ರಶ್ಮಿಕಾ ಮಂದಣ್ಣ ಮೊದಲ ತಮಿಳು ಸಿನಿಮಾದ ಹೊಸ ಅಪ್‌ಡೇಟ್
ತೆಲುಗು ಸಿನಿರಂಗದಲ್ಲಿ ಬೇಡಿಕೆ ನಟಿಯಾಗಿ ಮೆರೆಯುತ್ತಿರುವ ರಶ್ಮಿಕಾ ಮಂದಣ್ಣ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ತಮಿಳು ಚಿತ್ರಕ್ಕೆ ಸಹಿ ಹಾಕಿ ಕೆಲ ತಿಂಗಳುಗಳಾಗಿದ್ದರೂ ಸಹ ಸಿನಿಮಾ ಕುರಿತಾದ ಹೊಸ ಅಪ್‌ಡೇಟ್ಸ್ ಇದೀಗ ಬಂದಿದೆ.
Recommended Video
ಖ್ಯಾತ ನಟ ಕಾರ್ತಿ ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ಸಿನಿಮಾಕ್ಕೆ 'ಸುಲ್ತಾನ್' ಎಂದು ಹೆಸರಿಡಲಾಗಿದೆ. ಲಾಕ್‌ಡೌನ್ ಮುನ್ನವೇ ಚಿತ್ರೀಕರಣ ಪ್ರಾರಂಭವಾಗಿದ್ದ ಈ ಸಿನಿಮಾ ಈ ವೇಳೆಗಾಗಲೆ ಮುಗಿಯಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಚಿತ್ರೀಕರಣ ಬಂದ್ ಆಗಿತ್ತು.
ಆದರೆ ಇದೀಗ ಚಿತ್ರತಂಡವು ಮತ್ತೆ ಚಿತ್ರೀಕರಣ ಪುನರ್ ಪ್ರಾರಂಭ ಮಾಡಿದೆ. ಜೊತೆಗೆ ಚಿತ್ರದ ಬಗ್ಗೆ ಇನ್ನಿತರ ಮಾಹಿತಿಯನ್ನು ಸಹ ಚಿತ್ರತಂಡ ಹಂಚಿಕೊಂಡಿದೆ.

90% ಚಿತ್ರೀಕರಣ ಮುಗಿದಿದೆ
'ಸುಲ್ತಾನ್' ಸಿನಿಮಾದ ಚಿತ್ರೀಕರಣ ಶೇ 90 ಭಾಗ ಮುಗಿದೇ ಹೋಗಿದೆಯಂತೆ. ಇನ್ನುಳಿದ ಭಾಗದ ಚಿತ್ರೀಕರಣವನ್ನು ಕೋವಿಡ್ ನಡುವೆಯೇ ಮುಗಿಸಲಿದ್ದೇವೆ ಎಂದು ನಿರ್ಮಾಪಕ ಎಸ್.ಆರ್.ಪ್ರಭು ಟ್ವೀಟ್ ಮಾಡಿದ್ದಾರೆ. ಚಿತ್ರದ ಸಂಲನ ಕಾರ್ಯವೂ ಸಹ ಬಹುತೇಕ ಮುಗಿದಿದೆಯಂತೆ.

ಸೆಟ್‌ಗೆ ಮುತ್ತಿಗೆ ಹಾಕಿದ್ದ ಗುಂಪು
ಸುಲ್ತಾನ್ ಸಿನಿಮಾ ಸೆಟ್ಟೇರಿದಾಗಿನಿಂದಲೂ ವಿವಾದಗಳಲ್ಲೇ ಇದೆ. ಸುಲ್ತಾನ್ ಸೆಟ್ ಮೇಲೆ ಆರಂಭದಲ್ಲಿ ಗುಂಪೊಂದು ದಾಳಿ ಮಾಡಿತ್ತು. ಈ ಸಿನಿಮಾ ಟಿಪ್ಪು ಸುಲ್ತಾನ್ ಜೀವನ ಆಧರಿಸಿದ್ದು ಎಂಬ ಕಾರಣಕ್ಕೆ ದಾಳಿ ಮಾಡಲಾಗಿತ್ತು. ಆದರೆ ನಂತರ ಚಿತ್ರತಂಡ ಸ್ಪಷ್ಟನೆ ನೀಡಿತು.

ಹೆಸರು ಬಹಿರಂಗಗೊಳಿಸಿದ ರಶ್ಮಿಕಾ
ನಂತರ ರಶ್ಮಿಕಾ ಮಂದಣ್ಣ ಅವರು ಚಿತ್ರತಂಡಕ್ಕೆ ಮಾಹಿತಿ ನೀಡದೇ ಸಿನಿಮಾದ ಹೆಸರು ಬಹಿರಂಗಪಡಿಸಿಬಿಟ್ಟರು. ಇದು ಚಿತ್ರತಂಡ ಹಾಗೂ ರಶ್ಮಿಕಾ ನಡುವೆ ಸಣ್ಣ ಮನಸ್ತಾಪಕ್ಕೆ ಕಾರಣವಾಯಿತು ಎನ್ನಲಾಗಿದೆ.

ಒಟಿಟಿಯಲ್ಲಿ ಸಿನಿಮಾ ಬಿಡುಗಡೆ?
ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲಾಗುತ್ತದೆಯೇ ಎಂದು ಕಾರ್ತಿ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಸ್ಪಷ್ಟ ಉತ್ತರ ನೀಡದ ನಿರ್ಮಾಪಕ, ಬಿಡುಗಡೆ ಬಗ್ಗೆ ಈಗಲೇ ಏನೂ ಯೋಚಿಸಿಲ್ಲ ಎಂದಷ್ಟೆ ಹೇಳಿದ್ದಾರೆ.


Click it and Unblock the Notifications











