ತಮಿಳಿನ ಖ್ಯಾತ ಹಾಸ್ಯ ನಟ ಅಯ್ಯಪ್ಪನ್ ಗೋಪಿ ನಿಧನ
ತಮಿಳಿನ ಖ್ಯಾತ ನಟ ಹಾಸ್ಯ ನಟ ಅಯ್ಯಪ್ಪನ್ ಗೋಪಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ರಜನಿ ಮುರುಗನ್ ಸಿನಿಮಾ ಮೂಲಕ ಖ್ಯಾತಿಗಳಿಸಿದ್ದ ನಟ ಅಯ್ಯಪ್ಪನ್ ಗೋಪಿ ಇನ್ನು ನೆನಪು ಮಾತ್ರ.
ಮಾರಕ ಕೊರೊನಾ ವೈರಸ್ ಹಾವಳಿಯ ನಡುವೆ ದಕ್ಷಿಣ ಭಾರತ ಅನೇಕ ಸಿನಿಮಾ ಮಂದಿ ಕೊನೆಯುಸಿರೆಳೆದಿದ್ದಾರೆ. ಸಾಕಷ್ಟು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇತ್ತೀಚಿಗಷ್ಟೆ ನಟ ಅಯ್ಯಪ್ಪನ್ ಗೋಪಿ ಸ್ನೇಹಿತ ಮತ್ತು ನಟ ಪವನ್ ರಾಜ್ ನಿಧನರಾದ ಬೆನ್ನಲ್ಲೇ ಅಯ್ಯಪ್ಪನ್ ಕೂಡ ಕೊನೆಯುಸಿರೆಳೆದಿರುವುದು ಅಭಿಮಾನಿಗಳಿಗೆ, ಸ್ನೇಹಿತರಿಗೆ ಆಘಾತ ತಂದಿದೆ.
ಅಯ್ಯಪ್ಪನ್ ರಜಿನಿ ಮುರುಗನ್, ಧುಲ್ಲಕು ದುಡ್ಡು ಸೇರಿದಂತೆ ಇನ್ನು ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿ ತಮಿಳು ಪ್ರೇಕ್ಷಕರ ಮನಗೆದ್ದಿದರು. ಅಯ್ಯಪ್ಪನ್ ನಿಧನಕ್ಕೆ ಅಭಿಮಾನಿಗಳು ಮತ್ತು ಸ್ನೇಹಿತರು ಸಂತಾಪ ಸೂಚಿಸುತ್ತಿದ್ದಾರೆ. ಅಯ್ಯಪ್ಪನ್ ನಟನೆ ಜೊತೆಗೆ ನಿರ್ದೇಶಕರಾಗುವ ಕನಸು ಕೂಡ ಕಂಡಿದ್ದರು. ತನ್ನ ಕನಸು ಈಡೇರುವ ಮೊದಲ ಅಯ್ಯಪ್ಪನ್ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

ತಮಿಳು ಸಿನಿಮಾರಂಗ ಇತ್ತೀಚಿಗೆ ಅನೇಕ ಗಣ್ಯರನ್ನು ಕಳೆದುಕೊಂಡಿದೆ. ನಟ ಮಾರನ್, ಪಾಂಡು, ವಿವೇಕ್, ನೆಲ್ಲೈ ಶಿವ, ಚೆಲ್ಲಾದುರೈ, ನಿರ್ದೇಶಕ ಕೆ.ವಿ ಆನಂದ್ ಸೇರಿದಂತೆ ಇನ್ನು ಅನೇಕ ಖ್ಯಾತ ನಾಮರು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.


Click it and Unblock the Notifications











