For Quick Alerts
  ALLOW NOTIFICATIONS  
  For Daily Alerts

  ತಮಿಳಿನ ಹಾಸ್ಯ ನಟ ನೆಲ್ಲೈ ಶಿವ ಹೃದಯಾಘಾತದಿಂದ ನಿಧನ

  |

  ತಮಿಳಿನ ಜನಪ್ರಿಯ ಹಾಸ್ಯನಟ ನೆಲ್ಲೈ ಶಿವ ಅವರು ಹೃದಯಾಘಾತದಿಂದ ನಿಧನರಾದರು ಎಂದು ತಿಳಿದು ಬಂದಿದೆ. 69 ವರ್ಷದ ನಟ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ನೆಲ್ಲೈ ಶಿವ ಅವರ ಅಂತ್ಯ ಸಂಸ್ಕಾರವನ್ನು ಕುಟುಂಬ ಸದಸ್ಯರು ತಿರುನೆಲ್ವೇಲಿಯಲ್ಲಿ ನಡೆಸಲಿದ್ದಾರೆ.

  ಕಳೆದ ಕೆಲವು ದಿನಗಳಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಕೋವಿಡ್ ಸೋಂಕು, ಹೃದಯಾಘಾತ ಹಾಗೂ ಇನ್ನಿತರೆ ಕಾಯಿಲೆಗಳಿಂದ ನಿಧನರಾಗಿದ್ದಾರೆ.

  ರಾಷ್ಟ್ರಪ್ರಶಸ್ತಿ ಪುರಸ್ಕೃತ ಬರಹಗಾರ, ನಟ ಮಾಡಂಪು ಕುಂಜುಕುಟ್ಟನ್ ಕೊರೊನಾಗೆ ಬಲಿರಾಷ್ಟ್ರಪ್ರಶಸ್ತಿ ಪುರಸ್ಕೃತ ಬರಹಗಾರ, ನಟ ಮಾಡಂಪು ಕುಂಜುಕುಟ್ಟನ್ ಕೊರೊನಾಗೆ ಬಲಿ

  ನೆಲ್ಲೈ ಶಿವ ಅವರು ಅವಿವಾಹಿತರು. 69 ವರ್ಷ ವಯಸ್ಸಾಗಿದ್ದರೂ ಮದುವೆ ಆಗಿರಲಿಲ್ಲ. ಹಾಗಾಗಿ, ಶಿವ ಅವರ ಅಂತಿಮ ವಿಧಿವಿಧಾನಗಳನ್ನು ಸಹೋದರನ ಪುತ್ರ ನೆರವೇರಿಸಲಿದ್ದಾರೆ.

  ನೆಲ್ಲೈ ಶಿವ ಅವರು ನಟ ವಡಿವೇಲು ಅವರ ಜೊತೆಗೆ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೊನೆಯದಾಗಿ ತ್ರಿಷಾ ನಟಿಸಿದ್ದ ' ಪರಮಪದಂ ವಿಲಾಯಟ್ಟು' ಚಿತ್ರದಲ್ಲಿ ಶಿವ ನಟಿಸಿದ್ದರು. ಈ ಚಿತ್ರದ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಿತ್ತು. ವಿಜಯ್ ಟಿವಿಯಲ್ಲಿ ಪ್ರಸಾರವಾಗುವ 'ಪಾಂಡಿಯನ್ ಸ್ಟೋರ್' ಧಾರಾವಾಹಿಯಲ್ಲೂ ಶಿವ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದರು.

  ನಿರ್ದೇಶಕ ಪಾಂಡಿಯರಾಜನ್ ಅವರ 'ಆನ್ ಪಾವಮ್' ಚಿತ್ರದ ಮೂಲಕ ನೆಲ್ಲೈ ಶಿವ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

  :ನಟಿ ರೇಖಾ‌ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮದುವೆ ಮುರಿದು ಬಿದ್ದಿದ್ದು ಯಾಕೆ? | Filmibeat Kannada

  ನಂತರ ಅನ್ಬೆ ಶಿವಂ, ಮಹಾಪ್ರಭು, ವೆಟ್ರಿ ಕೋಡಿ ಕಟ್ಟು, ಕಣ್ಣೂಮ್ ಕಣ್ಣುಮ್ ಮುಂತಾದ ಚಿತ್ರಗಳಲ್ಲಿ ನಟಿಸಿದರು. ಸಾಮಿ, ತಿರುಪಾಚಿ, ಕಿರೀಡಮ್ ಮತ್ತು ಇಮ್ಸಾಯಿ ಅರಸನ್ 23 ಆಮ್ ಪುಲಿಕೇಸಿ ಚಿತ್ರಗಳಲ್ಲೂ ತಮ್ಮ ವಿಶಿಷ್ಠ ನಟನೆಯಿಂದ ಗಮನ ಸೆಳೆದಿದ್ದಾರೆ.

  English summary
  Popular Tamil Comedy Actor Nellai Siva who impressed us in lots of films with his acting skills passed away today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X