For Quick Alerts
  ALLOW NOTIFICATIONS  
  For Daily Alerts

  ನಯನತಾರಾ ನಿರ್ಮಾಣದ ತಮಿಳು ಸಿನಿಮಾಕ್ಕೆ ಅಂತರಾಷ್ಟ್ರೀಯ ಗೌರವ

  |

  ತಮಿಳು ಸಿನಿಮಾ 'ಕೂಳಾಂಗಳ್' ಅಥವಾ 'ಪೆಬೆಲ್' ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠಿತ ಪ್ರಶಸ್ತಿ ಪ್ರಾಪ್ತಿಯಾಗಿದೆ.

  ವಿನೋದ್‌ರಾಜ್ ಪಿಎಸ್ ನಿರ್ದೇಶನದ ಮೊದಲ ಸಿನಿಮಾ 'ಕೂಳಾಂಗಾಳ್' ಗೆ ಅಂತರರಾಷ್ಟ್ರೀಯ ಸಿನಿಮೋತ್ಸವ ರೋಟೆರ್ಡ್ಯಾಮ್‌ನಲ್ಲಿ 'ಹಿವೋಸ್ ಟೈಗರ್' ಪ್ರಶಸ್ತಿ ದೊರಕಿದೆ.

  ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗುತ್ತಿರುವ ಭಾರತದ ಎರಡನೇ ಸಿನಿಮಾ 'ಕೋಳಾಂಗಳ್'. ಇದಕ್ಕೂ ಮುನ್ನಾ ಮಲಯಾಳಂ ನಿರ್ದೇಶಕ ಕುಮಾರ್ ಶಶಿಧರನ್ ನಿರ್ದೇಶಿಸಿದ್ದ 'ದುರ್ಗಾ' ಈ ಪ್ರಶಸ್ತಿಗೆ ಭಾಜನವಾಗಿತ್ತು.

  'ಕಠೋರವಾದ ವಿಷಯವನ್ನಿಟ್ಟುಕೊಂಡು, ಮಾನವೀಯತೆ, ಹಾಸ್ಯದ ಮಿಳಿತದೊಂದಿಗೆ ಮಾಡಲಾಗಿರುವ ಅದ್ಭುತ ಚಲನಚಿತ್ರ ಇದು. ಈ ಸಿನಿಮಾ 'ಸಿನಿಮಾ ವ್ಯಾಕರಣಕ್ಕೆ' ಒಳ್ಳೆಯ ಉದಾಹರಣೆ' ಎಂದು ಸಿನಿಮಾವನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವ ಜ್ಯೂರಿಗಳು ಹೇಳಿದ್ದಾರೆ.

  ಸಿನಿಮಾದ ಕತೆಯು ತಮಿಳುನಾಡಿನ ಬರಪೀಡಿತ 'ಅರಿಟ್ಟಪಟ್ಟಿ' ಎಂಬಲ್ಲಿ ನಡೆಯುತ್ತದೆ. ಕುಡುಕ ತಂದೆ, ಹಿಂಸೆಗೆ ಗುರಿಯಾದ ತಾಯಿ ಹಾಗೂ ಮಗನ ನಡುವೆ ಕತೆಯೇ 'ಕೋಳಾಂಗಳ್'.

  ಈ ಸಿನಿಮಾವನ್ನು ಖ್ಯಾತ ನಟಿ ನಯನತಾರಾ ನಿರ್ಮಿಸಿದ್ದಾರೆ. ಸಿನಿಮಾ ನಿರ್ಮಾಣದಲ್ಲಿ ನಯನತಾರಾ ಬಾಯ್‌ಫ್ರೆಂಡ್ ವಿಗ್ನೇಶ್ ಶಿವನ್ ಸಹ ಸಾಥ್ ನೀಡಿದ್ದಾರೆ.

  ಕಬ್ಜ ಚಿತ್ರತಂಡ ಸೇರಿಕೊಂಡ ಕನ್ನಡದ ಯುವ ನಟ | Filmibeat Kannada

  ಸಿನಿಮಾವು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗಿರುವ ಬಗ್ಗೆ ತಮಿಳಿನ ಹಲವು ನಿರ್ದೇಶಕ, ನಟರು ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ನಿರ್ದೇಶಕ ವಿನೋದ್ ರಾಜ್‌ಗೆ ಶುಭಾಶಯ ತಿಳಿಸಿದ್ದಾರೆ.

  English summary
  Tamil movie Pebbles got Hivos Tiger award 2021 in International film fest Rotterdam. Movie directed by Vinothraj produced by Nayanatara.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X