For Quick Alerts
  ALLOW NOTIFICATIONS  
  For Daily Alerts

  ತಮಿಳುನಾಡು ಚುನಾವಣೆ: ತಾರೆಯರಿಂದ ಮತ ಚಲಾವಣೆ, ವಿಜಯ್ ಫುಲ್ ಡಿಫರೆಂಟ್

  |

  ತಮಿಳುನಾಡು ವಿಧಾನಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ರಾಜ್ಯದ 234 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ.

  ಸೈಕಲ್ ನಲ್ಲಿ ಬಂದು ವೋಟ್ ಹಾಕಿ ಮೋದಿಗೆ ಟಾಂಗ್ ಕೊಟ್ಟ ವಿಜಯ್ | Filmibeat Kannada

  ತಮಿಳುನಾಡು ಚುನಾವಣೆಯಲ್ಲಿ ಸಿನಿಮಾ ತಾರೆಯರು ಸಾಕಷ್ಟು ಸಕ್ರಿಯರಾಗಿ ಭಾಗವಹಿಸಿದ್ದರು. ಕಮಲ್ ಹಾಸನ್ ಸ್ವಂತ ಪಕ್ಷದ ಮೂಲಕ ಕಣಕ್ಕೆ ಇಳಿದಿದ್ದರೆ, ಖುಷ್ಬು, ಉದಯನಿಧಿ ಸ್ಟಾಲಿನ್ ಸೇರಿ ಇನ್ನೂ ಹಲವರು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಸುಹಾಸಿನಿ, ಶ್ರುತಿ, ಅಕ್ಷರ ಹಾಸನ್, ರಾಧಾ ರವಿ ಇನ್ನೂ ಹಲವರು ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

  ಇಂದು ಬೆಳಿಗ್ಗಿನಿಂದಲೇ ತಮಿಳುನಾಡು ರಾಜ್ಯದಾದ್ಯಂತ ಮತದಾನ ಚುರುಕಾಗಿ ನಡೆಯುತ್ತಿದ್ದು, ಕಮಲ್ ಹಾಸನ್, ರಜನೀಕಾಂತ್, ಅಜಿತ್, ವಿಜಯ್, ಸೂರ್ಯ, ಕಾರ್ತಿ, ಶಿವಕಾರ್ತಿಕೇಯನ್, ಖುಷ್ಬು ಸುಂದರ್, ವಿಕ್ರಂ ಇನ್ನೂ ಹಲವು ತಮಿಳು ಸಿನಿತಾರೆಯರು ಮತಗಟ್ಟೆಗಳಿಗೆ ತೆರಳಿ ಮತ ಚಲಾವಣೆ ಮಾಡಿದ್ದಾರೆ.

  ಮಕ್ಕಳೊಂದಿಗೆ ಬಂದು ಕಮಲ್ ಮತ ಚಲಾವಣೆ

  ಮಕ್ಕಳೊಂದಿಗೆ ಬಂದು ಕಮಲ್ ಮತ ಚಲಾವಣೆ

  ಕಮಲ್ ಹಾಸನ್ ಅವರು ಮಕ್ಕಳಾದ ಅಕ್ಷರಾ ಹಾಸನ್, ಶ್ರುತಿ ಹಾಸನ್ ಅವರೊಟ್ಟಿಗೆ ಚೆನ್ನೈನ ಥಯ್ಯಾಂಪೇಟ್‌ನ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದ್ದಾರೆ. ಕಮಲ್ ಹಾಸನ್ ಅವರು ದಕ್ಷಿಣ ಕೊಯಮತ್ತೂರು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ.

  ಪತ್ನಿಯೊಂದಿಗೆ ಬಂದು ಮತಚಲಾಯಿಸಿದ ರಜನೀಕಾಂತ್

  ಪತ್ನಿಯೊಂದಿಗೆ ಬಂದು ಮತಚಲಾಯಿಸಿದ ರಜನೀಕಾಂತ್

  ಇನ್ನು ನಟ ರಜನೀಕಾಂತ್ ಪತ್ನಿಯೊಂದಿಗೆ ಬಂದು ಚೆನ್ನೈನ ಥೌಸಂಡ್ಸ್‌ ಲೈಟ್ಸ್ ಕ್ಷೇತ್ರದ ಸ್ಟೆಲ್ಲಾ ಮೇರೀಸ್ ಶಾಲೆಯಲ್ಲಿ ಮತದಾನ ಮಾಡಿದ್ದಾರೆ. ಎಲ್ಲವೂ ಸರಿಯಿದ್ದಿದ್ದರೆ ರಜನೀಕಾಂತ್ ಅವರು ರಾಜಕೀಯ ಪಕ್ಷವು ಈ ಬಾರಿಯ ವಿಧಾನಸಭೆ ಚುನಾವಣೆಗಳಲ್ಲಿರುತ್ತಿತ್ತು, ಆದರೆ ಅವರು ಅಚಾನಕ್ಕಾಗಿ ಅನಾರೋಗ್ಯ ಪೀಡಿತರಾದ ಕಾರಣ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದರು.

  ಸೈಕಲ್ ಏರಿ ಬಂದ ನಟ ವಿಜಯ್

  ಸೈಕಲ್ ಏರಿ ಬಂದ ನಟ ವಿಜಯ್

  ನಟ ವಿಜಯ್ ಅವರು ಭಿನ್ನವಾಗಿ ಸೈಕಲ್‌ನಲ್ಲಿ ಬಂದು ಮತಚಲಾವಣೆ ಮಾಡಿದರು. ಚೆನ್ನೈನ ನೀಲನ್‌ಕರಿಯಲ್ಲಿ ವೇಲನ್ ಶಾಲೆಯಲ್ಲಿ ಮತಚಲಾಯಿಸಿದರು. ಏರುತ್ತಿರುವ ಪೆಟ್ರೋಲ್, ಡೀಸೆಲ್ ದರದ ವಿರುದ್ಧ ಸೂಚ್ಯ ಪ್ರತಿಭಟನೆಯಾಗಿ ವಿಜಯ್ ಅವರು ಸೈಕಲ್‌ನಲ್ಲಿ ಬಂದು ಮತ ಚಲಾವಣೆ ಮಾಡಿದ್ದಾರೆ ಎನ್ನಲಾಗುತ್ತಿದೆ.

  ಅಜಿತ್-ಶಾಲಿನಿ ಮತದಾನ

  ಅಜಿತ್-ಶಾಲಿನಿ ಮತದಾನ

  ನಟ ಅಜಿತ್ ಹಾಗೂ ಪತ್ನಿ ಶಾಲಿನಿ ಅವರುಗಳು ತಿರುವನ್ನಿಯೂರ್ ಕ್ಷೇತ್ರದ ಶಾಲೆಯೊಂದರಲ್ಲಿ ಮತದಾನ ಮಾಡಿದರು. ಸಾಲಿನಲ್ಲಿ ನಿಂತು ಅಜಿತ್ ಹಾಗೂ ಶಾಲಿನಿ ಅವರುಗಳು ಮತಚಲಾವಣೆ ಮಾಡುತ್ತಿರುವ ಚಿತ್ರಗಳು ವೈರಲ್ ಆಗಿವೆ.

  ನಟ ಸೂರ್ಯ, ಕಾರ್ತಿ, ನಟಿ ಜ್ಯೋತಿಕ ಮತದಾನ

  ನಟ ಸೂರ್ಯ, ಕಾರ್ತಿ, ನಟಿ ಜ್ಯೋತಿಕ ಮತದಾನ

  ಒಂದೇ ಕುಟುಂಬದ ಸ್ಟಾರ್‌ಗಳಾದ ನಟ ಸೂರ್ಯ, ಕಾರ್ತಿ, ಜ್ಯೋತಿಕ ಅವರುಗಳು ಹಿಂದಿ ಪ್ರಚಾರ್ ಸಭಾ ಶಾಲೆ, ಟಿ ನಗರ್ ಯಲ್ಲಿ ಮತದಾನ ಮಾಡಿದರು. ನಟ ಶಿವಕಾರ್ತಿಕೇಯನ್ ಸಹ ಚೆನ್ನೈನಲ್ಲಿ ಮತದಾನ ಮಾಡಿ ನಂತರ ಅಭಿಮಾನಿಗಳೊಂದಿಗೆ ಸೆಲ್ಫಿ ಸಹ ತೆಗೆಸಿಕೊಂಡರು.

  English summary
  Tamil Nadu Assembly Elections 2021: Rajinikanth, Kamal Haasan, Ajit, Vijay many celebrities cast their votes.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X