For Quick Alerts
  ALLOW NOTIFICATIONS  
  For Daily Alerts

  ತಮಿಳಿನ ಖ್ಯಾತ ನಿರ್ಮಾಪಕ ಎಸ್‌ಕೆ ಕೃಷ್ಣಕಾಂತ್ ನಿಧನ

  |

  ತಮಿಳು ಸಿನಿರಂಗದ ಖ್ಯಾತ ನಿರ್ಮಾಪಕರಲ್ಲಿ ಒಬ್ಬರಾಗಿದ್ದ ಎಸ್‌ಕೆ ಕೃಷ್ಣಕಾಂತ್ ಅವರು ಹೃದಯಾಘಾತದಿಂದ ನಿನ್ನೆ (ಸೆಪ್ಟೆಂಬರ್ 30) ರಾತ್ರಿ ನಿಧನಹೊಂದಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು.

  ಧನುಶ್, ಸೂರ್ಯಾ, ಚಿಯಾನ್ ವಿಕ್ರಂ, ಸಿಂಭು ಇನ್ನೂ ಹಲವು ಖ್ಯಾತ ಸಿನಿಮಾ ನಟರುಗಳ ಸಿನಿಮಾಗಳನ್ನು ನಿರ್ಮಿಸಿದ್ದ ಎಸ್‌ಕೆ ಕೃಷ್ಣಕಾಂತ್ ಅವರ ಹಠಾತ್ ನಿಧನಕ್ಕೆ ತಮಿಳು ಚಿತ್ರರಂಗ ಸಂತಾಪ ವ್ಯಕ್ತಪಡಿಸಿದೆ.

  ಧನುಶ್ ನಟಿಸಿದ್ದ ತಿರುಡಾ-ತಿರುಡಿ, ಚಿಯಾನ್ ವಿಕ್ರಂ ನಟನೆಯ 'ಕಿಂಗ್', ಸಿಂಭು ನಟನೆಯ 'ಮನ್ಮಥನ್' ಇನ್ನೂ ಹಲವು ಸಿನಿಮಾಗಳನ್ನು ಎಸ್‌ಕೆ ಕೃಷ್ಣಕಾಂತ್ ನಿರ್ಮಾಣ ಮಾಡಿದ್ದರು.

  SPB Last wish: ನನ್ನ ಸಮಾಧಿಯ ಮೇಲೆ ಹೀಗೆ ಬರೆಸಿ ಅಂತ ಮೊದಲೇ ಹೇಳಿದ್ರು SPBalasubrahmanyam | Filmibeat Kannada

  ಎಸ್‌ಕೆ ಕೃಷ್ಣಕಾಂತ್ ಕೆಲವು ವಾರಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ರಾತ್ರಿ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

  English summary
  Tamil movie producer SK Krishnan passed away due to heart attack. He produced Thiruda-Thirudi, Manmadhan, King movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X