ಲಿಯೋ: 4 ಗಂಟೆಯಲ್ಲ 7 ಗಂಟೆಯ ಶೋಗಳಿಗೂ ಅನುಮತಿ ನಿರಾಕರಿಸಿದ ತಮಿಳುನಾಡು ಸರ್ಕಾರ!

ದಳಪತಿ ವಿಜಯ್ ಅವರ 'ಲಿಯೋ' ಸಿನಿಮಾಗೆ ಒಂದಲ್ಲ ಒಂದು ವಿವಾದ ಮತ್ತು ಸಂಕಷ್ಟಗಳು ಹೆಚ್ಚಾಗುತ್ತಲೆ ಇದೆ. ತಮಿಳುನಾಡಿನಲ್ಲಿ ಮಾರ್ನಿಂಗ್ ಶೋಗಳಿಗೆ ಅನುಮತಿ ಕೋರಿ ಸಲ್ಲಿಸಾಗಿದ್ದ ಮನವಿಗೆ ನ್ಯಾಯಾಲಯ ಸರ್ಕಾರದ ನಿರ್ಧಾರಕ್ಕೆ ಬಿಟ್ಟಿತ್ತು. ಈಗ ತಮಿಳುನಾಡು ಸರ್ಕಾರ ಶೋಗಳಿಗೆ ಅನುಮತಿ ನಿರಾಕರಿಸಿದೆ.

ಲಿಯೋ ನಿರ್ಮಾಪಕರು ಮುಂಜಾನೆ ಶೋಗಳಿಗೆ ಅಂದರೆ ಬೆಳಗ್ಗೆ 4 ಮತ್ತು 7 ಗಂಟೆಯ ಶೋಗೆ ಅನುಮತಿ ಕೋರಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಕ್ಟೋಬರ್ 17 ರಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಿತಾ ಸುಮಂತ್ ಅವರು ತಮಿಳುನಾಡು ಸರ್ಕಾರಕ್ಕೆ ನಿರ್ಧಾರವನ್ನು ಬಿಟ್ಟಿದ್ದು, ಬೆಳಗ್ಗೆ 7 ಗಂಟೆಯ ಶೋ ಕುರಿತ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸೂಚಿಸಿತ್ತು.

denies-7-am-shows-for-thalapathy-vijays-leo

ಲಿಯೋ 7 ಗಂಟೆಯ ಪ್ರದರ್ಶನಕ್ಕೆ ಅನುಮತಿ ನೀಡುವಂತೆ ಚಿತ್ರದ ನಿರ್ಮಾಣ ಬ್ಯಾನರ್ ಸೆವೆನ್ ಸ್ಕ್ರೀನ್ ಸ್ಟುಡಿಯೋಸ್‌ನ ಮನವಿಯನ್ನು ಪರಿಗಣಿಸುವಂತೆ ಮದ್ರಾಸ್ ಹೈಕೋರ್ಟ್ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಲಿಯೋ ತಂಡ ಆರಂಭದಲ್ಲಿ 4 ಗಂಟೆಯ ಶೋಗಳನ್ನು ಕೋರಿತ್ತು, ಆದರೆ ಸರ್ಕಾರದ ಅನುಮೋದನೆ ಇಲ್ಲದ ಕಾರಣ ನ್ಯಾಯಾಲಯ ಅದನ್ನು ತಿರಸ್ಕರಿಸಿತು.

ಸರ್ಕಾರಿ ಅಧಿಕಾರಿಗಳೊಂದಿಗೆ ಹಲವಾರು ಚರ್ಚೆಗಳನ್ನು ನಡೆಸಿದ ನಂತರ, ತಮಿಳುನಾಡು ಸರ್ಕಾರವು ತನ್ನ ಅಂತಿಮ ಆದೇಶವನ್ನು ಅಕ್ಟೋಬರ್ 18 ರಂದು ತಿಳಿಸಿದೆ. ಬೆಳಗ್ಗೆ 4 ಮತ್ತು 7 ಗಂಟೆಯ ವಿಶೇಷ ಶೋಗಳಿಗೆ ಅನುಮತಿ ಇಲ್ಲ ಎಂದು ಸರ್ಕಾರ ಘೋಷಿಸಿದೆ. ಲಿಯೋ ಸಿನಿಮಾ ಅಕ್ಟೋಬರ್ 19 ರಂದು ಬಿಡುಗಡೆಯಾಗಲಿದೆ.

ಇದರ ಜೊತೆಗೆ ತಮಿಳುನಾಡು ಸರ್ಕಾರವು ನಾಲ್ಕು ಪ್ರದರ್ಶನಗಳ ಮಿತಿಯನ್ನು ಮೀರಿ ಆರು ದಿನಗಳವರೆಗೆ ದಿನಕ್ಕೆ ಐದು ಪ್ರದರ್ಶನಗಳನ್ನು ಆಯೋಜಿಸುವ ಅವಕಾಶವನ್ನು ಚಿತ್ರಮಂದಿರಗಳಿಗೆ ನೀಡಿದೆ. ತಮಿಳುನಾಡಿನಲ್ಲಿ ಈಗ ಮುಂಜಾನೆಯ ಶೋಗಳು ಇಲ್ಲದ ಕಾರಣ ಲಿಯೋ ಮೊದಲ ಪ್ರದರ್ಶನವನ್ನು ಬೆಳಗ್ಗೆ 9 ಗಂಟೆಗೆ ಪ್ರಾರಂಭವಾಗಲಿದೆ. ಈ ನಿರ್ಧಾರವನ್ನು ರಾಜ್ಯಾದ್ಯಂತ ಅನುಸರಿಸಬೇಕಾಗುತ್ತದೆ.

ಇತರ ರಾಜ್ಯಗಳಲ್ಲಿ ಮುಂಜಾನೆ ಪ್ರದರ್ಶನಗಳು

ತಮಿಳುನಾಡಿನಲ್ಲಿ ಹಿನ್ನಡೆಯ ಹೊರತಾಗಿಯೂ, ಲಿಯೋ ಕೇರಳ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಂತಹ ವಿವಿಧ ರಾಜ್ಯಗಳಲ್ಲಿ ಮುಂಜಾನೆ ಪ್ರದರ್ಶನಗಳನ್ನು ನೀಡಲು ಸಿದ್ಧವಾಗಿದೆ. ಚಿತ್ರದ ಅಂತರರಾಷ್ಟ್ರೀಯ ಪ್ರೀಮಿಯರ್ ಶೋಗಳಿಗೆ ಅಗಾಧ ಬೇಡಿಕೆಯಿದೆ. ಟಿಕೆಟ್‌ಗಳು ಸಕತ್ ಫಾಸ್ಟ್ ಆಗಿ ಮಾರಾಟವಾಗುತ್ತಿವೆ.

ಇನ್ನು, ಲಿಯೋ ತೆಲುಗು ಸಿನಿಮಾಗೆ ಹೈದರಾಬಾದ್‌ನ ಸಿಟಿ ಸಿವಿಲ್ ಕೋರ್ಟ್ ಅಕ್ಟೋಬರ್ 20 ರವರೆಗೆ 'ಲಿಯೋ' ಬಿಡುಗಡೆಯನ್ನು ತಡೆಹಿಡಿಯಲು ತಡೆಯಾಜ್ಞೆ ನೀಡಿದೆ. ಸಿತಾರಾ ಎಂಟರ್‌ಟೈನ್‌ಮೆಂಟ್ಸ್‌ನ ನಾಗ ವಂಶಿ ಚಿತ್ರದ ಶೀರ್ಷಿಕೆ 'ಲಿಯೋ' ಬಳಕೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದು ಲಿಯೋ ತಂಡಕ್ಕೆ ಮತ್ತೊಂದು ಶಾಕ್.

ಲಿಯೋ ಬುಕಿಂಗ್

ದಳಪತಿ ವಿಜಯ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಬಹು ನಿರೀಕ್ಷಿತ ಚಿತ್ರ ಲಿಯೋ ಅಕ್ಟೋಬರ್ 19 ರಂದು ಬಿಡುಗಡೆಯಾಗಲಿದೆ. ಈ ಚಿತ್ರವು ಬುಕಿಂಗ್‌ನಲ್ಲಿ ಭಾರಿ ಏರಿಕೆ ಕಂಡಿದೆ, ದೇಶೀಯವಾಗಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ದಾಖಲೆಗಳನ್ನು ಮುರಿದಿದೆ. ಈ ಸಿನಿಮಾ ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಆದರೆ, ತೆಲುಗು ಭಾಷೆಯಲ್ಲಿ ಬಿಡುಗಡೆಯಾಗುವುದು ಕಷ್ಟವಾಗಿದೆ. ನಿರ್ದೇಶಕ ಲೋಕೇಶ್ ಕನಕರಾಜ್ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಪ್ರೇಕ್ಷಕರು ಮುಕ್ತ ಮನಸ್ಸಿನಿಂದ ಥಿಯೇಟರ್‌ಗೆ ಬರುವಂತೆ ಮನವಿ ಮಾಡಿದ್ದಾರೆ.

More from Filmibeat

English summary
Tamil Nadu denies 7 am shows for Vijay's Leo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X