twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರಮಂದಿರಗಳಲ್ಲಿ ಶೇ. 100 ಆಸನ ಭರ್ತಿಗೆ ಸರ್ಕಾರದ ಅನುಮತಿ

    |

    ಕೊರೊನಾ ಲಾಕ್ ಡೌನ್ ಸಡಿಲಿಕೆಯಾದ ಬಳಿಕ ಸಿನಿಮಾ ಕ್ಷೇತ್ರಕ್ಕೆ ಒಂದಿಷ್ಟು ಮಾರ್ಗಸೂಚಿಗಳನ್ನು ವಿದಿಸಿತ್ತು ಸರ್ಕಾರ. ಕೊರೊನಾ ನಿಯಮಗಳಲ್ಲಿ ಮುಖ್ಯವಾಗಿ ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಆಸನಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು.

    ಚಿತ್ರಮಂದಿರಗಳು ತೆರೆದರೂ ಶೇ. 100 ಆಸನಗಳಿಗೆ ಅವಕಾಶ ನೀಡಿರಲಿಲ್ಲ ಎನ್ನುವ ಬೇಸರ ಸಿನಿಮಾ ಆಯೋಜಕರದಾಗಿತ್ತು. ಇತ್ತೀಚಿಗೆ ಶೇ. 100 ರಷ್ಟು ಅವಕಾಶ ನೀಡಿ ಎಂದು ದೊಡ್ಡ ನಿರ್ಮಾಪಕರು, ಕಲಾವಿದರು ಸರ್ಕಾರವನ್ನು ಒತ್ತಾಯಿಸುತ್ತಿದ್ದರು. ಶೇ. 100ರಷ್ಟು ಅವಕಾಶ ಇಲ್ಲದಿದ್ದರೆ, ಸಿನಿಮಾ ರಿಲೀಸ್ ಮಾಡಲು ಸಾಧ್ಯವಿಲ್ಲ ಎಂದು ಅನೇಕ ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರೆ. ಜನವರಿಯಿಂದಾದರೂ ಶೇ. 100 ರಷ್ಟು ಅವಕಾಶ ನೀಡಬಹುದು ಎನ್ನುವ ನಿರೀಕ್ಷೆಯಲ್ಲಿತ್ತು ಚಿತ್ರರಂಗ.

    ವಿಜಯ್ 'ಮಾಸ್ಟರ್' ಸಿನಿಮಾದ ಮುಂಗಡ ಟಿಕೆಟ್ ಬುಕ್ಕಿಂಗ್ ಓಪನ್ವಿಜಯ್ 'ಮಾಸ್ಟರ್' ಸಿನಿಮಾದ ಮುಂಗಡ ಟಿಕೆಟ್ ಬುಕ್ಕಿಂಗ್ ಓಪನ್

    ಇದೀಗ ಶೇ .100ರಷ್ಟು ಆಸನಗಳಿಗೆ ಸರ್ಕಾರ ಅನುಮತಿ ನೀಡಿದೆ. ಇಲ್ಲಿ ಗಮನಿಸಬೇಕಾಗಿದ್ದು, ಇದು ಕೇವಲ ತಮಿಳುನಾಡಿನಲ್ಲಿ ಮಾತ್ರ ಎನ್ನುವುದು. ಈ ಮೂಲಕ ಚಿತ್ರಮಂದಿರಗಳಿಗೆ ಶೇ. 100ರಷ್ಟು ಅನುಮತಿ ನೀಡಿದ ಮೊದಲ ರಾಜ್ಯ ತಮಿಳುನಾಡಾಗಿದೆ. ಈ ಮೂಲಕ ನಿರ್ಮಾಪಕರು ಧೈರ್ಯವಾಗಿ ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಮಾಡಬಹುದಾಗಿದೆ.

    Tamil Nadu government permits 100 percent occupancy in theatres

    ಸದ್ಯ ತಮಿಳಿನಲ್ಲಿ ಮಾಸ್ಟರ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಈಗಾಗಲೇ ಮಾಸ್ಟರ್ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು, ಜನವರಿ 13ರಂದು ಚಿತ್ರಮಂದಿರಕ್ಕೆ ಎಂಟ್ರಿ ಕೊಡ್ತಿದೆ. ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೊದಲೇ ನಟ ವಿಜಯ್ ತಮಿಳು ನಾಡು ಮುಖ್ಯಮಂತ್ರಿ ಎಡಪ್ಪಡಿ ಪಳನಿಸ್ವಾಮಿ ಅವರನ್ನು ಭೇಟಿಯಾಗಿ ಶೇ. 100ರಷ್ಟು ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಸಿಎಂ ಭೇಟಿಯ ಬಳಿಕ ಮಾಸ್ಟರ್ ತಂಡ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದರು.

    ಸದ್ಯ ತಮಿಳುನಾಡು ಸರ್ಕಾರ ಶೇ. 100 ರಷ್ಟು ಅನುಮತಿ ನೀಡಿದ ಬೆನ್ನಲ್ಲೇ ಬೇರೆ ಬೇರೆ ರಾಜ್ಯಗಳು ಯಾವಾಗ ಈ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಚಿತ್ರರಂಗ ಎದುರು ನೋಡುತ್ತಿದೆ. ಇನ್ನೂ ಕರ್ನಾಟಕದಲ್ಲಿ ಯಾವಾಗ ಎನ್ನುವ ಪ್ರಶ್ನೆ ಸಹ ಕಾಡುತ್ತಿದೆ. ಕರ್ನಾಟಕದಲ್ಲಿ ರಾಬರ್ಟ್ ಮತ್ತು ಪೊಗರು ಸಿನಿಮಾಗಳು ಶೇ. 100 ರಷ್ಟು ಅನುಮತಿಗೆ ಕಾಯುತ್ತ, ರಿಲೀಸ್ ಡೇಟ್ ಅನೌನ್ಸ್ ಮಾಡಲು ಎದುರು ನೋಡುತ್ತಿವೆ ಸಿನಿಮಾಗಳು.

    English summary
    Tamil Nadu government permits 100 percent occupancy in theatres.
    Monday, January 4, 2021, 13:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X