For Quick Alerts
  ALLOW NOTIFICATIONS  
  For Daily Alerts

  ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಸುಲ್ತಾನ್' ಸಿನಿಮಾದ ನಿರ್ದೇಶಕ

  |

  'ಸುಲ್ತಾನ್' ಸಿನಿಮಾ ಮೂಲಕ ಭಾರಿ ನಿರೀಕ್ಷೆ ಮೂಡಿಸಿರುವ ತಮಿಳು ನಿರ್ದೇಶಕ ಭಾಗ್ಯರಾಜ್ ಕಣ್ಣನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ಆಶಾ ಜೊತೆ ಭಾಗ್ಯರಾಜ್ ಹಸೆಮಣೆ ಏರಿದ್ದಾರೆ. ಸೋಮವಾರ ಚೆನ್ನೈನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗ್ಯರಾಜ್ ಮತ್ತು ಆಶಾ ಕೆಲವೇ ಕೆಲವು ಜನರ ಸಮ್ಮುಖದಲ್ಲಿ ಮದುವೆ ಬಂಧನಕ್ಕೆ ಒಳಗಾಗಿದ್ದಾರೆ.

  ಭಾಗ್ಯರಾಜ್ ಮತ್ತು ಆಶಾ ಇಬ್ಬರು ಸರಳವಾಗಿ ಹಸೆಮಣೆ ಏರಿದ್ದಾರೆ. ಕುಟುಂಬದವರು ಮತ್ತು ತೀರಾ ಆಪ್ತರು ಮಾತ್ರ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ನವಜೋಡಿಗೆ ಆಶೀರ್ವಾದ ಮಾಡಿದ್ದಾರೆ. ಚಿತ್ರರಂಗದ ಗಣ್ಯರಾದ ನಟ ಶಿವಕಾರ್ತಿಕೇಯನ್ ಸೇರಿದಂತೆ ಕೆಲವು ನಟರು ಮಾತ್ರ ಮದುವೆಯಲ್ಲಿ ಪಾಲ್ಗೊಂಡಿದ್ದರು.

  ರಶ್ಮಿಕಾ ಮಂದಣ್ಣ ಅಭಿನಯದ ಮೊದಲ ತಮಿಳು ಸಿನಿಮಾದ ಲುಕ್ ರಿಲೀಸ್ರಶ್ಮಿಕಾ ಮಂದಣ್ಣ ಅಭಿನಯದ ಮೊದಲ ತಮಿಳು ಸಿನಿಮಾದ ಲುಕ್ ರಿಲೀಸ್

  ನಿರ್ದೇಶಕ ಭಾಗ್ಯರಾಜ್ ಕಣ್ಣನ್ ನಟ ಶಿವಕಾರ್ತಿಕೇಯನ್ ಮತ್ತು ಕೀರ್ತಿ ಸುರೇಶ್ ಅಭಿನಯದ ಸೂಪರ್ ಹಿಟ್ ರೆಮೋ ಸಿನಿಮಾದ ಮೂಲಕ ಕಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಭಾಗ್ಯರಾಜ್ ಮೊದಲ ಸಿನಿಮಾದ ನಾಯಕ ಶಿವಕಾರ್ತಿಕೇಯನ್ ಮದುವೆಯಲ್ಲಿ ಭಾಗಿಯಾಗಿರುವುದು ವಿಶೇಷವಾಗಿತ್ತು.

  ನಿರ್ದೇಶಕ ಭಾಗ್ಯರಾಜ್ ಈ ಮೊದಲು ಆಟ್ಲೀ ನಿರ್ದೇಶನದ ರಾಜ-ರಾಣಿ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಬಳಿಕ 2016ರಲ್ಲಿ ರಿಲೀಸ್ ಆದ ರೆಮೋ ಸಿನಿಮಾ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡರು. ಇದೀಗ ನಟ ಕಾರ್ತಿ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಸುಲ್ತಾನ್ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ.

  ನಟ ಕಾರ್ತಿ ಸಾಮಾಜಿಕ ಜಾಲತಾಣದ ಮೂಲಕ ಭಾಗ್ಯರಾಜ್ ಕಣ್ಣನ್ ಗೆ ವಿಶ್ ಮಾಡಿದ್ದಾರೆ. ಮದುವೆಯ ಶುಭಾಶಯಗಳು. ಈ ಹೊಸ ಪಯಣ ಒಗ್ಗಟ್ಟಿನಿಂದ ಮತ್ತು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುತ್ತ ಮತ್ತು ಸಾಕಷ್ಟು ಪ್ರೀತಿಯಿಂದ ತುಂಬಿರಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ' ಎಂದು ಬರೆದುಕೊಂಡಿದ್ದಾರೆ.

  ಭಾಗ್ಯರಾಜ್ ಕಣ್ಣನ್ ನಿರ್ದೇಶನದ ಸುಲ್ತಾನ್ ಸಿನಿಮಾದ ಮೊದಲ ಲುಕ್ ದಸರಾ ಹಬ್ಬದ ಪ್ರಯುಕ್ತ ರಲೀಸ್ ಆಗಿದೆ. ಈ ಸಿನಿಮಾದಲ್ಲಿ ಕಾರ್ತಿ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ರೊಮ್ಯಾಂಟಿಕ್ ಸಿನಿಮಾಗೆ ನಿರ್ದೇಶನ ಮಾಡಿದ್ದ ಭಾಗ್ಯರಾಜ್ ಸುಲ್ತಾನ್ ಮೂಲಕ ಆಕ್ಷನ್ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಂದ್ಹಾಗೆ ಸುಲ್ತಾನ್ ಮೂಲಕ ಭಾಗ್ಯರಾಜ್ ನಟಿ ರಶ್ಮಿಕಾ ಮಂದಣ್ಣ ಅವರನ್ನು ತಮಿಳು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.

  English summary
  Sultan Tamil Movie director Bakkiyaraj Kannan tie the knot with Asha on Monday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X