2024ರಲ್ಲಿ ₹1000 ಕೋಟಿ ನಷ್ಟ ಅನುಭವಿಸಿದ ಇಂಡಸ್ಟ್ರಿ; ಯಾವ ಚಿತ್ರಗಳಿಂದ ಭಾರೀ ನಷ್ಟ?

ಚಿತ್ರರಂಗದಲ್ಲಿ ಸಕ್ಸಸ್ ರೇಟ್ ಬಹಳ ಕಮ್ಮಿ ಇರುತ್ತದೆ. ಪ್ರತಿವರ್ಷ ಬೆರಳೆಣಿಕೆಯಷ್ಟು ಚಿತ್ರಗಳು ಮಾತ್ರ ಸೂಪರ್ ಹಿಟ್ ಆಗುತ್ತವೆ. ಇನ್ನುಳಿದ ಕೆಲ ಚಿತ್ರಗಳು ಹಾಕಿದ ಬಂಡವಾಳ ವಾಪಸ್ ಬಂದರೆ ಹೆಚ್ಚು. ಉಳಿದಂತೆ ಬಹುತೇಕ ಸಿನಿಮಾಗಳು ಸೋಲುತ್ತವೆ. ಆದರೂ ನಿರ್ಮಾಪಕರು ಹಣ ತಂದು ತಂದು ಚಿತ್ರ ನಿರ್ಮಾಣ ಮಾಡುತ್ತಾರೆ.

ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ಚಿತ್ರಗಳ ಬಜೆಟ್, ಸ್ಟಾರ್ ನಟರ ಸಂಭಾವನೆ ದಿಢೀರ್ ಹೆಚ್ಚಾಗಿದೆ. ನಾಲ್ಕೈದು ಭಾಷೆಗಳಲ್ಲಿ ಸಿನಿಮಾ ಬರುವುದರಿಂದ ಕೊಂಚ ರಿಸ್ಕ್ ಮಾಡಿದರೆ ಕೋಟಿ ಕೋಟಿ ದುಡಿಯಬಹುದು ಎನ್ನುವ ಲೆಕ್ಕಾಚಾರ ಕೆಲವರದ್ದು. ಆದರೆ ಚಿತ್ರದಲ್ಲಿ ಧಮ್ ಇಲ್ಲ ಅಂದ್ರೆ ಎಷ್ಟೇ ದೊಡ್ಡ ನಟ ಇದ್ದರೂ ನಿರ್ದೇಶಕರು ಯಾರೇ ಆಗಿದ್ದರೂ ಎಷ್ಟೇ ಹಣ ಸುರಿದರೂ ಸೋಲು ಗ್ಯಾರಂಟಿ.

Tamil cinema suffered an estimated loss of around 1000 crore in 2024

2024ರ ವರ್ಷ ಕೂಡ ಚಿತ್ರರಂಗಕ್ಕೆ ಆಶಾದಾಯಕವಾಗಿರಲಿಲ್ಲ. ಪ್ಯಾನ್ ಇಂಡಿಯಾ ಸಿನಿಮಾಗಲೇ ಮಕಾಡೆ ಮಲಗಿಬಿಟ್ಟವು. ಸೋಶಿಯಲ್ ಮೀಡಿಯಾದ ಜಮಾನದಲ್ಲಿ ಸಿನಿಮಾ ಬಿಡುಗಡೆಯಾದ ಮೊದಲ ದಿನ ಮಾರ್ನಿಂಗ್ ಮುಗಿಯುತ್ತಿದ್ದಂತೆ ಚಿತ್ರದ ಫಲಿತಾಂಶ ಬಂದುಬಿಡ್ತಿದೆ. ಫಸ್ಟ್ ಶೋ ನೋಡಿ ಹೊರ ಬಂದವರು ಕೊಡುವ ರಿವ್ಯೂ ಚಿತ್ರದ ಭವಿಷ್ಯ ನಿರ್ಧರಿಸುವಂತಾಗಿದೆ. ಕಳೆದ ವರ್ಷ ತಮಿಳು ಚಿತ್ರರಂಗಕ್ಕೆ 1000 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗ್ತಿದೆ.

ಕಳೆದ ವರ್ಷ ತಮಿಳಿನಲ್ಲಿ 241 ಸಿನಿಮಾಗಳು ಬಿಡುಗಡೆ ಆಗಿದ್ದವು. ಬಾಕ್ಸಾಫೀಸ್‌ನಲ್ಲಿ ಗೆದ್ದಿದ್ದು ಕೇವಲ 18 ಚಿತ್ರಗಳು ಮಾತ್ರ. ಇನ್ನುಳಿದ 223 ಚಿತ್ರಗಳು ಸೋತಿವೆ. ಅದರಲ್ಲೂ ಸೂರ್ಯ, ರಜನಿಕಾಂತ್, ಕಮಲ್ ಹಾಸನ್ ನಟಿಸಿದ ಸಿನಿಮಾಗಳೇ ಹೆಚ್ಚು ನಷ್ಟ ತಂದೊಡ್ಡಿವೆ ಎಂದು ಹೇಳಲಾಗ್ತಿದೆ. ಅಂದಾಜು 300 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ 'ಕಂಗುವ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಶವ ನಿರ್ದೇಶನದ ಚಿತ್ರದಲ್ಲಿ ಸೂರ್ಯ ಹೀರೊ ಆಗಿ ನಟಿಸಿದ್ದರು. ಚಿತ್ರ 106 ಕೋಟಿ ರೂ. ಮಾತ್ರ ಕಲೆಕ್ಷನ್ ಮಾಡಿತ್ತು.

ಇನ್ನು ಶಂಕರ್ ಹಾಗೂ ಕಮಲ್ ಹಾಸನ್ ಜೋಡಿಯ 'ಇಂಡಿಯನ್- 2' ಮತ್ತೊಂದು ಫ್ಲಾಪ್ ಸಿನಿಮಾ. 250 ಕೋಟಿ ರೂ. ಬಜೆಟ್ ಸಿನಿಮಾ ಗಳಿಸಿದ್ದು 150 ಕೋಟಿ ರೂ. ಎನ್ನಲಾಗ್ತಿದೆ. ಇನ್ನು ರಜನಿಕಾಂತ್- ಅಮಿತಾಬ್ ನಟಿಸಿದ 'ವೆಟ್ಟೆಯಾನ್' ಸಿನಿಮಾ ಕೂಡ ನಷ್ಟ ತಂದಿತ್ತು. ಇದ್ದಿದ್ದರಲ್ಲಿ ದಳಪತಿ ವಿಜಯ್ ನಟಿಸಿದ 'GOAT' ಸಿನಿಮಾ ಗೆದ್ದು ಬೀಗಿತ್ತು. ಭಾರೀ ಬಜೆಟ್ ಸಿನಿಮಾ ಹೇಗೋ ಗೆಲುವಿನ ದಡ ಸೇರಿತ್ತು. ಒಟ್ಟು 241 ಚಿತ್ರಗಳ ಮೇಲೆ 3000 ಕೋಟಿ ರೂ. ಹಣ ಹೂಡಿಕೆ ಮಾಡಲಾಗಿತ್ತು ಎನ್ನುವ ಚರ್ಚೆ ನಡೀತಿದೆ.

Tamil cinema suffered an estimated loss of around 1000 crore in 2024

ಅಂದಹಾಗೆ 2023ರಲ್ಲಿ 'ಜೈಲರ್', 'ಲಿಯೋ', 'ವಾರಿಸು', 'ತುನಿವು', 'ಪೊನ್ನಿಯಿನ್ ಸೆಲ್ವನ್' ಚಿತ್ರಗಳು ಗೆದ್ದಿದ್ದವು. ಅದಕ್ಕೆ ಹೋಲಿಸಿದರೆ 2024ರಲ್ಲಿ ತಮಿಳು ಚಿತ್ರಗಳ ಸಾಧನೆ ಕಮ್ಮಿ ಎನ್ನಬಹುದು. ಕೇವಲ 7% ಚಿತ್ರ ಗೆದ್ದಿದ್ದರೆ ಇನ್ನುಳಿದ 93% ಚಿತ್ರಗಳು ಸೋತು ಸುಣ್ಣವಾಗಿವೆ. ಬಹುತೇಕ ಚಿತ್ರಗಳ ಪ್ರಚಾರಕ್ಕೆ ಬಳಸಿದ ಹಣ ಕೂಡ ವಾಪಸ್ ಬಂದಿಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ.

ಒಂದು ವರ್ಷಕ್ಕೆ 1000 ಕೋಟಿ ರೂ. ನಷ್ಟವಾಗಿದ್ದರೂ ನಿರ್ಮಾಪಕರು ಮತ್ತೆ ಮತ್ತೆ ಸಿನಿಮಾ ಹೇಗೆ ಮಾಡುತ್ತಾರೆ? ಎನ್ನುವ ಚರ್ಚೆ ನಡೀತಿದೆ. ಹೊಸ ಹೊಸ ನಿರ್ಮಾಪಕರು ಹಣ ತಂದು ಸಿನಿಮಾಗಳ ಮೇಲೆ ಹಾಕುತ್ತಿದ್ದಾರೆ. ಕಪ್ಪು ಹಣವನ್ನು ತಂದು ಸಿನಿಮಾ ಮಾಡುತ್ತಾರೆ ಎನ್ನುವ ಆರೋಪವೂ ಇದೆ. ಅದೆಲ್ಲ ಪಕ್ಕಕ್ಕಿಟ್ಟರೆ ಈ ವರ್ಷ ಒಂದಷ್ಟು ಸಿನಿಮಾಗಳು ನಿರೀಕ್ಷೆ ಮೂಡಿಸಿವೆ.

ಅಜಿತ್ ನಟಿಸಿದ 'ವಿಡಮುಯರ್ಚಿ' ಸಿನಿಮಾ ನಿರಾಸೆ ಮೂಡಿಸಿದೆ. ರಜನಿಕಾಂತ್ ನಟನೆ 'ಕೂಲಿ', ಕಮಲ್ ಹಾಸನ್ ಹಾಗೂ ಮಣಿರತ್ನಂ ಜೋಡಿಯ 'ಥಗ್ ಲೈಫ್', ಸೂರ್ಯ 'ರೆಟ್ರೋ', ಶಿವಕಾರ್ತಿಕೇಯನ್ 'ಮದರಾಸಿ', ದಳಪತಿ ವಿಜಯ್ 'ಜನ ನಾಯಗನ್' ಚಿತ್ರಗಳು ಭರವಸೆ ಮೂಡಿಸಿವೆ. ವಿಜಯ್ ಕೊನೆಯ ಸಿನಿಮಾ ಎನ್ನುವ ಕಾರಣಕ್ಕೆ 300 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ 'ಜನ ನಾಯಗನ್' ಸಿದ್ಧವಾಗ್ತಿದೆ.

More from Filmibeat

English summary
Kollywood faced a massive financial setback in 2024, incurring an estimated loss of around ₹1000 crore;
Read more about: kollywood box office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X