ಕನ್ನಡಕ್ಕೆ ಜೋಳದ ರೊಟ್ಟಿಯಾದ ತಮಿಳು ಪಿಜ್ಜಾ

ತಮಿಳಿನ ಪೊರಾಲಿ, ಕಾದಲ್ ಅಂಡ್ ಕಲಾವಣಿ, ನಾಡೋಡಿಗಳ್ ಚಿತ್ರಗಳು ಕನ್ನಡಕ್ಕೆ ರೀಮೇಕ್ ಆಗಿವೆ. 'ಪಿಜ್ಜಾ' ಚಿತ್ರ ಲೋ ಬಜೆಟ್ ಚಿತ್ರವಾದರೂ ಕಥೆಯ ದೃಷ್ಟಿಯಿಂದ ವಿಭಿನ್ನ ಪ್ರಯತ್ನ ಎನ್ನಬಹುದು. ಈ ಚಿತ್ರ ಕನ್ನಡಕ್ಕೆ ಭರ್ಜರಿ ಜೋಳದ ರೊಟ್ಟಿಯೇ ಆಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
'ಲವ್ ಗುರು' ಚಿತ್ರವನ್ನು ನಿರ್ದೇಶಿಸಿದ್ದ ಪ್ರಶಾಂತ್ ರಾಜ್ ಅವರು 'ಪಿಜ್ಜಾ' ಚಿತ್ರದ ಕನ್ನಡ ರೀಮೇಕ್ ಹಕ್ಕುಗಳನ್ನು ರು.35 ಲಕ್ಷಕ್ಕೆ ಕೊಂಡುಕೊಂಡಿದ್ದಾರೆ. ಕನ್ನಡಕ್ಕೆ ಹೊಂದುವಂತೆ ಕಥೆಯಲ್ಲಿ ಅಲ್ಪಸ್ವಲ್ಪ ಬದಲಾವಣೆಗಳನ್ನು ಮಾಡಿಕೊಂಡು ಚಿತ್ರವನ್ನು ಆರಂಭಿಸುವುದಾಗಿ ಹೇಳಿದ್ದಾರೆ. ಹಾಗಾಗಿ ಇನ್ನೂ ಚಿತ್ರಕ್ಕೆ ಶೀರ್ಷಿಕೆ, ಪಾತ್ರಗಳ ಆಯ್ಕೆ ಇನ್ನಷ್ಟೇ ನಡೆಯಬೇಕು.
ಅಂದಹಾಗೆ ಕಥೆ ಏನೆಂದರೆ... ಪಿಜ್ಜಾ ಡೆಲಿವರಿ ಬಾಯ್ ಒಬ್ಬ ಗ್ರಾಹಕನೊಬ್ಬನಿಗೆ ಪಿಜ್ಜಾ ಡೆಲಿವರಿ ಮಾಡಲು ಹೋಗಿ ಇಕ್ಕಟ್ಟಿಗೆ ಸಿಕ್ಕಿಬೀಳುವ ಕಥಾವಸ್ತುವೇ ಪಿಜ್ಜಾ. ವಿಜಯ್ ಸೇಥುಪತಿ ಹಾಗೂ ರಮ್ಯಾ ನಂಬೀಸನ್ ಅಭಿನಯದ ಚಿತ್ರಕ್ಕೆ ಕಾರ್ತಿಕ್ ಸುಬ್ಬರಾಜ್ ಆಕ್ಷನ್ ಕಟ್ ಹೇಳಿರುವ ಚಿತ್ರ. ಇದೇ ಚಿತ್ರದ ತೆಲುಗು ರೀಮೇಕ್ ರೈಟ್ಸ್ ರು.72 ಲಕ್ಷಕ್ಕೆ ಮಾರಾಟವಾಗಿವೆ. (ಏಜೆನ್ಸೀಸ್)


Click it and Unblock the Notifications











