'KGF' ಸಿನಿಮಾ ನೋಡಿ ಮಗನಿಗೆ 'ಯಶ್' ಎಂದು ನಾಮಕರಣ ಮಾಡಿದ ತಮಿಳುನಾಡಿನ ಅಭಿಮಾನಿ

ನೆಚ್ಚಿನ ನಟ ನಟಿಯರ ಮೇಲೆ ಅಭಿಮಾನಿಗಳು ಬಹಳ ವಿಭಿನ್ನವಾಗಿ ತಮ್ಮ ಅಭಿಮಾನ, ಪ್ರೀತಿ ವ್ಯಕ್ತಪಡಿಸುತ್ತಾರೆ. ಎಷ್ಟೋ ಮಂದಿ ತಮ್ಮ ಇಷ್ಟದ ನಟನಿಗಾಗಿ ಪ್ರಾಣ ಕೊಡಲು ಸಿದ್ಧರಿರುತ್ತಾರೆ. 'KGF' ಚಿತ್ರದಲ್ಲಿ ನಟಿಸಿ ಯಶ್ ದೇಶವಿದೇಶಗಳಲ್ಲಿ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ತಮಿಳುನಾಡಿನ ಅಭಿಮಾನಿಗಳು ತಮ್ಮ ಮಗನಿಗೆ ಅವರ ಹೆಸರೇ ಇಟ್ಟಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ 'KGF' ಸರಣಿ ಹೊಸ ದಾಖಲೆ ಬರೆದಿತ್ತು. ಇವತ್ತಿಗೂ ಆ ಸಿನಿಮಾ ಗುಂಗಿನಿಂದ ಕೆಲವರು ಹೊಸ ಬಂದಿಲ್ಲ. ರಾಕಿ ಭಾಯ್ ಆರ್ಭಟ ಮರೆತ್ತಿಲ್ಲ. ಚಾಪ್ಟರ್-1 ಸಕ್ಸಸ್ ಹೇಗಿತ್ತು ಅಂದ್ರೆ ಹೊರ ರಾಜ್ಯಗಳಲ್ಲಿ ಯಶ್ ಅಭಿಮಾನಿ ಸಂಘಗಳು ಹುಟ್ಟಿಕೊಂಡವು. ಕೇರಳ, ತಮಿಳುನಾಡಿನಿಂದ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಬೆಂಗಳೂರಿಗೆ ಬಂದರು.

Tamil Nadu Fan Names His Son Yash Proving KGF Mania Knows No Boundaries

ದೂರದ ಮಲೇಷಿಯಾದಲ್ಲಿ ಯಶ್ ಅಭಿಮಾನಿಗಳ ಸಂಘ ಇದೆ. ನೆಚ್ಚಿನ ನಟನ ಹೆಸರಿನಲ್ಲಿ ಸಮಾಜಮುಖಿ ಕೆಲಸವನ್ನು ಅವರು ಮಾಡುತ್ತಿದ್ದಾರೆ. 'KGF' ಸಿನಿಮಾ ಮಾಡಿದ ಜಾದೂ ಅಂಥಾದ್ದು. ಪ್ರಶಾಂತ್ ನೀಲ್ ನಿರ್ದೇಶನ, ಯಶ್ ನಟನೆ ಅಭಿಮಾನಿಗಳಿಗೆ ಹುಚ್ಚು ಹಿಡಿಸಿತ್ತು. ಇದೇ ಕಾರಣಕ್ಕೆ ಭಾಷೆಯ ಗಡಿಮೀರಿ ಸಿನಿಮಾ ದಾಖಲೆ ಬರೆದಿತ್ತು. ತೆಲುಗು, ತಮಿಳು ಪ್ರೇಕ್ಷಕರು ಬಿಗಿದಪ್ಪಿಕೊಂಡರು. ರಾಕಿಭಾಯ್ ಎಂದು ಜೈಕಾರ ಹಾಕಿದರು. ಹೊಸ ರಾಜ್ಯಗಳಲ್ಲಿ ಯಶ್ ಕ್ರೇಜ್‌ ಹೇಗಿದೆ? ಎನ್ನುವುದಕ್ಕೆ ಇದೊಂದು ಸಣ್ಣ ನಿದರ್ಶನ.

3 ವರ್ಷಗಳ ಹಿಂದೆ ಕನ್ನಡದ 'KGF -2' ಹಾಗೂ ತಮಿಳಿನ 'ಬೀಸ್ಟ್' ಸಿನಿಮಾಗಳು ಒಟ್ಟಿಗೆ ಬಿಡುಗಡೆ ಆಗಿತ್ತು. ಆಗ ಸಾಕಷ್ಟು ಜನ ತಮಿಳು ಪ್ರೇಕ್ಷಕರು ಮೊದಲು 'KGF -2' ನೋಡ್ತೀವಿ ಆ ಬಳಿಕ 'ಬೀಸ್ಟ್' ಸಿನಿಮಾ ನೋಡ್ತೀವಿ ಎಂದಿದ್ದರು. ಅಷ್ಟರಮಟ್ಟಿಗೆ ಯಶ್ ಸಿನಿಮಾ ನಿರೀಕ್ಷೆ, ಕುತೂಹಲ ಹುಟ್ಟಾಕ್ಕಿತ್ತು. ಅದೇ ಸಮಯದಲ್ಲಿ ತಮಿಳು ಅಭಿಮಾನಿಯೊಬ್ಬ ಮಾತನಾಡಿದ್ದ ವೀಡಿಯೋ ಈಗ ವೈರಲ್ ಆಗ್ತಿದೆ. Aalilla Radio ಯೂಟ್ಯೂಬ್ ಚಾನಲ್‌ನಲ್ಲಿ ತಮಿಳುನಾಡಿನ ಜನರ ಬಳಿ 'KGF -2' ಕ್ರೇಜ್ ಬಗ್ಗೆ ಕೇಳಲಾಗಿತ್ತು.

ಅಭಿಮಾನಿಯೊಬ್ಬರು ಮಾತನಾಡಿ "KGF -2' ಚಿತ್ರಕ್ಕಾಗಿ ಬಹಳ ಕಾಯುತ್ತಿದ್ದೇನೆ. ಅದೇ ಮೊದಲು ಯಶ್ ಅವರನ್ನು ತೆರೆಮೇಲೆ ನೋಡಿದ್ದು. ಫಸ್ಟ್ ಅಟ್ರಾಕ್ಷನ್ ಸಖತ್ ಆಗಿತ್ತು. ನನ್ನ ಮಗನಿಗೆ 'ಯಶ್' ಹೆಸರಿಟ್ಟಿದ್ದೀನಿ ನಾನು. KGF -2' ಚಿತ್ರಕ್ಕೆ ಕಾತರದಿಂದ ಕಾಯುತ್ತಿದ್ದೇನೆ. 'ಬೀಸ್ಟ್' ಚಿತ್ರಕ್ಕೂ ಕಾಯ್ತಿದ್ದೀನಿ, ಎರಡೂ ಒಟ್ಟಿಗೆ ಬಂದರೆ ನನ್ನ ಮೊದಲ ಆಯ್ಕೆ KGF -2'" ಎಂದು ಆತ ಹೇಳಿದ್ದು ಗಮನ ಸೆಳೆಯುತ್ತಿದೆ.

ನೆಚ್ಚಿನ ನಟನ ಹೆಸರು, ಭಾವಚಿತ್ರವನ್ನು ಮೈಮೇಲೆ ಹಚ್ಚೆ ಹಾಕಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಕೆಲವರು ತಮ್ಮ ಮಕ್ಕಳಿಗೆ ನೆಚ್ಚಿನ ನಟ, ನಟಿಯ ಹೆಸರಿಟ್ಟಿರುವುದು ಇದೆ. ಆದರೆ ತಮಿಳುನಾಡಿನ ಅಭಿಮಾನಿಯೊಬ್ಬರು ತಮ್ಮ ಮಗುವಿಗೆ ಯಶ್ ಹೆಸರು ನಾಮಕರಣ ಮಾಡಿರುವುದು ವಿಶೇಷವೇ ಸರಿ. ತಮಿಳಿಗರು ಅಷ್ಟು ಸುಲಭವಾಗಿ ಬೇರೆಯವರನ್ನು ಒಪ್ಪಿಕೊಳ್ಳಲ್ಲ. ತಮ್ಮ ಅಸ್ಮಿತೆ ಬಿಟ್ಟುಕೊಡುವವರಲ್ಲ. ಅಂಥಾದ್ದರಲ್ಲಿ 'KGF' ಸಿನಿಮಾ, ಯಶ್ ಪರ್ಫಾರ್ಮನ್ಸ್ ಅಲ್ಲಿ ಮ್ಯಾಜಿಕ್ ಮಾಡಿದೆ ಎಂದೇ ಹೇಳಬೇಕು.

ಸದ್ಯ 'ಕಾಂತಾರ- 1' ಚಿತ್ರವನ್ನು ಕೂಡ ತಮಿಳು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಚೆನ್ನೈ ಸೇರಿದಂತೆ ಹಲವು ಭಾಗಗಳಲ್ಲಿ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಧನುಷ್ ನಿರ್ದೇಶಿಸಿ ನಟಿಸಿರುವ 'ಇಡ್ಲಿ ಕಡೇ' ಚಿತ್ರಕ್ಕಿಂತ ರಿಷಬ್ ಶೆಟ್ಟಿ ಸಾರಥ್ಯದ 'ಕಾಂತಾರ- 1' ಚಿತ್ರಕ್ಕೆ ರೆಸ್ಪಾನ್ಸ್ ಚೆನ್ನಾಗಿದೆ. ಭಾನುವಾರ(ಅಕ್ಟೋಬರ್ 12) ಚೆನ್ನೈನಲ್ಲಿ 'ಇಡ್ಲಿ ಕಡೇ' ಚಿತ್ರಕ್ಕರ 223 ಶೋಗಳು ಸಿಕ್ಕಿತ್ತು. ಆದರೆ 'ಕಾಂತಾರ- 1' ಸಿನಿಮಾ 250ಕ್ಕೂ ಅಧಿಕ ಶೋಗಳಲ್ಲಿ ಪ್ರೇಕ್ಷಕರನ್ನು ರಂಜಿಸಿದೆ.

More from Filmibeat

Read more about: yash kgf kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X