For Quick Alerts
  ALLOW NOTIFICATIONS  
  For Daily Alerts

  ಹಸೆಮಣೆ ಏರಿದ ಖ್ಯಾತ ಕಾಮಿಡಿ ನಟ ಯೋಗಿ ಬಾಬು

  |

  ತಮಿಳಿನ ಖ್ಯಾತ ಕಾಮಿಡಿ ನಟ ಯೋಗಿ ಬಾಬು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೆಳತಿ ಮಂಜು ಭಾರ್ಗವಿ ಜೊತೆ ಯೋಗಿ ಸಪ್ತಪದಿ ತುಳಿಸಿದ್ದಾರೆ. ಇಂದು ಬೆಳಗ್ಗೆ ಚೆನ್ನೈನ ತಿರುಪತಿಯ ಮುರುಗನ್ ದೇವಸ್ಥಾನದಲ್ಲಿ ಇಬ್ಬರ ವಿವಾಹ ನಡೆದಿದೆ. ಇದು ಯೋಗಿ ಬಾಬು ಅವರ ಮನೆದೇವರಂತೆ. ಹಾಗಾಗಿ ಅದೆ ಮುರುಗನ್ ದೇವಸ್ಥಾನದಲ್ಲಿಯೆ ಯೋಗಿ ಸಪ್ತಪದಿ ತುಳಿಸಿದ್ದಾರೆ.

  ತೀರ ಸರಳವಾಗಿ ನಡೆದ ವಿವಾಹ ಸಂಭ್ರಮದಲ್ಲಿ ಕುಟುಂಬಸ್ಥರು ಮತ್ತು ತೀರಾ ಆಪ್ತರು ಮಾತ್ರ ಭಾಗಿಯಾಗಿ ನವ ಜೋಡಿಗೆ ಶುಭಾಶಯ ತಿಳಿಸಿದ್ದಾರೆ. ಅಂದ್ಹಾಗೆ ಇಂದು ಸರಳವಾಗಿ ಮತ್ತು ತೀರಾ ಆಪ್ತರ ಸಮ್ಮುಖದಲ್ಲಿ ಮದುವೆಯಾದ ಯೋಗಿ ಗ್ರ್ಯಾಂಡ್ ಆಗಿ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

  ವಿಶಿಷ್ಟವಾಗಿ ನಡೆದ ನಟ ಚೇತನ್-ಮೇಘ ಆರತಕ್ಷತೆಯಲ್ಲಿ ನಟರು, ರಾಜಕಾರಣಿಗಳು ಭಾಗಿ.!ವಿಶಿಷ್ಟವಾಗಿ ನಡೆದ ನಟ ಚೇತನ್-ಮೇಘ ಆರತಕ್ಷತೆಯಲ್ಲಿ ನಟರು, ರಾಜಕಾರಣಿಗಳು ಭಾಗಿ.!

  ಮಾರ್ಚ್ ನಲ್ಲಿ ಆರತಕ್ಷತೆ

  ಮಾರ್ಚ್ ನಲ್ಲಿ ಆರತಕ್ಷತೆ

  ಇಂದು ಬೆಳಗ್ಗೆ ಗೌವ್ಯವಾಗಿ ಹಸೆಮಣೆ ಏರಿರುವ ಯೋಗಿ, ಮುಂದಿನ ತಿಂಗಳು ಚೆನ್ನೈನಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಸ್ನೇಹಿತರು, ಕುಟುಂಬದರ ಜೊತೆಗೆ ಚಿತ್ರರಂಗದ ಗಣ್ಯರನ್ನು ಆಹ್ವಾನಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಯೋಗಿ ಬಾಬು ಕೊನೆಯದಾಗಿ ದರ್ಬಾರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

  ಮಗನ ಮದುವೆ ಮಾಡಿ ಸಂತೋಷ ಪಟ್ಟ ನಟ ದೊಡ್ಡಣ್ಣಮಗನ ಮದುವೆ ಮಾಡಿ ಸಂತೋಷ ಪಟ್ಟ ನಟ ದೊಡ್ಡಣ್ಣ

  ಸೂಪರ್ ಸ್ಟಾರ್ ಜೊತೆ ಅಭಿನಯ

  ಸೂಪರ್ ಸ್ಟಾರ್ ಜೊತೆ ಅಭಿನಯ

  ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ದರ್ಬಾರ್ ಸಿನಿಮಾದಲ್ಲಿ ಯೋಗಿ ಮಿಂಚಿದ್ದಾರೆ. ಈ ಚಿತ್ರದಲ್ಲಿನ ಯೋಗಿ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆಯ ಮಹಾಪೂರವೆ ಹರಿದುಬಂದಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಯೋಗಿ ಇತ್ತೀಚಿಗಷ್ಟೆ ಧನುಷ್ ಅಭಿನಯದ ಕರ್ಣನ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಏನಲ್ಲ ಅಂದರು ಯೋಗಿ ಬಳಿ ಸದ್ಯ 20 ಚಿತ್ರಗಳಿವೆ.

  ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಮೊದಲ ಸಲ' ನಟಿ ಭಾಮಾದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಮೊದಲ ಸಲ' ನಟಿ ಭಾಮಾ

  ನಾಯಕನಾಗಿಯೂ ಮಿಂಚಿದ್ದಾರೆ

  ನಾಯಕನಾಗಿಯೂ ಮಿಂಚಿದ್ದಾರೆ

  ವಿಶೇಷ ಅಂದರೆ ಕಳೆದ ವರ್ಷ 2019ರಲ್ಲಿಯೆ ಯೋಗಿ ಸುಮಾರು 30 ಚಿತ್ರಗಳಲ್ಲಿ ಮಿಂಚಿದ್ದಾರೆ. ಕಾಮಿಡಿ ನಟನಾಗಿ ಮಾತ್ರವಲ್ಲದೆ ನಾಯಕನಾಗಿಯು ಬಣ್ಣಹಚ್ಚಿದ್ದಾರೆ. 'ಧರ್ಮಪ್ರಭು' ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಯೋಗಿ ಯಮನ ಮಗನ ಪಾತ್ರದಲ್ಲಿ ಮಿಂಚಿದ್ದರು. ಆದರೆ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೇಳುವಷ್ಟು ಹೆಸರು ಮಾಡಲಿಲ್ಲ. ಆ ನಂತರ ಗೂರ್ಖಾ ಸಿನಿಮಾದಲ್ಲು ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  ಯೋಗಿ ಬಾಬು ವಿವಾದ

  ಯೋಗಿ ಬಾಬು ವಿವಾದ

  ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿ ಇರುವ ಯೋಗಿ ಬಾಬು ಇತ್ತೀಚಿಗೆ ಒಂದು ವಿವಾದದಲ್ಲಿಯೂ ಸಿಲುಕಿಕೊಂಡಿದ್ದರು. 'ಕಾಕ್ಟೇಲ್' ಸಿನಿಮಾದ ಪೋಸ್ಟರ್ ವಿವಾದಕ್ಕೆ ಕಾರಣವಾಗಿತ್ತು. ಈ ಚಿತ್ರದಲ್ಲಿ ಯೋಗಿ, ಮುರುಗನ್ ದೇವರ ಹಾಗೆ ಕಾಣಿಸಿಕೊಂಡಿದ್ದರು. ಈ ಪೋಸ್ಟರ್ ವಿವಾದ ಹುಟ್ಟುಹಾಕಿದ್ದಲ್ಲದೆ, ಯೋಗಿ ವಿರುದ್ದ ಹಿಂದೂ ಮಕ್ಕಲ್ ಕಚ್ಚಿ ದೂರು ದಾಖಲಿಸಿದ್ದರು.

  English summary
  Tamil Famous Comedy Actor Yogi Babu tie the knot with Manju Bhargavi on February 5th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X