ಕೀರ್ತಿ ಸುರೇಶ್ ತಾಯಿ ಮೇನಕಾ ಅಳಿಯಂದ್ರೆ ಕಂಗ್ರಾಟ್ಸ್ ಎಂದ್ರು; ಮೌನ ಮುರಿದ ಹಾಸ್ಯನಟ ಸತೀಶ್
ಮಾಲಿವುಡ್ ಬ್ಯೂಟಿ ಕೀರ್ತಿ ಸುರೇಶ್ ಬ್ಯಾಟು ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ವಾರ ಆಕೆ ನಟಿಸಿದ ತಮಿಳಿನ 'ಸಿರೆನ್' ಸಿನಿಮಾ ತೆರೆಕಂಡಿತ್ತು. ಇನ್ನು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಮಹಾನಟಿ ಹೆಚ್ಚು ಹೆಚ್ಚು ನಟಿಸುತ್ತಾ ಬರುತ್ತಿದ್ದಾರೆ.
ಸಿನಿಮಾ ವಿಚಾರವನ್ನು ಪಕ್ಕಕ್ಕಿಟ್ಟರೆ ಕೀರ್ತಿ ಸುರೇಶ್ ವೈಯಕ್ತಿಕ ಜೀವನ ಪದೇ ಪದೆ ಚರ್ಚೆ ಆಗುತ್ತಿರುತ್ತದೆ. ಮುಖ್ಯವಾಗಿ ಆಕೆಯ ಮದುವೆ, ಡೇಟಿಂಗ್ ವಿಚಾರಕ್ಕೆ ಸಂಬಂಧಿಸಿ ಸಾಕಷ್ಟು ವದಂತಿ ಹರಡುತ್ತಿದೆ. ಎಲ್ಲದಕ್ಕೂ ಸ್ಪಷ್ಟನೆ ಕೊಟ್ಟು ಕೊಟ್ಟು ಕೀರ್ತಿ ಹಾಗೂ ಆಕೆಯ ಪೋಷಕರು ಸುಸ್ತಾಗಿದ್ದಾರೆ.

ಬಹಳ ಹಿಂದೆ ತಮಿಳು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಜೊತೆ ಕೀರ್ತಿ ಸುರೇಶ್ ಪ್ರೀಲಿ ಬಿದ್ದಿದ್ದಾರೆ ಎಂದು ಗುಲ್ಲಾಗಿತ್ತು. ಇಬ್ಬರೂ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದ ಫೋಟೊಗಳು ವೈರಲ್ ಆಗಿತ್ತು. ಈ ಸುದ್ದಿಯನ್ನು ಆಕೆಯ ತಂದೆ ಸುರೇಶ್ ಕುಮಾರ್ ಖಂಡಿಸಿದ್ದರು. ಬಳಿಕ ಉದ್ಯಮಿ, ರಾಜಕೀಯ ನಾಯಕ ಹೀಗೆ ಹಲವರ ಜೊತೆ ಆಕೆಯ ಮದುವೆ ನಿಶ್ಚಯವಾಗಿದೆ ಎನ್ನುವ ವದಂತಿ ಹರಡಿತ್ತು. ಅದೆಲ್ಲ ಸುಳ್ಳು ಎನ್ನುವುದು ಪಕ್ಕಾ ಆಗಿತ್ತು.
ಕೆಲ ತಿಂಗಳ ಹಿಂದೆ ಸ್ನೇಹಿತನಿಗೆ ಕೀರ್ತಿ ಸುರೇಶ್ ಹುಟ್ಟುಹಬ್ಬದ ಶುಭಾಶಯಕ ಕೋರಿ ಪೋಸ್ಟ್ ಮಾಡಿದ್ದರು. ಅದನ್ನು ನೋಡಿ ಆತನೊಂದಿಗೆ ಆಕೆ ಡೇಟಿಂಗ್ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಮದುಎವ ಆಗುತ್ತಾರೆ ಎನ್ನುವ ಅಂತೆ ಕಂತೆ ಸುದ್ದಿ ಹರಿದಾಡಿತ್ತು. ಬಳಿಕ ಈ ಬಗ್ಗೆ ಆಕೆಯೇ ಸ್ಪಷ್ಟನೆ ನೀಡಿದ್ದರು. ಇದೀಗ ಮತ್ತೆ ಮಹಾನಿಟ ಮದುವೆ ವಿಚಾರ ಚರ್ಚೆಗೆ ಬಂದಿದೆ.
ಕೆಲ ವರ್ಷಗಳ ಹಿಂದೆ ತಮಿಳು ಹಾಸ್ಯ ನಟ ಸತೀಶ್ ಜೊತೆ ಕೀರ್ತಿ ಸುರೇಶ್ ಮದುವೆ ಆಗಿದೆ ಎಂದು ಗುಲ್ಲಾಗಿತ್ತು. ಇಬ್ಬರೂ ಸೀಕ್ರೆಟ್ ಆಗಿ ಮದುವೆ ಆಗಿದ್ದಾರೆ ನೋಡಿ ಎಂದು ಫೋಟೊ ವೈರಲ್ ಮಾಡಿದ್ದರು. ಈ ಬಗ್ಗೆ ಮತ್ತೊಮ್ಮೆ ನಟ ಸತೀಶ್ ಪ್ರತಿಕ್ರಿಯೆ ನೀಡಿದ್ದಾರೆ. 'ವಿತೈಕ್ಕರನ್' ಸಿನಿಮಾ ಪ್ರಚಾರದ ಸಮಯದಲ್ಲಿ ಮಾತನಾಡಿದ್ದಾರೆ.

"ದಳಪತಿ ವಿಜಯ್ ನಟಿಸಿದ 'ಭೈರವ' ಚಿತ್ರದಲ್ಲಿ ನಾನು, ಕೀರ್ತಿ ಸುರೇಶ್ ಜೊತೆ ನಟಿಸಿದ್ದೆ. ಸಿನಿಮಾ ಮುಹೂರ್ತ ಸಮಯದಲ್ಲಿ ತಂಡದ ಸದಸ್ಯರೆಲ್ಲ ಹೂವಿನ ಮಾಲೆ ಹಾಕಿಕೊಂಡಿದ್ದೆವು. ಅದೇ ರೀತಿ ನಾವಿಬ್ಬರು ಸಹ ಹಾರ ಧರಿಸಿದ್ದೆವು. ಆದರೆ ಫೋಟೊದಲ್ಲಿ ನಮ್ಮಿಬ್ಬರನ್ನು ಮಾತ್ರ ಹೈಲೆಟ್ ಮಾಡಿ ಕೆಲವರು ವೈರಲ್ ಮಾಡಿಬಿಟ್ಟಿದ್ದರು. ಕೆಲವರು ನಮ್ಮ ಮದುವೆ ಆಗಿಬಿಟ್ಟಿದೆ ಎಂದೆಲ್ಲಾ ಗುಸುಗುಸು ಶುರುವಾಗಿತ್ತು"
"ಆ ಸಮಯದಲ್ಲಿ ಕೀರ್ತಿ ಸುರೇಶ್ ತಾಯಿ ಮೇನಕಾ, ನನಗೆ ಫೋನ್ ಮಾಡಿ ಕಂಗ್ರಾಟ್ಸ್ ಅಳಿಯಂದ್ರೆ ಅಂದ್ರು. ನನಗೂ ಶಾಕ್ ಆಯಿತು. ಆ ಗಾಳಿಸುದ್ದಿಯನ್ನು ಅವರು ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವುದು ಆ ಬಳಿಕವೇ ಗೊತ್ತಾಯಿತು. 2019ರಲ್ಲಿ ನಾನು ಸಿಂಧುನ ಮದುವೆ ಆದ ನಂತರ ಅಷ್ಟೇ ಆ ವದಂತಿಗೆ ಫುಲ್ ಸ್ಟಾಪ್ ಬಿದ್ದಿತ್ತು" ಎಂದು ಸತೀಶ್ ವಿವರಿಸಿದ್ದಾರೆ.
ಕೀರ್ತಿ ಸುರೇಶ್ ತಾಯಿ ಮೇನಕಾ ಒಂದ್ಕಾಲದಲ್ಲಿ ಮಲಯಾಳಂನ ಬಹುಬೇಡಿಕೆಯ ನಟಿಯಾಗಿದ್ದರು. 80ರ ದಶಕದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದರು. ಮಲಯಾಳಂ, ತೆಲುಗು, ತಮಿಳು ಮಾತ್ರವಲ್ಲದೇ ಕನ್ನಡದ ಒಂದೆರಡು ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದರು. ನಿರ್ಮಾಪಕಿಯಾಗಿಯೂ ಕೆಲ ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ.
ಇನ್ನು ಕೀರ್ತಿ ಸುರೇಶ್ ತಂದೆ ಜಿ. ಸುರೇಶ್ ಕುಮಾರ್ ಕೂಡ ಸಾಕಷ್ಟು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ನಿರ್ಮಾಪಕರಾಗಿ ಮಡದಿ ಜೊತೆಗೆ ಮಾಲಿವುಡ್‌ನಲ್ಲಿ ಗುರ್ತಿಸಿಕೊಂಡಿದ್ದಾರೆ.


Click it and Unblock the Notifications











