ನಟ ತವಸಿಯ ಜೀವ ಉಳಿಸಲಿಲ್ಲ ರಜನೀಕಾಂತ್, ವಿಜಯ್ ಸೇತುಪತಿ ನೆರವು

ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ, ಹಣಕಾಸು ಸಹಾಯಕ್ಕೆ ಬೇಡಿಕೊಂಡಿದ್ದ ತಮಿಳಿನ ಪೋಷಕ ನಟ ತವಸಿ ಇಂದು ಕೊನೆ ಉಸಿರೆಳೆದಿದ್ದಾರೆ.

ಮೂವತ್ತು ವರ್ಷಗಳಿಂದ ಹಲವು ತಮಿಳಿನ ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದ ತವಸಿ, ಇತ್ತೀಚೆಗೆ ಮಾರಕ ಕ್ಯಾನ್ಸರ್‌ಗೆ ತುತ್ತಾಗಿದ್ದರು. ಮಧುರೈ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತವಸಿ, ಹಣಕಾಸು ನೆರವು ಕೋರಿ ಮನವಿ ಮಾಡಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ತವಸಿ ಮನವಿಗೆ ಸ್ಪಂದಿಸಿದ್ದ ಸೂಪರ್ ಸ್ಟಾರ್ ರಜನೀಕಾಂತ್, ತವಸಿಯ ಆಸ್ಪತ್ರೆಯ ಬಿಲ್ ಪಾವತಿಸುವುದಾಗಿ ಹೇಳಿದ್ದರು. ವಿಜಯ್ ಸೇತುಪತಿ ಸಹ ಹತ್ತು ಲಕ್ಷ ಹಣಕಾಸು ಸಹಾಯ ಘೋಷಿಸಿದ್ದರು. ನಟ ಸಿಂಭು, ಸೂರ್ಯಾ, ನಟ ಶಿವಕಾರ್ತಿಕೇಯನ್ ಸಹ ನೆರವಿನ ಹಸ್ತು ಚಾಚಿದ್ದರು.

Tamil Movie Actor Thavasi Passed Away

ಇಷ್ಟೆಲ್ಲಾ ನೆರವು ಹರಿದುಬಂದಿದ್ದರೂ ಸಹ ಯಾವುದೂ ಪ್ರಯೋಜನವಾಗಿಲ್ಲ. ತವಸಿ ಇಂದು (ನವೆಂಬರ್ 23) ಸಂಜೆ ಕೊನೆ ಉಸಿರೆಳೆದಿದ್ದಾರೆ.

More from Filmibeat

English summary
Tamil movie actor Thavasi passed away on Monday Evening. He was in hospital, Rajinikant, Vijay Sethupathi and many stars helped him.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X