ತಮಿಳು ಹಾಸ್ಯನಟ ಮಯಿಲ್ ಸಾಮಿ ನಿಧನ: ಗಣ್ಯರ ಸಂತಾಪ

ದಕ್ಷಿಣ ಭಾರತ ಚಿತ್ರರಂಗಕ್ಕೆ ಮತ್ತೊಂದು ಆಘಾತ ಎದುರಾಗಿದೆ. ನಿನ್ನೆಯಷ್ಟೆ ತೆಲುಗು ನಟ ತಾರಕ ರತ್ನ ಕೊನೆಯುಸಿರೆಳೆದಿದ್ದರು. ಇಂದು ತಮಿಳು ಚಿತ್ರರಂಗದ ಹಾಸ್ಯ ನಟ ಮಯಿಲ್ ಸಾಮಿ(57) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ನಟ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಮಯಿಲ್ ಸಾಮಿ ನಿಧನಕ್ಕೆ ತಮಿಳು ಚಿತ್ರರಂಗ ಕಂಬನಿ ಮಿಡಿದಿದೆ.

ಮಿಮಿಕ್ರಿ ಕಲಾವಿದರಾಗಿದ್ದ ಮಯಿಲ್ ಸಾಮಿ 1984ರಲ್ಲಿ ತಮಿಳು ಚಿತ್ರರಂಗ ಪ್ರವೇಶಿಸಿದರು. ಆರಂಭದಲ್ಲಿ ಅಷ್ಟಾಗಿ ಸಕ್ಸಸ್ ಸಿಗಲಿಲ್ಲ. ನಂತರ ನಿಧಾನವಾಗಿ ಪ್ರೇಕ್ಷಕರ ಗಮನ ಸೆಳೆದರು. 100ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಇಂದು ಬೆಳಗಿನ ಜಾವ ಹೃದಯಾಘಾತದಿಂದ ಮಯಿಲ್ ಸಾಮಿ ನಿಧನರಾಗಿದ್ದಾಗಿ ವರದಿಯಾಗಿದೆ. ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಹಾಸ್ಯ ನಟನನ್ನು ಇಂದು ಬೆಳಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ.

Tamil comedian Mayilsamy Passes away after suffering heart attack

ಥಲಾ ಅಜಿತ್, ದಳಪತಿ ವಿಜಯ್, ಕಮಲ್ ಹಾಸನ್, ರಜನಿಕಾಂತ್, ಸೂರ್ಯ ಸೇರಿದಂತೆ ತಮಿಳಿನ ಸ್ಟಾರ್ ನಟರ ಜೊತೆಗೆ ಮಯಿಲ್ ಸಾಮಿ ತೆರೆ ಹಂಚಿಕೊಂಡಿದ್ದರು. ಕಿರುತೆರೆ ಕಾರ್ಯಕ್ರಮಗಳ ಮೂಲಕವೂ ವೀಕ್ಷಕರಿಗೆ ಹತ್ತರವಾಗಿದ್ದರು. ಕಮಲ್ ಹಾಸನ್, ಧನುಷ್, ತಮಿಳುನಾಡು ಸಿಎಂ ಸ್ಟಾಲಿನ್ ಸೇರಿದಂತೆ ಹಲವರು ಸೋಶಿಯಲ್ ಮೀಡಿಯಾದಲ್ಲಿ ಮಯಿಲ್ ಸಾಮಿ ಅಗಲಿಕೆಗೆ ಸಂತಾಪ ಸೂಚಿಸುತ್ತಿದ್ದಾರೆ. ಗಿಲ್ಲಿ, 2.0, ಕಾಂಚನಾ, ವೀರಂ, ಧೂಳ್ ಇವರು ನಟಿಸಿದ ಕೆಲ ಹಿಟ್ ಸಿನಿಮಾಗಳು.

More from Filmibeat

English summary
Tamil comedian Mayilsamy Passes away after suffering heart attack. He acted More then 100 Movies. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X