For Quick Alerts
  ALLOW NOTIFICATIONS  
  For Daily Alerts

  ತಮಿಳು ಬಿಗ್‌ಬಾಸ್ 4: ಸ್ಪರ್ಧಿಗಳ ಮಾಹಿತಿ ಮತ್ತು ಹಿನ್ನೆಲೆ

  |

  ತಮಿಳು ಬಿಗ್‌ಬಾಸ್ 4 ಭಾನುವಾರ ರಾತ್ರಿಯಿಂದ ಆರಂಭವಾಗಿದೆ. ಕಮಲ್‌ ಹಾಸನ್ ನಡೆಸಿಕೊಡುತ್ತಿರುವ ಬಿಗ್‌ಬಾಸ್‌ ತಮಿಳಿನ ನಾಲ್ಕನೇ ಸೀಸನ್ ಇದಾಗಿದೆ.

  ಈಗಾಗಲೇ ತೆಲುಗು ಬಿಗ್‌ಬಾಸ್ ಆರಂಭವಾಗಿದ್ದು, ನಿರೀಕ್ಷೆಯಂತೆಯೇ ಒಳ್ಳೆಯ ಟಿಆರ್‌ಪಿ ಪಡೆದುಕೊಂಡಿದೆ. ಕಳೆದ ತೆಲುಗು ಬಿಗ್‌ಬಾಸ್ ಸೀಸನ್‌ಗಳಿಗಿಂತಲೂ ಹೆಚ್ಚಿನ ವೀಕ್ಷಕರನ್ನು ಸೆಳೆದಿದೆ ಈ ಬಾರಿಯ ಬಿಗ್‌ಬಾಸ್.

  ಹಾಗಾಗಿ ತಮಿಳು ಬಿಗ್‌ಬಾಸ್‌ ಮೇಲೆ ಸಹ ಎಲ್ಲರ ಕಣ್ಣು ನೆಟ್ಟಿದೆ. ಅದರಂತೆಯೇ ಭಾನುವಾರ ರಾತ್ರಿ ಅದ್ಧೂರಿತನದಿಂದಲೇ ಬಿಗ್‌ಬಾಸ್ ಪ್ರಾರಂಭವಾಗಿದೆ. ಸ್ಪರ್ಧಾಳುಗಳು ಬಿಗ್‌ಬಾಸ್ ಮನೆ ಪ್ರವೇಶಿಸಿದ್ದು, ಪ್ರಶಸ್ತಿ ಗೆಲ್ಲಲು ಈಗಾಗಲೇ ಓಟ ಆರಂಭಿಸಿದ್ದಾರೆ.

  ಟಿವಿ ನಿರೂಪಕ, ನಟ ರಿಯೋ ರಾಜಾ

  ಟಿವಿ ನಿರೂಪಕ, ನಟ ರಿಯೋ ರಾಜಾ

  ತಮಿಳು ಬಿಗ್‌ಬಾಸ್ 4 ರ ಮೊದಲ ಸ್ಪರ್ಧಿಯಾಗಿ ರಿಯೋ ರಾಜಾ ಮನೆ ಪ್ರವೇಶಿಸಿದರು. ರಿಯೋ ರಾಜಾ ಟಿವಿ ನಿರೂಪಕರಾಗಿ, ನಟರಾಗಿ ಖ್ಯಾತಿ ಪಡೆದಿದ್ದಾರೆ. ಕಾನುಂ ಕಾಲಂಗಲ್ ಕಲೂರಿಯನ್ ಕತೈ, ಯುವರ್ ಅಟೆನ್ಶನ್ ಪ್ಲೀಸ್, ಕಾಫಿ ಟೀ ಏರಿಯಾ, ಸಾದು ಸಾದು ಚೆನ್ನೈ ರೀತಿಯ ಹಿಟ್ ಶೋ ಗಳನ್ನು ನಡೆಸಿಕೊಟ್ಟಿದ್ದಾರೆ ರಿಯೋ ರಾಜಾ.

  ನಟಿ, ಮಾಡೆಲ್ ಸನಮ್ ಶೆಟ್ಟಿ

  ನಟಿ, ಮಾಡೆಲ್ ಸನಮ್ ಶೆಟ್ಟಿ

  ನಟಿ, ಮಾಡೆಲ್ ಸನಮ್ ಶೆಟ್ಟಿ ಬಿಗ್‌ಬಾಸ್‌ ನ ಎರಡನೇ ಸ್ಪರ್ಧಿಯಾಗಿ ಮನೆ ಪ್ರವೇಶಿಸಿದ್ದಾರೆ. ಮನೆ ಒಳಗೆ ಹೋಗುವ ಮುನ್ನಾ 'ವ್ಯಕ್ತಿಯಾಗಿ ಬೆಳೆಯಲು ಈ ಸ್ಪರ್ಧೆ ಸಹಾಯ ಮಾಡಲಿದೆ' ಎಂದಿದ್ದಾರೆ ಸನಮ್ ಶೆಟ್ಟಿ. ಕಥಂ-ಕಥಂ, ವಿಲಾಸಂ, ಸವಾರಿ ಸಿನಿಮಾಗಳಲ್ಲಿ ನಟಿಸಿದ್ದಾರೆ ಸನಮ್ ಶೆಟ್ಟಿ.

  ಹಿರಿಯ ನಟಿ ರೇಖಾ ಹ್ಯಾರಿಸ್‍

  ಹಿರಿಯ ನಟಿ ರೇಖಾ ಹ್ಯಾರಿಸ್‍

  ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ನಟಿಸಿರುವ ರೇಖಾ ಹ್ಯಾರಿಸ್ ಅಲಿಯಾಸ್ ಸುಮುತಿ ಜೋಸೆಫ್ ಮೂರನೇ ಸ್ಪರ್ಧಿ. ನನಗೆ ಇಷ್ಟಬಂದಂತೆ ಬಿಗ್‌ಬಾಸ್ ಮನೆಯೊಳಗೆ ಇರಲಿದ್ದೇನೆ ಎಂದಿದ್ದಾರೆ ರೇಖಾ.

  ಬಾಡಿಬಿಲ್ಡರ್ ಬಾಲಾ

  ಬಾಡಿಬಿಲ್ಡರ್ ಬಾಲಾ

  ಬಾಡಿ ಬಿಲ್ಡಿಂಗ್‌ನಲ್ಲಿ ಹಲವು ಪ್ರಶಸ್ತಿಗಳನ್ನು ಗಳಿಸಿರುವ ಬಾಲಾ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ. ಇವರು ಅಂತರರಾಷ್ಟ್ರೀಯ ದೇಹದಾರ್ಡ್ಯ ಪಟು.

  ಸುದ್ದಿ ವಾಚಕಿ ಅನಿತಾ ಸಂಪತ್

  ಸುದ್ದಿ ವಾಚಕಿ ಅನಿತಾ ಸಂಪತ್

  ತಮಿಳಿನ ಖ್ಯಾತ ಸುದ್ದಿ ವಾಚಕಿಯರಲ್ಲೊಬ್ಬರಾದ ಅನಿತಾ ಸಂಪತ್ ಸಹ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ. ಈಕೆ ಖ್ಯಾತ ಬರಹಗಾರ ಆರ್‌ಸಿ ಸಂಪತ್ ಪುತ್ರಿ. ಅನಿತಾ, ಪ್ರಭಾಕರನ್ ಎಂಬುವರೊಡನೆ ವಿವಾಹವಾಗಿದ್ದಾರೆ.

  ಟಿವಿ ನಟಿ ಶಿವಾನಿ ನಾರಾಯಣನ್

  ಟಿವಿ ನಟಿ ಶಿವಾನಿ ನಾರಾಯಣನ್

  ಖ್ಯಾತ ಟಿವಿ ನಟಿ ಶಿವಾನಿ ನಾರಾಯಣ್ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ. ಸರವಣನ್ ಮೀನಾಕ್ಷಿ ಸೀಸನ್ 3, ಪಗಲ್ ನಿಲವು, ಕಡೈಕುಟ್ಟಿ ಸಿಂಘಂ, ರೆತ್ತೇಯ್ ರೋಜಾ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ಶಿವಾನಿ ನಾರಾಯಣನ್ ನಟಿಸಿದ್ದಾರೆ.

  ನಟ ಜೀತನ್ ರಮೇಶ್

  ನಟ ಜೀತನ್ ರಮೇಶ್

  ತಮಿಳು ಹಾಗೂ ತೆಲುಗಿನ ಕೆಲವು ಸಿನಿಮಾಗಳಲ್ಲಿ ಜೀತನ್ ರಮೇಶ್ ನಟಿಸಿದ್ದಾರೆ. ಜೀತನ್ ರಮೇಶ್, ನಿರ್ಮಾಪಕ ಆರ್‌ಬಿ ಚೌಧರಿ ಪುತ್ರ. ಮತ್ತು ಖ್ಯಾತ ತಮಿಳು ನಟ ಜೀವಾ ಅವರ ಸಹೋದರ.

  ವಿವಾದಿತ ನಟಿ ರಮ್ಯಾ ಪಾಂಡಿಯನ್, ಫಿಟ್‌ನೆಸ್ ಗುರು ಸಂಯುಕ್ತಾ

  ವಿವಾದಿತ ನಟಿ ರಮ್ಯಾ ಪಾಂಡಿಯನ್, ಫಿಟ್‌ನೆಸ್ ಗುರು ಸಂಯುಕ್ತಾ

  ನಟಿ ರಮ್ಯಾ ಪಾಂಡಿಯನ್ ಸಹ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ. ಅವರ ಕೆಲ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಸಾಕಷ್ಟು ಸುದ್ದಿ ಮಾಡಿದ್ದವು. ತಾಯಂದಿರ ಫಿಟ್‌ನೆಸ್‌ಗೆ ಸಲಹೆ ನೀಡುವ ಜೊತೆಗೆ ಬ್ಯುಸಿನೆಸ್‌ವುಮನ್ ಸಹ ಆಗಿರುವ ಸಂಯುಕ್ತಾ ಸಹ ಬಿಗ್‌ಬಾಸ್ ಮನೆಯಲ್ಲಿದ್ದಾರೆ.

  ನಿರ್ಮಾಪಕ ಸುರೇಶ್ ಚಕ್ರವರ್ತಿ, ಹಾಡುಗಾರ ಆಜೀದ್

  ನಿರ್ಮಾಪಕ ಸುರೇಶ್ ಚಕ್ರವರ್ತಿ, ಹಾಡುಗಾರ ಆಜೀದ್

  ಅಜಿತ್ ಅವರ ಹಲವು ಸಿನಿಮಾಗಳನ್ನು ನಿರ್ಮಿಸಿರುವ ಹಾಗೂ ಸ್ವತಃ ನಟರೂ ಆಗಿರುವ ಸುರೇಶ್ ಚಕ್ರವರ್ತಿ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ. ಇದರ ಜೊತೆಗೆ ಸೂಪರ್ ಸಿಂಗರ್ ಜೂನಿಯರ್ ಸೀಸನ್ 3 ವಿನ್ನರ್ ಆಜೀದ್ ಸಹ ಬಿಗ್‌ಬಾಸ್ ಮನೆಯಲ್ಲಿದ್ದಾರೆ.

  Madhavi । ಅಣ್ಣಾವ್ರ ಜೊತೆ ನಟಿಸಿದ್ದ ಈ ನಟಿ ಇಂದು ಸಾವಿರಾರು ಕೋಟಿಯ ಒಡತಿ | Filmibeat Kannada
  ಹಲವು ನಟ-ನಟಿಯರು

  ಹಲವು ನಟ-ನಟಿಯರು

  ಖ್ಯಾತ ಹಿನ್ನೆಲೆ ಗಾಯಕ ವೇಲ್ ಮುರುಗನ್, ನಟ ಆರೈ ಅರ್ಜುನನ್, ಮಾರ್ಶಲ್ ಆರ್ಟ್ಸ್ ಪ್ರವೀಣ ಸೋಮಶೇಖರ್, ನಟಿ ಗೆಬ್ರಿಲಾ, ರಿಯಾಲಿಟಿ ಶೋ ನಿಂದ ಖ್ಯಾತಿ ಗಳಿಸಿರುವ ನಿಶಾ ಸಹ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ.

  English summary
  Tamil Bigg Boss season 4 started from October 04. Here is the list of contestants and information about them.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X