twitter
    For Quick Alerts
    ALLOW NOTIFICATIONS  
    For Daily Alerts

    ಹೀರೋಗಳು ಸಂಭಾವನೆ ಕಡಿಮೆ ಮಾಡಿಕೊಳ್ಳಲು ನಿರ್ಮಾಪಕರು ಮನವಿ

    |

    ಕೊರೊನಾ ವೈರಸ್ ಬಿಕ್ಕಟ್ಟು ಚಿತ್ರರಂಗದ ಮೇಲೂ ದೊಡ್ಡ ಪರಿಣಾಮ ಬೀರಿದೆ. ಆರು ತಿಂಗಳು ಚಿತ್ರೀಕರಣ ನಡೆದಿಲ್ಲ, ಚಿತ್ರಮಂದಿರಲ್ಲಿ ಸಿನಿಮಾ ಪ್ರದರ್ಶನ ಆಗಿಲ್ಲ. ಕಾರ್ಮಿಕರಿಗೆ ಸಂಬಳ ನೀಡಿಲ್ಲ. ಶೂಟಿಂಗ್ ಉಪಕರಣಗಳಿಗೆ ಬಾಡಿಗೆ ಕಟ್ಟಲು ದುಡ್ಡಿಲ್ಲ. ಈಗ ನಿಧಾನವಾಗಿ ಇಂಡಸ್ಟ್ರಿ ಚೇತರಿಕೆ ಕಾಣುತ್ತಿದೆ. ಚಿತ್ರಮಂದಿರಗಳು ತೆರೆದಿದೆ. ಆದರೆ, ಪ್ರೇಕ್ಷಕರ ಕೊರತೆ ಎದುರಾಗಿದೆ.

    ಸಿನಿಮಾ ರಿಲೀಸ್ ಮಾಡಿದ್ರೆ ಕಲೆಕ್ಷನ್ ಆಗಲ್ಲ ಎಂಬ ಆತಂಕ ಕಾಡುತ್ತಿದೆ. ಹಾಕಿದ ಬಂಡವಾಳವೂ ವಾಪಸ್ ಆಗುತ್ತಾ ಎಂಬ ಚಿಂತೆಗೆ ನಿರ್ಮಾಪಕರು ಬಿದ್ದಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಕಲಾವಿದರು, ತಂತ್ರಜ್ಞರು ನಿರ್ಮಾಪಕರ ಸಹಾಯಕ್ಕೆ ನಿಲ್ಲಬೇಕು, ಸಂಭಾವನೆ ಕಡಿಮೆ ಮಾಡಿಕೊಳ್ಳಬೇಕು ಎಂದು ತಮಿಳು ನಿರ್ಮಾಪಕರ ಸಂಘ ಮನವಿ ಮಾಡಿದೆ. ಮುಂದೆ ಓದಿ...

    ಶೇಕಡಾ 30ರಷ್ಟು ಸಂಭಾವನೆ ಕಡಿತ

    ಶೇಕಡಾ 30ರಷ್ಟು ಸಂಭಾವನೆ ಕಡಿತ

    ತಮಿಳು ನಿರ್ಮಾಪಕರ ಸಂಘ (TFAPA-tamil film active producers association) ಕಲಾವಿದರು ಹಾಗೂ ತಂತ್ರಜ್ಞರು ತಮ್ಮ ಸಂಭಾವನೆಯಲ್ಲಿ ಶೇಕಡಾ 30 ರಷ್ಟು ಕಡಿತ ಮಾಡಿಕೊಳ್ಳುವುದರ ಮೂಲಕ ಸಂಕಷ್ಟದಲ್ಲಿರುವ ನಿರ್ಮಾಪಕರ ಜೊತೆಗೆ ನಿಲ್ಲಬೇಕು ಎಂದು ಮನವಿ ಮಾಡಿದೆ.

    ಚಿತ್ರಮಂದಿರ ರೀ ಓಪನ್: 24 ನಿಯಮ ಪಾಲಿಸುವಂತೆ ಕೇಂದ್ರ ಸೂಚನೆಚಿತ್ರಮಂದಿರ ರೀ ಓಪನ್: 24 ನಿಯಮ ಪಾಲಿಸುವಂತೆ ಕೇಂದ್ರ ಸೂಚನೆ

    ದುಬಾರಿ ಕಲಾವಿದರು-ತಂತ್ರಜ್ಞರು ಮಾಡಿ

    ದುಬಾರಿ ಕಲಾವಿದರು-ತಂತ್ರಜ್ಞರು ಮಾಡಿ

    ಎಲ್ಲ ಕಲಾವಿದರು ಹಾಗೂ ತಂತ್ರಜ್ಞರು ಸಂಭಾವನೆ ಕಡಿತ ಮಾಡುವ ಅವಶ್ಯಕತೆ ಇಲ್ಲ. ಹತ್ತು ಲಕ್ಷಕ್ಕಿಂತ ಹೆಚ್ಚು ಸಂಭಾವನೆ ಪಡೆಯುವ ಕಲಾವಿದರು ಹಾಗೂ ತಂತ್ರಜ್ಞರು ಶೇಕಡಾ 30 ರಷ್ಟು ಕಡಿತಗೊಳಿಸಿಕೊಂಡರೆ ಇದು ನಿರ್ಮಾಪಕರಿಗೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ ಎಂದು ಮನವಿ ಮಾಡಿದ್ದಾರೆ.

    ಕನ್ನಡ ಇಂಡಸ್ಟ್ರಿಯಲ್ಲೂ ಇದು ಆಗಬೇಕಿದೆ

    ಕನ್ನಡ ಇಂಡಸ್ಟ್ರಿಯಲ್ಲೂ ಇದು ಆಗಬೇಕಿದೆ

    ಕೇವಲ ತಮಿಳು ಇಂಡಸ್ಟ್ರಿಯಲ್ಲಿ ಮಾತ್ರವಲ್ಲ, ಕನ್ನಡ ಇಂಡಸ್ಟ್ರಿಯಲ್ಲೂ ಇಂತಹದೊಂದು ಬದಲಾವಣೆ ಅಥವಾ ಬೆಳವಣಿಗೆ ಆಗಬೇಕಿದೆ ಎಂಬ ಕೂಗು ಕೇಳಿ ಬರುತ್ತಿದೆ. ಸ್ಟಾರ್ ನಟರು, ಸ್ಟಾರ್ ನಿರ್ದೇಶಕ-ತಂತ್ರಜ್ಞರು ಸ್ವಲ್ಪ ದಿನಗಳ ಮಟ್ಟಿಗೆ ಸಂಭಾವನೆ ಕಡಿತಗೊಳಿಸಬೇಕು. ಇದರಿಂದ ನಿರ್ಮಾಪಕರ ಗಟ್ಟಿಯಾಗುವ ಮೂಲಕ ಹೆಚ್ಚು ಚಿತ್ರಗಳನ್ನು ನಿರ್ಮಿಸಲು ಸಾಧ್ಯ ಎಂಬ ಅಭಿಪ್ರಾಯವೂ ಇದೆ.

    'ನಷ್ಟ ಸರಿತೂಗಿಸಲು ಸಿನಿಮಾ ಟಿಕೆಟ್ ಬೆಲೆ ಹೆಚ್ಚು ಮಾಡುವುದಿಲ್ಲ''ನಷ್ಟ ಸರಿತೂಗಿಸಲು ಸಿನಿಮಾ ಟಿಕೆಟ್ ಬೆಲೆ ಹೆಚ್ಚು ಮಾಡುವುದಿಲ್ಲ'

    Recommended Video

    ಪ್ರೀತಿಯಲ್ಲಿ ಕೃಷ್ಣ, ನೀತಿಯಲ್ಲಿ ಶ್ರೀರಾಮಚಂದ್ರ ನಮ್ಮ ಚಿರು | Prashanth Sambargi | Chiru | Filmibeat Kannada
    ಶೂಟಿಂಗ್ ಶುರುವಾಗಿದೆ...

    ಶೂಟಿಂಗ್ ಶುರುವಾಗಿದೆ...

    ಈಗಾಗಲೇ ಎಲ್ಲಾ ಇಂಡಸ್ಟ್ರಿಯಲ್ಲೂ ಚಿತ್ರೀಕರಣ ಆರಂಭವಾಗಿದೆ. ಚಿತ್ರ ಪ್ರದರ್ಶನ ಸಹ ಪ್ರಾರಂಭವಾಗಿದೆ. ಆದರೆ, ಯಾವುದೇ ಹೊಸ ಸಿನಿಮಾಗಳು ಥಿಯೇಟರ್‌ಗೆ ಬರ್ತಿಲ್ಲ. ಹಳೇ ಚಿತ್ರಗಳನ್ನು ರಿ-ರಿಲೀಸ್ ಮಾಡಲಾಗುತ್ತಿದೆ.

    English summary
    Association of Tamil film producers requests to actors and technicians [who get remuneration of ₹ 10 lakhs and above] to reduce 30% fees.
    Tuesday, October 20, 2020, 12:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X