ಮತಚಲಾಯಿಸಲು ಸೈಕಲ್ ಏರಿ ಬಂದ ವಿಜಯ್; ಸ್ಪಷ್ಟನೆ ನೀಡಿದ ದಳಪತಿ ಟೀಂ
ತಮಿಳು ಸ್ಟಾರ್ ನಟ ವಿಜಯ್ ಮತಚಲಾಯಿಸಲು ಸೈಕಲ್ ಏರಿ ಬರುವ ಮೂಲಕ ಸಂಚಲನ ಮೂಡಿಸಿದ್ದಾರೆ. ಇಂದು (ಏಪ್ರಿಲ್ 6) ಬೆಳಗ್ಗೆ ವಿಜಯ್ ಮತಗಟ್ಟೆಗೆ ಸೈಕಲ್‌ನಲ್ಲಿ ಬಂದು ತನ್ನ ಹಕ್ಕು ಚಲಾಯಿಸಿದ್ದಾರೆ. ದುಬಾರಿ ಕಾರಿನಲ್ಲಿ ಓಡಾಡುತ್ತಿದ್ದ ವಿಜಯ್ ಇಂದು ಸೈಕಲ್ ಏರಿ ಬಂದಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು.
ಇಂದು ಬೆಳಗ್ಗೆಯಿಂದ ವಿಜಯ್ ಸೈಕಲ್‌ನಲ್ಲಿ ಬಂದ ಫೋಟೋಗಳು ಮತ್ತು ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಸೈಕಲ್‌ನಲ್ಲಿ ಬಂದ ವಿಜಯ್ ಅವರೇ ರಾರಾಜಿಸುತ್ತಿದ್ದಾರೆ. ವಿಜಯ್ ಸೈಕಲ್ ನಲ್ಲಿ ಬರುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ ಎನ್ನುವ ಚರ್ಚೆ ಕೂಡ ಜೋರಾಗಿ ನಡೆಯುತ್ತಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ವಿಜಯ್ ಈ ಮೂಲಕ ಪ್ರತಿಭಟಿಸಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೀಗ ಈ ಬಗ್ಗೆ ವಿಜಯ್ ತಂಡ ಸ್ಪಷ್ಟನೆ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆದ ಬಳಿಕ ದಳಪತಿ ಪರ ವಕ್ತಾರ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

'ದಳಪತಿ ವಿಜಯ್ ಕಾರ್ ಬದಲು ಸೈಕಲ್‌ನಲ್ಲಿ ಹೊರಟಿರುವ ಕಾರಣ ಅವರ ನಿವಾಸದ ಪಕ್ಕದಲ್ಲೇ ಮತಗಟ್ಟೆ ಇತ್ತು ಹಾಗಾಗಿ. ರಸ್ತೆ ತುಂಬಾ ಚಿಕ್ಕದಾಗಿರುವ ಕಾರಣ ಕಾರಿನಲ್ಲಿ ಹೋಗಿಲ್ಲ. ಇದರ ಹಿಂದೆ ಬೇರೆ ಏನು ಉದ್ದೇಶ ಇಲ್ಲ' ಎಂದು ವಿಜಯ್ ಪರ ವಕ್ತಾರರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ವಿಜಯ್ ಸೈಕಲ್‌ನಲ್ಲಿ ಬರುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ ಎನ್ನುವ ಟ್ವೀಟ್‌ಗಳು ವೈರಲ್ ಆಗಿವೆ. ನಟ ವಿಜಯ್ ಸಿನಿಮಾಗಳ ಮೂಲಕವೂ ಸರ್ಕಾರದ ಕೆಲವು ನಿಯಮಗಳನ್ನು ವಿರೋಧಿಸಿದ್ದರು. ಅನೇಕ ಬಾರಿ ಕೇಂದ್ರ ಸರ್ಕಾರದ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಇದೀಗ ಸೈಕಲ್ ಏರಿ ಬಂದು ಮತ್ತೆ ಸಂಚಲನ ಸೃಷ್ಟಿಸಿದ್ದಾರೆ.


Click it and Unblock the Notifications











