ಮದುವೆ ಸಂಭ್ರಮದಲ್ಲಿ ಅತ್ತೆಗೆ ಲಿಪ್‌ಲಾಕ್ ಮಾಡಿದ ಹಾಸ್ಯ ನಟನ ಅಳಿಯ!

ಒಂದ್ಕಾಲದಲ್ಲಿ ಸ್ಟ್ಯಾಂಡಪ್ ಕಾಮೆಡಿಯನ್ ಆಗಿದ್ದ ಶಂಕರ್ ಇದೀಗ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಳ್ಳಿಗಳಲ್ಲಿ ರೋಬೊ ಡ್ಯಾನ್ಸ್ ಮಾಡಿ ಜನರ ಮನಗೆದ್ದ ಶಂಕರ್ ಬಳಿಕ ರೋಬೊ ಶಂಕರ್ ಎಂದೇ ಖ್ಯಾತರಾದರು. ಇತ್ತೀಚೆಗೆ ಆತನ ಮಗಳು ಇಂದ್ರಜಾ ಮದುವೆ ನೆರವೇರಿದೆ.

ರೋಬೊ ಶಂಕರ್ ಮಗಳು ಕೂಡ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ದಳಪತಿ ವಿಜಯ್ ನಟನೆಯ 'ಬಿಗಿಲ್' ಚಿತ್ರದಲ್ಲಿ ಪಾಂಡಿಯಮ್ಮ ಆಗಿ ಆಕೆ ಮಿಂಚಿದ್ದರು. ಇನ್ನು 2 ದಶಕಗಳಿಂದ ರೋಬೊ ಶಂಕರ್ ತಮಿಳು ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಪಾ ಪಾಂಡಿ, ವೆಲೈಕಾರನ್, ಇರುಂಬು ತಿರೈ, ಮಾರಿ-2 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

Tamil comedian s son-in-law lip-locked his mother-in-law at the wedding reception

ರೋಬೊ ಶಂಕರ್ ಪತ್ನಿ ಪ್ರಿಯಾಂಕ ಶಂಕರ್. ಇನ್ನು ಇತ್ತೀಚೆಗೆ ರೋಬೊ ಶಂಕರ್ ಅನಾರೋಗ್ಯದಿಂದ ಬಳಲಿದ್ದರು. ಅವರಿಗೆ ಜಾಂಡೀಸ್ ಸಮಸ್ಯೆ ಎದುರಾಗಿತ್ತು. ದಿಢೀರನೆ ದೇಹದ ತೂಕ ಕಮ್ಮಿ ಆಗಿ ತೆಳ್ಳಗಾಗಿದ್ದಾರೆ. ತೆಳ್ಳಗಾದ ಬಳಿಕ ಅವರ ಲುಕ್ ನೋಡಿ ಅಭಿಮಾನಿಗಳು ದಂಗಾಗಿದ್ದರು.

ರೋಬೊ ಶಂಕರ್ ಮಗಳು ಇಂದ್ರಜಾ ಹಾಗೂ ನಿರ್ದೇಶಕ ಕಾರ್ತಿಕ್ ಕೆಲವು ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅವರ ಮದುವೆ ಇತ್ತೀಚೆಗೆ ಚೆನ್ನೈನಲ್ಲಿ ನಡೆಯಿತು. ಕುಟುಂಬಸ್ಥರು ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಮದುವೆ ಅದ್ಧೂರಿಯಾಗಿ ನೆರವೇರಿತು. ಕಮಲ್ ಹಾಸನ್, ಶಿವ ಕಾರ್ತಿಕೇಯನ್ ಸೇರಿದಂತೆ ಸಿನಿಮಾ ತಾರೆಯರು ಹಾಜರಾಗಿದ್ದರು. ಇಂದ್ರಜಾ ಮತ್ತು ಕಾರ್ತಿಕ್ ಮದುವೆ ಫೋಟೊ, ವೀಡಿಯೋಗಳು ಸಖತ್ ವೈರಲ್ ಆಗುತ್ತಿದೆ.

Tamil comedian s son-in-law lip-locked his mother-in-law at the wedding reception

ಮದುವೆ ರಿಸೆಪ್ಷನ್‌ನಲ್ಲಿ ನಡೆದ ಘಟನೆ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಮಧುಮಗ ಕಾರ್ತಿಕ್ ವೇದಿಕೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದರು. ಅದೇ ಸಮಯದಲ್ಲಿ ಹಾಸ್ಯ ನಟ ರೋಬೊ ಶಂಕರ್ ಪತ್ನಿ ಪ್ರಿಯಾಂಕ ಕೂಡ ಹೆಜ್ಜೆ ಹಾಕುತ್ತಿದ್ದರು. ಈ ವೇಳೆ ಕಾರ್ತಿಕ್ ತನ್ನ ಅತ್ತೆ ಪ್ರಿಯಾಂಕಾಗೆ ಲಿಪ್ ಕಿಸ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಅಳಿಯ ಅತ್ತೆಯ ಜೊತೆ ಆ ರೀತಿ ವರ್ತಿಸಿದ್ದು ಸರಿಯಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದೇ ವಿಚಾರ ಕಾಲಿವುಡ್‌ನಲ್ಲಿ ಭಾರೀ ಸದ್ದು ಮಾಡ್ತಿದೆ.

ಅಂದಹಾಗೆ ಕಾರ್ತಿಕ್, ಇಂದ್ರಜಾಗೆ ಸೋದರ ಮಾವ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಈ ಬಗ್ಗೆ ಖುದ್ದಿ ಕಾರ್ತಿಕ್ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದರು. ನಾನು ಪ್ರಿಯಾಂಕ ಅವರ ಸ್ವಂತ ತಮ್ಮ ಅಲ್ಲ. ಅವರು ನನ್ನನ್ನು ತಮ್ಮನಾಗಿ ದತ್ತು ಪಡೆದಿದ್ದರು. ಬಹಳ ಜನ ನಾವಿಬ್ಬರು ಒಡಹುಟ್ಟಿದವರು ಎಂದುಕೊಂಡಿದ್ದಾರೆ ಎಂದಿದ್ದರು. ಅದೆಲ್ಲಾ ಏನೇ ಇದ್ದರೂ ಅತ್ತೆಗೆ ಮಧುಮಗ ಕಾರ್ತಿಕ್ ಲಿಪ್‌ಲಾಕ್ ಮಾಡಿದ್ದು ಮಾತ್ರ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇನ್ನು ಕಾರ್ತಿಕ್ ಚಾರಿಟಬಲ್ ಟ್ರಸ್ಟ್ ನಡೆಸುತ್ತಿದ್ದಾರೆ. ಚಿತ್ರರಂಗದಲ್ಲಿ ನಿರ್ದೇಶಕರಾಗಿಯೂ ಗುರ್ತಿಸಿಕೊಳ್ಳುತ್ತಿದ್ದಾರೆ. ಇಂದ್ರಜಾ ಶಂಕರ್ ತೆಲುಗಿನ ಪಾಗಲ್ ಎನ್ನುವ ಚಿತ್ರದಲ್ಲಿ ಕೂಡ ನಟಿಸಿದ್ದಾರೆ. 'ವಿರುಮಾನ್' ಚಿತ್ರದಲ್ಲಿ ಕಾರ್ತಿ ಜೊತೆ ಪೋಷಕ ಪಾತ್ರದಲ್ಲಿ ಮಿಂಚಿದ್ದಾರೆ. 'ಸರ್ವೈವರ್' ಎನ್ನುವ ತಮಿಳು ರಿಯಾಲಿಟಿ ಶೋನಲ್ಲಿ ಆಕೆ ಭಾಗವಹಿಸಿದ್ದರು.

More from Filmibeat

English summary
Actress husband kissed his mother in law at his wedding reception.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X