೈ' ಆಕೆ ನಟಿಸಿದ ಮತ್ತೊಂದು ಕಿರುತೆರೆ ಧಾರಾವಾಹಿ. ಬಳಿಕ ಸಮಂತಾ ನಟನೆಯ 'ಸಿಟಾಡೆಲ್' ಹಾಗೂ ಧನುಷ್ ಅವರ 'ಮಾರಿ' ಚಿತ್ರಗಳಲ್ಲಿ ಕೂಡ ಆಕೆ ಬಣ್ಣ ಹಚ್ಚಿದ್ದಾರೆ.

ಕೆಲ ನಿರ್ಮಾಪಕ, ನಿರ್ದೇಶಕರು ಆಡಿಷನ್ ವೇಳೆ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ, ಬೆತ್ತಲಾಗುವಂತೆ ಹೇಳುತ್ತಾರೆ ಎನ್ನುವ ಆರೋಪ ಆಗಾಗ್ಗೆ ಕೇಳಿಬರುತ್ತದೆ. ಸದ್ಯ ವೈರಲ್ ಆಗಿರುವ ಈ ವೀಡಿಯೋ ಕೂಡ ಕಾಸ್ಟಿಂಗ್ ಕೌಚ್‌ಗೆ ಸಂಬಂಧಿಸಿದ್ದಾ? ಎನ್ನುವ ಚರ್ಚೆ ಶುರುವಾಗಿದೆ. ಅದೇ ನಿಜವಾಗಿದ್ದರೆ ಚಿತ್ರರಂಗದಲ್ಲಿರುವ ಹೀನಾ ಸಂಸ್ಕೃತಿ ಬಟ್ಟಾಬಯಲಾಗುತ್ತದೆ.

ಸೋಶಿಯಲ್ ಮೀಡಿಯಾದಲ್ಲಿ ಶ್ರುತಿ ನಾರಾಯಣನ್ ಬಹಳ ಆಕ್ಟೀವ್ ಆಗಿದ್ದಾರೆ. 57 ಸಾವಿರಕ್ಕೂ ಅಧಿಕ ಫಾಲೋವರ್ಸ್ ಆಕೆಗೆ ಇದ್ದಾರೆ. ಸದ್ಯ ವೈರಲ್ ವೀಡಿಯೋ ಬಗ್ಗೆ ಪರೋಕ್ಷವಾಗಿ ಶ್ರುತಿ ಪ್ರತಿಕ್ರಿಯಿಸಿದ್ದಾರೆ. ಅದು ಅಸಲಿ ಅಲ್ಲ, AI ತಂತ್ರಜ್ಞಾನ ಬಳಸಿ ಮಾಡಿರುವ ಫೇಕ್ ವೀಡಿಯೋ ಎಂದು ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ.

ಶ್ರುತಿ ನೇರವಾಗಿ ಏನನ್ನೂ ಹೇಳಿಲ್ಲ. ಬದಲಿಗೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಒಂದು ವೀಡಿಯೋ ಹಂಚಿಕೊಂಡಿದ್ದಾರೆ. AI ತಂತ್ರಜ್ಞಾನ ಬಳಸಿ ಒಬ್ಬ ವ್ಯಕ್ತಿಯನ್ನು ಹೋಲುವ ವ್ಯಕ್ತಿಯನ್ನು ವೀಡಿಯೋ, ಅಥವಾ ಫೋಟೊದಲ್ಲಿ ಹೇಗೆ ಸೃಷ್ಟಿಸಬಹುದು ಹಾಗೂ ನಿಜವಾದ ವ್ಯಕ್ತಿಯಂತೆ ಕಾಣುವಂತೆ , ಧ್ವನಿಸುವಂತೆ ಹೇಗೆ ಮಾಡಬಹುದು ಎಂಬುದನ್ನು ವಿವರಿಸಿದೆ. ಈ ವೀಡಿಯೋ ಶೇರ್ ಮಾಡಿ ಸದ್ಯ ವೈರಲ್ ಆಗುತ್ತಿರುವ ವೀಡಿಯೋ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಸೀರೆ ಉಟ್ಟು ಕ್ಲಿಕ್ಕಿಸಿರುವ ಒಂದಷ್ಟು ಫೋಟೊಗಳನ್ನು ಕೂಡ ಶ್ರುತಿ ನಾರಾಯಣನ್ ಹಂಚಿಕೊಂಡಿದ್ದಾರೆ. ಆದರೆ ಯಾರು ಕೂಡ ಕಾಮೆಂಟ್ ಮಾಡದಂತೆ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ. ಆ ಮೂಲಕ ನೆಟ್ಟಿಗರ ಚಿತ್ರ ವಿಚಿತ್ರ ಕಾಮೆಂಟ್‌ಗಳನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ.

FAQs
ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು ರಶ್ಮಿಕಾ ಮಂದಣ್ಣ ಡೀಪ್‌ ಫೇಕ್ ವೀಡಿಯೋ

ಡೀಪ್‌ ಫೇಕ್‌ ಫೋಟೊ, ವೀಡಿಯೋ ಹೊಸದೇನು ಅಲ್ಲ. ಆದರೆ ತಂತ್ರಜ್ಞಾನ ಬೆಳೆದಂತೆ ಯಾವುದು ನಿಜ, ಯಾವುದು ಸುಳ್ಳು ಎನ್ನುವ ಅನುಮಾನ ಮೂಡುವ ರೀತಿ ಫೇಕ್ ವೀಡಿಯೋ ಸೃಷ್ಟಿಸಲಾಗುತ್ತಿದೆ. ಒಂದೂವರೆ ವರ್ಷದ ಹಿಂದೆ ನಟಿ ರಶ್ಮಿಕಾ ಮಂದಣ್ಣ ಅವರ ಫೇಕ್ ವೀಡಿಯೋ ಭಾರೀ ವೈರಲ್ ಆಗಿತ್ತು. ಜರಾ ಪಟೇಲ್ ಎಂಬ ಹುಡುಗಿಯ ಹಾಟ್ ವಿಡಿಯೋಗೆ ರಶ್ಮಿಕಾ ಮಂದಣ್ಣ ಮುಖ ಅಂಟಿಸಿ ತೇಲಿ ಬಿಡಲಾಗಿತ್ತು. ಈ ಬಗ್ಗೆ ನಟಿ ರಶ್ಮಿಕಾ ಪ್ರತಿಕ್ರಿಯಿಸಿದ್ದರು. ಇದನ್ನು ಕ್ರಿಯೇಟ್ ಮಾಡಿದ ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದರು.

Filmibeat Entertainment

More from Filmibeat

Read more about: kollywood actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X