ದಲಿತರ ವಿರುದ್ಧ ಅವಹೇಳನಕಾರಿ ಹೇಳಿಕೆ; ನಟಿ ಮೀರಾ ಮಿಥುನ್ ವಿರುದ್ಧ ಕೇಸ್

ವಿವಾದಾತ್ಮಕ ನಟಿ ಎಂದೇ ಖ್ಯಾತಿಗಳಿಸಿರುವ ತಮಿಳಿನ ಮೀರಾ ಮಿಥುನ್ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುವ ಭರದಲ್ಲಿ ಮೀರಾ, ಪರಿಶಿಷ್ಟ ಜಾತಿಯ ಜನರ ವಿರುದ್ಧ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿ ಅನಗತ್ಯ ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ.

'ಚಿತ್ರರಂಗದಲ್ಲಿ ಆಗುತ್ತಿರುವ ಆನಾಹುತಗಳಿಗೆ ಪರಿಶಿಷ್ಟ ಜಾತಿಯ ಜನರೇ ಕಾರಣ. ಅಂಥವರನ್ನು ಚಿತ್ರರಂಗದಿಂದ ಓಡಿಸಬೇಕು' ಎಂದು ಮೀರಾ ಹೇಳಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಮೀರಾ ವಿರುದ್ಧ ಅನೇಕರು ಸಿಡಿದೆದಿದ್ದಾರೆ. ತಮಿಳುನಾಡು ಪೊಲೀಸ್ ಸೈಬರ್ ವಿಭಾಗದಲ್ಲಿ ದೂರು ದಾಖಲಾಗಿದೆ.

ಪರಿಶಿಷ್ಟ ಜಾತಿಯವರನ್ನು ನಿಂದಿಸಿದ ಆರೋಪದಡಿ ವಿಡುತಲೈ ಚಿರುತೈಗಳ್ ಕಚ್ಚಿ ರಾಜಕೀಯ ಪಕ್ಷ ದೂರು ನೀಡಿದ್ದು, ನಟಿ ಮೀರಾ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಮೀರಾ ವಿರುದ್ಧ ಭಾರತೀಯ ದಂಡ ಸಂಹಿತೆ, ಪರಿಶಿಷ್ಟ ಜಾತಿ ಮತ್ತು ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ಏಳು ನಿಬಂಧನೆಗಳ ಅಡಿಯಲ್ಲಿ ನಟ ಮೀರಾ ಮಿಥುನ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಮಿಳುನಾಡು ಸೈಬರ್ ಕ್ರೈಂ ಪೊಲೀಸರು ಮಾಹಿತಿ ನೀಡಿದ್ದಾರೆ.

Tamil Nadu police booked actress Meera Mithun for an alleged slur against SC in an Viral Video

ಇತ್ತೀಚಿಗೆ ಟಾಕ್ ಶೋ ಒಂದರಲ್ಲಿ ಭಾಗವಹಿಸಿದ್ದ ಮೀರಾ, ಮಾತನಾಡುವಾಗ ಪರಿಶಿಷ್ಟ ಜಾತಿ ಜನರ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳುತ್ತಲೇ ಮಾತನಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. "ಸಿನಿಮಾರಂಗದಲ್ಲಿ ಎಲ್ಲಾ ತಪ್ಪುಗಳು ಮತ್ತು ದುಷ್ಪರಿಣಾಮಗಳಿಗೆ ಪರಿಶಿಷ್ಟ ಜಾತಿಯವರೇ ಕಾರಣ, ಅವರನ್ನು ಚಿತ್ರರಂಗದಿಂದ ಹೊರಹಾಕಬೇಕು. ಅವರು ಹೆಚ್ಚಾಗಿ ಕಾನೂನುಬಾಹಿರ ಚಟುವಟಿಕೆಗಳು ಮತ್ತು ಅಪರಾಧಗಳಲ್ಲಿ ಭಾಗಿಯಾಗುವುದರಿಂದ ಸಮಸ್ಯೆಗಳನ್ನು ಎದುರಿಸುಬೇಕಾಗಿದೆ. ಯಾವುದೇ ಕಾರಣವಿಲ್ಲದೆ ಯಾರು ಅನಗತ್ಯವಾಗಿ ಯಾರ ಬಗ್ಗೆಯೂ ಮಾತನಾಡುವುದಿಲ್ಲ" ಎಂದು ಹೇಳಿದ್ದಾರೆ.

"ಚಿತ್ರರಂಗದಲ್ಲಿ ದಲಿತ ನಿರ್ದೇಶಕರು ಮತ್ತು ಇತರೆ ಜನರು ಚೀಪ್ ಕೆಲಸಗಳನ್ನು ಮಾಡುತ್ತಿದ್ದಾರೆ. ಅಂಥವರನ್ನು ಸಿನಿಮಾರಂಗದಿಂದ ಹೊರಹಾಕುವ ಸಮಯವಿದು" ಎಂದು ಸಂದರ್ಶನದಲ್ಲಿ ಹೇಳಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅನೇಕರು ಇದನ್ನು ಶೇರ್ ಮಾಡಿ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಮೀರಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಸುರಿಮಳೆಯೆ ಹರಿದುಬರುತ್ತಿದೆ.

ನಟಿ ಮತ್ತು ಮಾಡೆಲ್ ಮೀರಾ ವಿವಾದಗಳಲ್ಲಿ ಸಿಲುಕುವುದು ಇದೇ ಮೊದಲಲ್ಲ ಈ ಮೊದಲು ನಟ ವಿಜಯ್, ಸೂರ್ಯ ಮತ್ತು ಅವರ ಪತ್ನಿಯರಾದ ಸಂಗೀತ ಮತ್ತು ಜ್ಯೋತಿಕಾ ವಿರುದ್ಧವೂ ನಿಂದನೀಯ ಪದಗಳನ್ನು ಬಳಸಿ ವಿವಾದ ಮಾಡಿಕೊಂಡಿದ್ದರು. ನಟ ವಿಜಯ್ ಅವರ ಫ್ಯಾನ್ ಕ್ಲಬ್ ಗಳಿಗೆ ಹಣ ನೀಡಿ ಆಕೆಯ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡುವಂತೆ ಹೇಳುತ್ತಿದ್ದಾರೆ ಎಂದು ವಿಜಯ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಬಳಿಕ ನಟಿ ತ್ರಿಷಾ ವಿರುದ್ಧವೂ ಮೀರಾ ಟೀಕಾಪ್ರಹಾರ ನಡೆಸಿದ್ದರು. ಆದರೆ ತ್ರಿಷಾ ಅಭಿಮಾನಿಗಳು ಮೀರಾನನ್ನು ಸರಿಯಾಗಿ ತರಾಟೆ ತೆಗೆದುಕೊಂಡಿದ್ದರು. ಇದೀಗ ಜಾತಿ ಬಗ್ಗೆ ಮಾತನಾಡಿ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.

ಅಂದಹಾಗೆ ಜಾತಿ ಬಗ್ಗೆ ವಿವಾದ ಮಾಡಿಕೊಂಡವರಲ್ಲಿ ಬಾಲಿವುಡ್ ನಟಿಯೊಬ್ಬರು ಸೇರಿದ್ದಾರೆ. ಈ ಹಿಂದೆ ನಟಿ ಮುನ್ ಮುನ್ ದತ್ತ ಕೂಡ ಜಾತಿ ನಿಂದನೆ ಮಾಡಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದರು. ಯೂಟ್ಯೂಬ್ ಸಂದರ್ಶನದಲ್ಲಿ ಮುನ್ ಮುನ್ ದತ್ತ ಮಾತನಾಡಿ, "ನಾನು ಆ ಜಾತಿಯ ಜನರ ಹಾಗೆ ಕಾಣಬಾರದು' ಎಂದು ಒಂದು ಜಾತಿಯ ಹೆಸರನ್ನು ಉಲ್ಲೇಖಮಾಡಿ ಮಾತನಾಡಿದ್ದರು. ಬಳಿಕ ಮುನ್ ಮುನ್ ದತ್ತ ವಿರುದ್ದ ಕೇಸ್ ದಾಖಲಾಗಿತ್ತು. ಬಳಿಕ ಮುನ್ ಮುನ್ ದತ್ತ ಕ್ಷಮೆಕೇಳಿದ್ದರು.

More from Filmibeat

English summary
Tamil Nadu police booked Actress Meera Mithun for an alleged slur against SC in an Viral Video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X