For Quick Alerts
  ALLOW NOTIFICATIONS  
  For Daily Alerts

  ಸಮಂತಾ ನಟನೆಯ 'ದಿ ಫ್ಯಾಮಿಲಿ ಮ್ಯಾನ್' ವೆಬ್ ಸರಣಿ ನಿಷೇಧಿಸಲು ಒತ್ತಾಯ: ಕಾರಣವೇನು?

  |

  'ದಿ ಫ್ಯಾಮಿಲಿ ಮ್ಯಾನ್' ಸೀಸನ್ 2, ಜೂನ್ 4 ರಂದು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ. ಆದರೆ ಬಿಡುಗಡೆಗೆ ಮುನ್ನವೇ ಈ ವೆಬ್‌ ಸರಣಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹಾಗೂ ರಾಜಕೀಯವಾಗಿಯೂ ಪ್ರತಿಭಟನೆ ಆರಂಭವಾಗಿದೆ.

  ಮನೋಜ್ ಬಾಜಪೇಯಿ ಹೀರೋ ಆಗಿ ಹಾಗೂ ಸಮಂತಾ ಅಕ್ಕಿನೇನಿ ವಿಲನ್ ಪಾತ್ರದಲ್ಲಿ ನಟಿಸಿರುವ ಈ ವೆಬ್ ಸರಣಿಯನ್ನು ನಿಷೇಧ ಮಾಡಬೇಕು ಎಂದು ತಮಿಳುನಾಡಿನಿಂದ ಭಾರಿ ಒತ್ತಾಯ ಕೇಳಿಬರುತ್ತಿವೆ. ಸಾಮಾಜಿಕ ಜಾಲತಾಣಕ್ಕೆ ಸೀಮಿತವಾಗಿದ್ದ ಈ ಒತ್ತಾಯಕ್ಕೆ ಈಗ ರಾಜ್ಯಸಭಾ ಸದಸ್ಯರ ಹಾಗೂ ಕೆಲವು ರಾಜಕೀಯ ಪಕ್ಷಗಳ ದನಿಯೂ ಸೇರಿದೆ.

  'ದಿ ಫ್ಯಾಮಿಲಿ ಮ್ಯಾನ್' ಸೀಸನ್‌ 2 ನಲ್ಲಿ ನಟಿ ಸಮಂತಾ ಎಲ್‌ಟಿಟಿಇ ಉಗ್ರಳ ಪಾತ್ರದಲ್ಲಿ ನಟಿಸಿದ್ದಾರೆ. ಮನೋಜ್ ಬಾಜಪೇಯಿ, ಟಿಎಎಸ್‌ಸಿಯ ಏಜೆಂಟ್ ಪಾತ್ರದಲ್ಲಿ ನಟಿಸಿದ್ದಾರೆ. ವೆಬ್ ಸರಣಿಯ ಟೀಸರ್ ಕೆಲವು ದಿನಗಳ ಹಿಂದೆ ಬಿಡುಗಡೆ ಆಗಿದ್ದು, ಟೀಸರ್ ಬಿಡುಗಡೆಯ ನಂತರ ವೆಬ್ ಸರಣಿಯನ್ನು ನಿಷೇಧ ಮಾಡಬೇಕೆಂಬ ಒತ್ತಾಯ ಹೆಚ್ಚಾಗಿದೆ.

  ತಮಿಳುನಾಡಿನ ರಾಜಕೀಯ ಪಕ್ಷ ತಮಿಳರ್ ಕಚ್ಚಿಯ ಮುಖ್ಯ ನಾಯಕ ಸೀಮನ್ ಈಗಾಗಲೇ 'ದಿ ಫ್ಯಾಮಿಲಿ ಮ್ಯಾನ್' ವೆಬ್ ಸರಣಿಯನ್ನು ನಿಷೇಧಿಸಬೇಕೆಂದು ಮನವಿ ಮಾಡಿದ್ದಾರೆ. ಇದೀಗ ಎಂಡಿಎಂಕೆ ಪಕ್ಷದ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ವೈಕೋ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್‌ಗೆ ಪತ್ರ ಬರೆದು ವೆಬ್ ಸರಣಿಯನ್ನು ನಿಷೇಧ ಮಾಡುವಂತೆ ಒತ್ತಾಯಿಸಿದ್ದಾರೆ.

  'ತಮಿಳರು ಉಗ್ರರು, ಅವರಿಗೆ ಪಾಕ್‌ ಜೊತೆ ನಂಟಿದೆ ಎಂದು ಬಿಂಬಿಸಲಾಗಿದೆ'

  'ತಮಿಳರು ಉಗ್ರರು, ಅವರಿಗೆ ಪಾಕ್‌ ಜೊತೆ ನಂಟಿದೆ ಎಂದು ಬಿಂಬಿಸಲಾಗಿದೆ'

  'ವೆಬ್ ಸರಣಿಯಲ್ಲಿ ತಮಿಳರನ್ನು ಕೆಟ್ಟ ರೀತಿಯಲ್ಲಿ ತೋರಿಸಲಾಗಿದೆ. ತಮಿಳರು ಉಗ್ರಗಾಮಿಗಳು, ಅವರಿಗೆ ಪಾಕಿಸ್ತಾನದ ಐಎಸ್‌ಐ ಜೊತೆಗೆ ನಂಟಿದೆ' ಎಂಬಂತೆ ವೆಬ್ ಸರಣಿಯಲ್ಲಿ ತೋರಿಸಲಾಗಿದೆ. ಇದು ತಮಿಳರಿಗೆ ಮಾಡಿರುವ ಅವಮಾನ' ಎಂದು ಪತ್ರದಲ್ಲಿ ಬರೆದಿದ್ದಾರೆ ಸಂಸದ ವೈಕೋ.

  ತಮಿಳ್ ಇಳಮ್‌ನ ಯೋಧರ ತ್ಯಾಗಕ್ಕೆ ಅವಮಾನ

  ತಮಿಳ್ ಇಳಮ್‌ನ ಯೋಧರ ತ್ಯಾಗಕ್ಕೆ ಅವಮಾನ

  'ಮುಖ್ಯವಾಗಿ 'ತಮಿಳ್ ಇಳಮ್' (ಶ್ರೀಲಂಕಾ ಸರ್ಕಾರದ ವಿರುದ್ಧ ಹೋರಾಡಿದ ತಮಿಳರು)ಗೆ ವೆಬ್ ಸರಣಿಯಲ್ಲಿ ಅವಮಾನ ಮಾಡಲಾಗಿದೆ. 'ತಮಿಳ್ ಇಳಮ್‌' ಯೋಧರು ಮಾಡಿರುವ ತ್ಯಾಗಕ್ಕೆ ಅಪಮಾನ ಮಾಡಲಾಗಿದೆ. 'ತಮಿಳ್ ಇಳಮ್‌' ಯೋಧರು ಪಾಕಿಸ್ತಾನದ ಜೊತೆಗೆ ನಂಟು ಹೊಂದಿದ್ದಾರೆ ಎಂಬಂತೆ ವೆಬ್ ಸರಣಿಯಲ್ಲಿ ಚಿತ್ರಿಸಲಾಗಿದೆ' ಎಂದು ಹೇಳಿದ್ದಾರೆ ವೈಕೋ. ಪತ್ರವನ್ನು ಅವರು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್‌ಗೆ ಕಳಿಸಿದ್ದಾರೆ.

  'ದಿ ಫ್ಯಾಮಿಲಿ ಮ್ಯಾನ್' ನಿಷೇಧಿಸಿ

  'ದಿ ಫ್ಯಾಮಿಲಿ ಮ್ಯಾನ್' ನಿಷೇಧಿಸಿ

  ಈ ವೆಬ್ ಸರಣಿಯು ತಮಿಳರ ಭಾವನೆಗಳಿಗೆ ಧಕ್ಕೆ ತರುತ್ತಿದೆ. ತಮಿಳು ಸಂಸ್ಕೃತಿಗೆ ಅವಮಾನ ಮಾಡುತ್ತಿದೆ. ಈ ವೆಬ್ ಸರಣಿಯ ವಿರುದ್ಧವಾಗಿ ತಮಿಳು ಜನರು ಅಸಮಾಧಾನ ಹೊಂದಿದ್ದಾರೆ. ಈ ವೆಬ್ ಸರಣಿ ವಿರುದ್ಧ ಅವರು ಪ್ರತಿಭಟಿಸುತ್ತಿದ್ದಾರೆ. 'ದಿ ಫ್ಯಾಮಿಲಿ ಮ್ಯಾನ್' ವೆಬ್ ಸರಣಿಯನ್ನು ನಿಷೇಧಿಸಿರಿ' ಎಂದು ವೈಕೋ ಪತ್ರದಲ್ಲಿ ಮನವಿ ಮಾಡಿದ್ದಾರೆ.

  ಕನ್ನಡ ಕಿರುತೆರೆ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಜೊತೆ ಜೊತೆಯಲಿ ಧಾರಾವಾಹಿ | Filmibeat Kannada
  ತಮಿಳಿರ ವಿರೋಧಕ್ಕೆ ಕಾರಣವಾದ ಅಂಶಗಳು

  ತಮಿಳಿರ ವಿರೋಧಕ್ಕೆ ಕಾರಣವಾದ ಅಂಶಗಳು

  'ದಿ ಫ್ಯಾಮಿಲಿ ಮ್ಯಾನ್' ವೆಬ್ ಸರಣಿಯಲ್ಲಿ ''ಬಂಡಾಯಗಾರರು (ಬಂಡುಕೋರರು) ಹಾಗೂ ಪಾಕಿಸ್ತಾನದ ಐಎಸ್‌ಐ ನಡುವೆ ಮೈತ್ರಿ ಏರ್ಪಟ್ಟಿದೆ. ಇವರ ಪ್ಲ್ಯಾನ್ ಏನು ಎಂಬುದನ್ನು ಕಂಡುಹಿಡಿ'' ಎಂಬ ಸಂಭಾಷಣೆ ಇದೆ. ಇದೇ ಟ್ರೇಲರ್‌ನಲ್ಲಿ ತಮಿಳು ಬಂಡಾಯ (ಎಲ್‌ಟಿಟಿಇ ಉಗ್ರ) ಗುಂಪಿನ ಸದಸ್ಯೆಯ ಪಾತ್ರದಲ್ಲಿ ನಟಿಸಿರುವ ಸಮಂತಾ ತಮಿಳಿನಲ್ಲಿ ಮಾತನಾಡುತ್ತಾ, 'ನಾನು ಎಲ್ಲರಲ್ಲೂ ಕೊಲ್ಲುತ್ತೇನೆ' ಎಂದು ಸಂಭಾಷಣೆ ಹೇಳಿದ್ದಾರೆ. ಈ ಉಗ್ರರನ್ನು ಹಿಡಿಯಲು ನಾಯಕ ತಮಿಳುನಾಡಿಗೆ ಬರುತ್ತಾನೆ. ತಮಿಳು ಜನ, ಎಲ್‌ಟಿಟಿಇ ಹಾಗೂ ತಮಿಳುನಾಡಿಗೆ ಸಂಬಂಧಿಸಿದ ಇನ್ನೂ ಕೆಲವು ಅಂಶಗಳು ಟ್ರೇಲರ್‌ನಲ್ಲಿವೆ. ವೆಬ್ ಸರಣಿಯಲ್ಲಿಯೂ ಸಾಕಷ್ಟು ಇರಲಿವೆ.

  English summary
  Tamil Nadu people demanding to ban The Family Man web series season 2. Rajya Sabha MP wrote letter to minister Prakash Javadekar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X