ಸೂರ್ಯ ನಟನೆಯ 'ಕಾಪ್ಪಾನ್' ಚಿತ್ರದ ನಿರ್ದೇಶಕ ಕೆ.ವಿ ಆನಂದ್ ನಿಧನ
ತಮಿಳು ಸಿನಿಮಾರಂಗದ ಖ್ಯಾತ ನಿರ್ದೇಶಕ ಕೆ.ವಿ ಆನಂದ್ ಇಂದು (ಏಪ್ರಿಲ್ 30) ಬೆಳಗ್ಗೆ 3 ಗಂಟೆ ಸುಮಾರಿಗೆ ಚೆನ್ನೈನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 54 ವರ್ಷದ ಖ್ಯಾತ ನಿರ್ದೇಶಕ ಕೆ.ವಿ ಆನಂದ್ ಅವರ ಹಠಾತ್ ನಿಧನದ ಸುದ್ದಿ ತಮಿಳು ಚಿತ್ರರಂಗಕ್ಕೆ ಶಾಕ್ ನೀಡಿದೆ.
ಫೋಟೋ ಜರ್ನಲಿಸ್ಟ್ ಆಗಿ ವೃತ್ತಿ ಜೀವನ ಪ್ರಾರಂಭಿಸಿದ್ದ ಆನಂದ್ ಬಳಿಕ ಛಾಯಾಗ್ರಾಹಕರಾಗಿ ಮಲಯಾಳಂ ಚಿತ್ರರಂಗ ಪ್ರವೇಶ ಮಾಡಿದ್ದರು. ಮಲಯಾಳಂ, ಹಿಂದಿ, ತಮಿಳು ಸಿನಿಮಾರಂಗದಲ್ಲಿ ಕೆಲಸ ಮಾಡಿರುವ ಆನಂದ್ ಬಳಿಕ 2005ರಲ್ಲಿ ತಮಿಳಿನ ಕನ ಕಂದೇನ್ ಸಿನಿಮಾ ಮೂಲಕ ನಿರ್ದೇಶಕರಾಗಿ ಎಂಟ್ರಿ ಕೊಟ್ಟಿದ್ದರು.
ಬಳಿಕ ಆನಂದ್ ತಮಿಳಿನಲ್ಲಿ ಅಯಾನ್, ಕೋ, ಮಾಟ್ರಾನ್, ಅನೆಗನ್ ಕಾಪ್ಪಾನ್ ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. 2019ರಲ್ಲಿ ಬಿಡುಗಡೆಯಾದ ಸೂರ್ಯ ನಟನೆಯ ಕಾಪ್ಪಾನ್ ಸಿನಿಮಾ ಕೆ.ವಿ ಆನಂದ್ ದೇಶದ ಗಮನ ಸೆಳೆದಿದ್ದರು. ರೈತರ ಜಮೀನಿಗೆ ಮಿಡತೆ ದಾಳಿ ಇಡುವ ಬಗ್ಗೆ ಇದ್ದ ಸಿನಿಮಾವಾಗಿತ್ತು. ಚಿತ್ರದಲ್ಲಿ ಖ್ಯಾತ ನಟ ಮೋಹನ್ ಲಾಲ್ ಕೂಡ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು.

Recommended Video
ಕೆ.ವಿ ಆನಂದ್ ಚೊಚ್ಚಲ ಸಿನಿಮಾದ ಛಾಯಾಗ್ರಾಹಣ ಅತ್ಯುತ್ತಮ ಛಾಯಾಗ್ರಾಹಕ ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಆನಂದ್ ನಿಧನಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.


Click it and Unblock the Notifications











