40 ಕೋಟಿ ಗಳಿಸಿ ಅಬ್ಬರಿಸುತ್ತಿರುವ 6 ಕೋಟಿ ಬಜೆಟ್‌ನ ತಮಿಳು ಚಿತ್ರ; ಈ ವರ್ಷ ಅತಿಹೆಚ್ಚು ಗಳಿಸಿದ ಚಿತ್ರಗಳಿವು
2022ರಲ್ಲಿ ಕಲೆಕ್ಷನ್ ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಸೌತ್ ಇಂಡಿಯಾ ಇಂಡಸ್ಟ್ರಿಗಳು ಈ ವರ್ಷವೂ ಸಹ ಅಬ್ಬರಿಸುವಲ್ಲಿ ಯಶಸ್ವಿಯಾಗಿವೆ. ಕನ್ನಡ ಚಿತ್ರರಂಗದಲ್ಲಿ ಈ ವರ್ಷ ನೂರು ಕೋಟಿ ಕ್ಲಬ್ ಅನ್ನು ಯಾವ ಚಿತ್ರರಂಗವೂ ಸಹ ಸೇರದೇ ಇದ್ದು, ಉಳಿದ ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗಗಳ ಹಲವು ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿ ಅಬ್ಬರಿಸುತ್ತಿವೆ.
ಮಲಯಾಳಂ ಚಿತ್ರರಂಗದಿಂದ 2018 ಎಂಬ ಸಿನಿಮಾ ಇನ್ನೂರು ಕೋಟಿ ಗಳಿಕೆ ಮಾಡಿ ಕೇರಳ ಚಿತ್ರರಂಗದ ಇತಿಹಾಸದಲ್ಲಿಯೇ ಈ ಸಾಧನೆ ಮಾಡಿದ ಮೊದಲ ಚಿತ್ರ ಎನಿಸಿಕೊಂಡರೆ, ಅತ್ತ ತೆಲುಗಿನಲ್ಲಿ ಅನೇಕ ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿವೆ. ಇನ್ನು ತಮಿಳು ಚಿತ್ರರಂಗದಿಂದಲೂ ಸಹ ಈ ಬಾರಿ ನಾಲ್ಕು ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿದ ದಾಖಲೆ ಬರೆದಿವೆ.

ಮೊದಲಿಗೆ ದಳಪತಿ ವಿಜಯ್ ನಟನೆಯ ವಾರಿಸು ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿ ಗಳಿಕೆ ಮಾಡಿದರೆ, ಅದರ ಬೆನ್ನಲ್ಲೇ ಅಜಿತ್ ಕುಮಾರ್ ನಟನೆಯ ತುನಿವು ಚಿತ್ರ ಸಹ ನೂರು ಕೋಟಿ ಗಳಿಕೆ ಮಾಡುವಲ್ಲಿ ಯಶಸ್ವಿಯಾಯಿತು. ಬಳಿಕ ಧನುಷ್ ನಟನೆಯ ವಾತಿ ಹಾಗೂ ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಪಾರ್ಟ್ 2 ಚಿತ್ರ ಸಹ ನೂರು ಕೋಟಿಗಿಂತ ಹೆಚ್ಚು ಗಳಿಕೆಯನ್ನು ಮಾಡಿದವು.
ಹೀಗೆ ಕಾಲಿವುಡ್ ಈ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಫಸಲನ್ನೇ ಬೆಳೆದಿದ್ದು ಸಾಲು ಸಾಲು ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸಕ್ಸಸ್ ಕಾಣುತ್ತಲೇ ಇವೆ. ಸದ್ಯ ತಮಿಳುನಾಡು ಬಾಕ್ಸ್ ಆಫೀಸ್‌ನಲ್ಲಿ 'ಪೋರ್ ತೊಳಿಲ್' ಎಂಬ ಸಿನಿಮಾ ಅಬ್ಬರಿಸುತ್ತಿದ್ದು, 6 ಕೋಟಿ ವೆಚ್ಚದಲ್ಲಿ ತಯಾರಾದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 40 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ.
ಈ ಮೂಲಕ ಈ ವರ್ಷ ಬಿಡುಗಡೆಗೊಂಡು ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 40 ಕೋಟಿಗಿಂತ ಅಧಿಕ ಗಳಿಸಿದ ತಮಿಳಿನ ಏಳನೇ ಚಿತ್ರ ಎಂಬ ದಾಖಲೆಯನ್ನು ಪೋರ್ ತೊಳಿಲ್ ಬರೆದಿದೆ. ಚಿತ್ರಕ್ಕೆ ವಿಘ್ನೇಶ್ ರಾಜಾ ನಿರ್ದೇಶನವಿದ್ದು, ಶರತ್ ಕುಮಾರ್, ಅಶೋಕ್ ಸೆಲ್ವನ್ ಹಾಗೂ ನಿಖಿಲಾ ವಿಮಲ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ನಿರ್ದೇಶಕ ವಿಘ್ನೇಶ್ ರಾಜಾ ನಿರ್ದೇಶನ ಮಾಡಿರುವ ಮೊದಲ ಚಿತ್ರ ಇದಾಗಿದ್ದು, ಮೊದಲ ಚಿತ್ರದ ಮೂಲಕವೇ ಗೆದ್ದು ಬೀಗಿದ್ದಾರೆ. ಇದೊಂದು ಮರ್ಡರ್ ಸುತ್ತ ಸುತ್ತುವ ಥ್ರಿಲ್ಲರ್ ಕಥೆ ಆಗಿದ್ದು, ಸಿನಿ ರಸಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವರ್ಷ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಅತಿಹೆಚ್ಚು ಗಳಿಕೆ ಮಾಡಿರುವ ತಮಿಳು ಚಿತ್ರಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ..
1. ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ 2 ಚಿತ್ರ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 345.75 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.
2. ದಳಪತಿ ವಿಜಯ್ ನಟನೆಯ ವಾರಿಸು ಚಿತ್ರ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 306.20 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.
3. ತಲಾ ಅಜಿತ್ ಕುಮಾರ್ ನಟನೆಯ ತುನಿವು ಚಿತ್ರ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 194.55 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.
4. ಧನುಷ್ ನಟನೆಯ ವಾತಿ ಚಿತ್ರ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 105.85 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.
5. ವಿಡುದಲೈ ಪಾರ್ಟ್ 1 ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 60.60 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.
6. ಪಿಚ್ಚೈಕಾರನ್ 2 ಚಿತ್ರ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 44 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.
7. ಪೋರ್ ತೊಳಿಲ್ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 40 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.
8. ಪತ್ತು ತಲ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 38.15 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.


Click it and Unblock the Notifications











