"ನನಗೆ 38 ವರ್ಷ.. ಮಕ್ಕಳು ಮಾಡಿಕೊಳ್ಳುವ ಬಗ್ಗೆ ಹೇಳಲಾರೆ"; ಪ್ರೆಗ್ನೆನ್ಸಿ ಬಗ್ಗೆ ವರಲಕ್ಷ್ಮಿ ಶರತ್ ಕುಮಾರ್ ಹೇಳಿದ್ದೇನು?
ವರಲಕ್ಷ್ಮಿ ಶರತ್‌ಕುಮಾರ್ ದಕ್ಷಿಣ ಭಾರತದ ಜನಪ್ರಿಯ ನಟಿ. ತಮಿಳಿನ ಸ್ಟಾರ್ ನಟ ಶರತ್ ಕುಮಾರ್ ಮೊದಲ ಪತ್ನಿಯ ಪುತ್ರಿ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ವರಲಕ್ಷ್ಮಿ ಶರತ್ ಕುಮಾರ್ ತನ್ನದೇ ವಿಶಿಷ್ಠ ಸ್ಥಾನವನ್ನು ಪಡೆದುಕೊಂಡಿದ್ದಾರೆ. 38 ವರ್ಷದ ನಟಿ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ದಾಂಪತ್ಯ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ.
ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ನಟಿಸಿರುವ ವರಲಕ್ಷ್ಮಿ ಶರತ್ ಕುಮಾರ್ ನಾಯಕಿಯಾಗಿ ಮಿಂಚುವಲ್ಲಿ ವಿಫಲರಾದರು. ಆದರೆ, ಪೋಷಕ ಪಾತ್ರಗಳಲ್ಲಿ, ನೆಗೆಟಿವ್ ಶೇಡ್‌ಗಳಲ್ಲಿ ನಟಿಸಿ ಜನಮನ್ನಣೆ ಪಡೆದುಕೊಂಡಿದ್ದಾರೆ. ಕೆಲವು ಪವರ್‌ಫುಲ್ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಮಿಂಚಿದ್ದೂ ಇದೆ. ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ವರಲಕ್ಷ್ಮಿ ಶರತ್‌ಕುಮಾರ್ ಸಂದರ್ಶನ ನೀಡಿದ್ದು, ಮದುವೆ ಹಾಗೂ ಪ್ರೆಗ್ನೆನ್ಸಿ ಬಗ್ಗೆ ಮಾತಾಡಿದ್ದಾರೆ.

ಶರತ್ ಕುಮಾರ್ ಮೊದಲ ಪತ್ನಿಯ ಮಗಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ ನಿರೀಕ್ಷೆಗಳು ಬೇರೆನೇ ಇದ್ದವು. 'ಪೋಡಾ ಪೋಡಿ' ಸಿನಿಮಾ ಮೂಲಕ ವರಲಕ್ಷ್ಮಿ ಶರತ್‌ಕುಮಾರ್ ನಾಯಕಿಯಾಗಿದ್ದರು. ಬಳಿಕ ಪವರ್‌ಫುಲ್ ಪಾತ್ರಗಳ ಮೂಲಕ ತನ್ನದೇ ಅಭಿಮಾನಿ ಬಳಗವನ್ನು ಹುಟ್ಟಾಕಿಕೊಂಡರು. ತಂದೆಯ ನೆರಳು ಬೀಳದ ಹಾಗೇ ತನ್ನ ಸ್ವಂತ ಪ್ರತಿಭೆಯ ಮೂಲಕ ಚಿತ್ರರಂಗದಲ್ಲಿ ಬೆಳೆದಿದ್ದಾರೆ.
38 ವರ್ಷದ ನಟಿ ನಿಶ್ಚಿತಾರ್ಥದ ಬಳಿಕ ನೀಡಿದ ಸಂದರ್ಶನದಲ್ಲಿ ತಡವಾಗಿ ಮದುವೆ ಆಗುತ್ತಿರುವ ಬಗ್ಗೆ ಹಾಗೂ ಪ್ರಗ್ನೆನ್ಸಿ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ತನಗೆ 22 ವರ್ಷ ಇರುವಾಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. 28 ವರ್ಷಕ್ಕೆ ಮುನ್ನವೇ ಸ್ಟಾರ್ ಹೀರೊಯಿನ್ ಆಗಬೇಕು ಎಂದುಕೊಂಡಿದ್ದರು. ವಯಸ್ಸು 32 ದಾಟುವುದರೊಳಗೆ ಮದುವೆ ಆಗಬೇಕು ಎಂದು ನಿರ್ಧಾರ ಮಾಡಿದ್ದರಂತೆ. ಆದರೆ, ಅವರು ಅಂದುಕೊಂಡಿದ್ದೆಲ್ಲ ನಡೆದಿಲ್ಲ ಎಂದು ಹೇಳಿಕೊಂಡಿದ್ದಾರೆ.

ವರಲಕ್ಷ್ಮಿ ಶರತ್‌ಕುಮಾರ್ ಅಂದುಕೊಂಡಿದ್ದೆಲ್ಲ ನಡೆದಿಲ್ಲ. "ಇವೆಲ್ಲವೂ ಆಕಸ್ಮಿಕವಾಗಿ ನಡೆದು ಹೋಗಿದೆ. 38 ವರ್ಷಕ್ಕೆ ನಾನು ಮದುವೆ ಆಗುತ್ತಿದ್ದೇನೆ. ನನಗೆ ಈಗ ಮಕ್ಕಳಾಗುತ್ತೆ ಎಂದು ನಾನು ಹೇಳಲಾರೆ. ಒಟ್ಟಿನಲ್ಲಿ ನಾನು ಅಂದುಕೊಂಡಿದೆಲ್ಲ ವಿಫಲವಾಗಿದೆ" ಎಂದು ನಿಶ್ಚಿತಾರ್ಥದ ಬಳಿಕ ಇದೇ ಮೊದಲ ಬಾರಿಗೆ ಸಂದರ್ಶನದಲ್ಲಿ ವರಲಕ್ಷ್ಮಿ ಶರತ್‌ಕುಮಾರ್ ಹೇಳಿಕೊಂಡಿದ್ದಾರೆ.
ವರಲಕ್ಷ್ಮಿ ಶರತ್‌ಕುಮಾರ್ ಹುಟ್ಟಿದ್ದು ಬೆಂಗಳೂರಿನಲ್ಲಿಯೇ. ಆದರೆ, ವಿದ್ಯಾಭ್ಯಾಸ ಆಗಿದ್ದು ಚೆನ್ನೈನಲ್ಲಿ. ಶಿಕ್ಷಣ ಮುಗಿದ ಬಳಿಕ ಚಿತ್ರರಂಗಕ್ಕೆ ಪ್ರವೇಶ ಮಾಡುವುದಕ್ಕೆ ನಿರ್ಧರಿಸಿದಾಗ, ಅನುಪಮ್ ಖೇರ್ ನಟನಾ ತರಬೇತಿ ಶಾಲೆಯಲ್ಲಿ ಟ್ರೈನಿಂಗ್ ತೆಗೆದುಕೊಂಡು ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವುದಕ್ಕೆ ವರಲಕ್ಷ್ಮಿ ಶರತ್ ಕುಮಾರ್ ತುಂಬಾನೇ ಪ್ರಯತ್ನ ಪಟ್ಟಿದ್ದಾರೆ.
ಇತ್ತೀಚೆಗೆ ಮುಂಬೈನಲ್ಲಿ ವರಲಕ್ಷ್ಮಿ ತನ್ನ ಬಹುಕಾಲದ ಗೆಳೆಯ ನಿಕೋಲಾಯ್ ಸಚ್‌ದೇವ್ ಜೊತೆ ನಿಶ್ವಿತಾರ್ಥ ಮಾಡಿಕೊಂಡಿದ್ದರು. ಆದರೆ, ಮದುವೆ ಯಾವಾಗ ಅನ್ನೋದನ್ನು ಇನ್ನೂ ಬಿಟ್ಟಿಕೊಟ್ಟಿಲ್ಲ. ನಿಶ್ಚಿತಾರ್ಥದ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರು ನಿಕೋಲಾಯ್ ಸಚ್‌ದೇವ್ ಮೊದಲನೇ ಮದುವೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.


Click it and Unblock the Notifications











