"ತುಂಬಾ ಪೊಸೆಸಿವ್ ಆಗಿ ಇರಬಾರದು"; ಸಾಂಸಾರಿಕ ಜೀವನದ ಬಗ್ಗೆ ನಟಿ ಸ್ನೇಹಾ ಮನದಾಳ

ತಮಿಳು ನಟಿ ಸ್ನೇಹಾ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ನಟ ಪ್ರಸನ್ನ ಅವರನ್ನು ಪ್ರೀತಿಸಿ ಮದುವೆ ಆಗಿರುವ ಚೆಲುವೆಗೆ ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟಿ ಸ್ನೇಹಾ ತಮ್ಮ ಮದುವೆ ಜೀವನದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಯಾರೂ ಕೂಡ ತುಂಬಾ ಪೊಸೆಸಿವ್ ಆಗಿ ಇರಬಾರದು ಎಂದು ಕಿವಿಮಾತು ಹೇಳಿದ್ದಾರೆ.

ಮುಂಬೈನಲ್ಲಿ ಹುಟ್ಟಿದ ಸ್ನೇಹಾ ಓದಿ ಬೆಳೆದಿದ್ದು ದುಬೈನಲ್ಲಿ. 23 ವರ್ಷಗಳ ಹಿಂದೆ ಮಲಯಾಳಂ ಸಿನಿಮಾ ಮೂಲಕ ಸ್ನೇಹಾ ಚಿತ್ರರಂಗಕ್ಕೆ ಬಂದರು. ತಮ್ಮ ಸ್ನಿಗ್ಧ ಸೌಂದರ್ಯ, ಪಕ್ಕದ್ಮನೆ ಹುಡುಗಿಯಂತಹ ಇಮೇಜ್‌ನಿಂದ ಸ್ನೇಹಾ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಇತ್ತೀಚೆಗೆ ಪೋಷಕರ ಪಾತ್ರಗಳಲ್ಲಿ ಕೂಡ ಸ್ನೇಹಾ ನಟಿಸುತ್ತಿದ್ದು ಕನ್ನಡದಲ್ಲಿ 2 ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.

Tamil actress sneha talks about her breakup and Evolution of Marriage life

ಕೆಲ ದಿನಗಳಿಂದ ಸ್ನೇಹಾ- ಪ್ರಸನ್ನ ದಂಪತಿ ಡಿವೋರ್ಸ್ ಪಡೆಯುತ್ತಾರೆ ಎಂದು ಗುಲ್ಲಾಗಿತ್ತು. ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿವೆ, ಇಬ್ಬರೂ ಬೇರೆ ಬೇರೆ ವಾಸಿಸುತ್ತಿದ್ದಾರೆ. ಡಿವೋರ್ಸ್‌ಗೆ ಮುಂದಾಗುತ್ತಿದ್ದಾರೆ ಎನ್ನುವ ಅಂತೆ ಕಂತೆ ಸುದ್ದಿ ಕೇಳಿಬಂತು. ಅದಕ್ಕೆಲ್ಲಾ ಪರೋಕ್ಷವಾಗಿ ಇಬ್ಬರು ಸ್ಪಷ್ಟನೆ ಕೊಟ್ಟರು. ಡಿವೋರ್ಸ್ ಎನ್ನುವುದೆಲ್ಲಾ ಸುಳ್ಳು ಎಂದು ಹೇಳಿದ್ದರು.

ಸಂದರ್ಶನವೊಂದರಲ್ಲಿ ನಟಿ ಸ್ನೇಹಾ ಮಾತನಾಡಿ ತಮ್ಮ ಲವ್ ಬ್ರೇಕಪ್, ಮದುವೆ, ಮಕ್ಕಳು ಹೀಗೆ ಎಲ್ಲಾ ವಿಚಾರಗಳನ್ನು ಹಂಚಿಕೊಂಡಿದ್ದಾರೆ. "ಪೊಸೆಸಿವ್‌ನೆಸ್ ಬೇರೆ. ನಂಬಿಕೆ ಬೇರೆ. ಹೆಚ್ಚು ಪೊಸೆಸಿವ್‌ ಆಗಿಬಿಟ್ಟರೆ ನಂಬಿಕೆ ಬ್ಯಾಲೆನ್ಸ್ ಮಾಡುವುದು ಕಷ್ಟ. ಮತ್ತೊಬ್ಬರಿಗೆ ಅದು ಅರ್ಥವಾಗುವುದಿಲ್ಲ. ಎಲ್ಲಿ ಹೋಗುತ್ತಿದ್ದೀರಾ? ಏನು ಮಾಡುತ್ತಿದ್ದೀರಾ? ಎಂದು ಅದು ಪೊಸೆಸಿವ್‌ನೆಸ್ ಇರುಬಹುದು, ನಂಬಿಕೆಯೂ ಆಗಿರಬಹುದು. ಒಬ್ಬರನ್ನು ಇನ್ನೊಬ್ಬರು ಅರ್ಥಮಾಡಿಕೊಂಡರೆ ಸಮಸ್ಯೆ ಆಗಲ್ಲ. ಇಲ್ಲದಿದ್ದರೆ ತಪ್ಪಾಗುತ್ತದೆ" ಎಂದು ಸ್ನೇಹಾ ಹೇಳಿದ್ದಾರೆ.

"ಏನು ಮಾಡುತ್ತಿದ್ದೇನೆ, ಎಲ್ಲಿ ಹೋಗುತ್ತಿದ್ದೇನೆ, ಎಷ್ಟು ಹೊತ್ತಿಗೆ ಬರುತ್ತೇನೆ ಎನ್ನುವುದನ್ನು ಒಬ್ಬರು ಕೇಳುವುದಕ್ಕೆ ಮುನ್ನ ಇನ್ನೊಬ್ಬರು ಹೇಳಬೇಕು. ಅಲ್ಲಿಗೆ ಹೋದ ಮೇಲೂ ಸಮಯ ಇದ್ದರೆ ಒಮ್ಮೆ ಫೋನ್ ಮಾಡಿ ಮಾತನಾಡಿ. ಊಟ ಆಯ್ತಾ? ಏನು ಮಾಡುತ್ತಿದ್ದೀಯಾ ಅಂತ ಕೇಳಬೇಖು. ಇಂತಹ ವಿಷಯಗಳೇ ಇಬ್ಬರಲ್ಲಿ ನಂಬಿಕೆ ಹೆಚ್ಚಿಸುತ್ತದೆ. ಆರಂಭದಲ್ಲಿ ನಾನು ಸ್ವಲ್ಪ ಪೊಸೆಸಿವ್ ಆಗಿದ್ದೆ. ಹಾಗಂತ ನಂಬಿಕೆ ಇರಲಿಲ್ಲ ಅಂತ ಅಲ್ಲ" ಎಂದಿದ್ದಾರೆ.

Tamil actress sneha talks about her breakup and Evolution of Marriage life

"ಮದುವೆ ಆದಮೇಲೆ ಜೀವನ ನಮಗೂ ಬೋರ್ ಎನಿಸಿತ್ತು. ನಾನು ಸಾಕಷ್ಟು ಜಗಳ ಆಡಿದ್ದೇವೆ. ಜಗಳದ ಬಳಿಕ ಇಬ್ಬರೂ ಡೇಟ್ ನೈಟ್ ಹೋಗುತ್ತೇವೆ. ಆ ಸಮಯದಲ್ಲಿ ಮಾತನಾಡಿ ಎಲ್ಲಾ ಬಗೆಹರಿಸಿಕೊಳ್ಳುತ್ತೇವೆ. ಬಳಿಕ ಮತ್ತೆ ಜೀವನ ಹೀಗೆ ಮುಂದುವರೆಯುತ್ತದೆ. ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳಬೇಕು. ಆಗ ಸಮಸ್ಯೆ ಇರುವುದಿಲ್ಲ"

"ಪ್ರಸನ್ನ ಕೈ ಹಿಡಿಯುವ ಮುನ್ನ ನನಗೆ ಒಂದು ಲವ್ ಬ್ರೇಕಪ್ ಆಗಿತ್ತು. ಆ ಸಮಯದಲ್ಲಿ ನಾನು ಮಾನಸಿಕವಾಗಿ ಸಾಕಷ್ಟು ನೋವು ಅನುಭವಿಸಿದೆ. ಒಂದರ್ಥದಲ್ಲಿ ಖಿನ್ನತೆಗೆ ಒಳಗಾಗಿದ್ದೆ. ಆ ಇಡೀ ವರ್ಷ ನನಗೆ ಬಹಳ ಕೆಟ್ಟದಾಗಿತ್ತು. ಹೊರಗೆ ಸಾಕಷ್ಟು ಜನ ಏನೇನೋ ಮಾತನಾಡುತ್ತಿದ್ದರು. ಈ ಬಗ್ಗೆ ಪೋಷಕರು ನನ್ನ ಜೊತೆ ಚರ್ಚಿಸುತ್ತಿದ್ದರು. ಅದರ ನಡುವೆ ಸಿನಿಮಾಗಳಲ್ಲಿ ನಟಿಸುತ್ತಿದ್ದೆ. ಅಚ್ಚರಿ ಅಂದ್ರೆ ಅದೇ ವರ್ಷ ನನ್ನ ನಟನೆಗೆ ರಾಜ್ಯಪ್ರಶಸ್ತಿ ಸಿಕ್ಕಿತ್ತು. ಆ ವರ್ಷವನ್ನು ಮರೆಯುವುದಕ್ಕೆ ಸಾಧ್ಯವಿಲ್ಲ" ಎಂದು ಸ್ನೇಹಾ ಹೇಳಿದ್ದಾರೆ.

ಕನ್ನಡದ 'ರವಿಶಾಸ್ತ್ರಿ' ಚಿತ್ರದಲ್ಲಿ ಸ್ನೇಹಾ ನಾಯಕಿಯಾಗಿ ನಟಿಸಿದ್ದರು. ಕ್ರೇಜಿ ರವಿಚಂದ್ರನ್‌ಗೆ ಜೋಡಿ ಆಗಿದ್ದರು. ಆ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ಬಳಿಕ 'ಕುರುಕ್ಷೇತ್ರ' ಚಿತ್ರದಲ್ಲಿ ದ್ರೌಪದಿ ಪಾತ್ರದಲ್ಲಿ ಸ್ನೇಹಾ ಬಣ್ಣ ಹಚ್ಚಿದ್ದರು. ದರ್ಶನ್, ಅರ್ಜುನ್ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸಿದ್ದ ಈ ಪೌರಾಣಿಕ ಸಿನಿಮಾ ಹಿಟ್ ಆಗಿತ್ತು.

More from Filmibeat

English summary
Sneha-Prasanna, Tamil actress Sneha, Sneha about her marriage life, Sneha tips to happy marriage life, tamil actress Sneha about her breakup, Sneha breakup depression, tamil actress Sneha kannada films,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X