ಮೂರನೇ ಮದುವೆಯಾದ ನಟ ಮತ್ತು ನಿರ್ಮಾಪಕ ಆರ್ ಕೆ ಸುರೇಶ್

ಕೊರೊನಾ ಲಾಕ್ ಡೌನ್ ನಡುವೆಯೂ ಮದುವೆ ಸಂಭ್ರಮವೇನು ಕಡಿಮೆ ಆಗಿಲ್ಲ. ಅದ್ದೂರಿಯಾಗಿ, ಸಾವಿರಾರು ಜನರ ನಡುವೆ ಮದುವೆಯಾಗದಿದ್ದರೂ ಸರಳವಾಗಿ ಹಸೆಮಣೆ ಏರುತ್ತಿದ್ದಾರೆ. ಲಾಕ್ ಡೌನ್ ಬಳಿಕ ಸಾಕಷ್ಟು ಮಂದಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಚಿತ್ರರಂಗದಲ್ಲೂ ಮದುವೆ ಸುಗ್ಗಿ ಜೋರಾಗೆ ಇದೆ.

ಕುಟುಂಬದವರು ಮತ್ತು ತೀರ ಆಪ್ತರ ಸಮ್ಮುಖದಲ್ಲಿ ಮದುವೆಯಾಗುತ್ತಿದ್ದಾರೆ. ಇದೀಗ ತಮಿಳು ನಟ ಮತ್ತು ನಿರ್ಮಾಪಕ ಆರ್ ಕೆ ಸುರೇಶ್ ಮೂರನೇ ಮದುವೆಯಾಗಿ ಅಚ್ಚರಿ ಮೂಡಿಸಿದ್ದಾರೆ. ಇತ್ತೀಚಿಗೆ ಸುರೇಶ್ ಪ್ರೇಯಸಿ ಮಧು ಜೊತೆ ಹಸೆಮಣೆ ಏರಿದ್ದಾರೆ. ಇಬ್ಬರು ಗುಟ್ಟಾಗಿ ಮದುವೆಯಾಗಿದ್ದರೆ ಎನ್ನುವ ವಿಚಾರ ವೈರಲ್ ಆಗುತ್ತಿದ್ದಂತೆ ನಟ ಸುರೇಶ್, ಸಾಮಾಜಿಕ ಜಾಲತಾಣದಲ್ಲಿ ಮದುವೆ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ...

ಆರ್ ಕೆ ಸುರೇಶ್ ಹೇಳಿದ್ದೇನು?

ಆರ್ ಕೆ ಸುರೇಶ್ ಹೇಳಿದ್ದೇನು?

'ನನ್ನ ಸಂತೋಷದ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತೋಷವಾಗಿದೆ. ಹೌದು, ನಾನು ಮದುವೆಯಾಗಿದ್ದೇನೆ. ನಿಮ್ಮ ಪ್ರೀತಿ, ಆಶೀರ್ವಾದ ಮತ್ತು ಬೆಂಬಲಕ್ಕಾಗಿ ತುಂಬಾ ಧನ್ಯವಾದಗಳು' ಎಂದು ಹೇಳಿ ಪತ್ನಿ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

15 ಜನರ ಸಮ್ಮುಖದಲ್ಲಿ ಮದುವೆ

15 ಜನರ ಸಮ್ಮುಖದಲ್ಲಿ ಮದುವೆ

ಸುರೇಶ್ ಮದುವೆಯಾಗುತ್ತಿರುವ ವಿಚಾರವನ್ನು ಯಾರಿಗೂ ತಿಳಿಸಿಲ್ಲವಂತೆ. ಚೆನ್ನೈನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಕೇವಲ 15 ಜನರು ಮಾತ್ರ ಭಾಗಿಯಾಗಿದ್ದರಂತೆ. ಮದುವೆ ಫೋಟೋ ಶೇರ್ ಮಾಡಿ 'ದಯವಿಟ್ಟು ನನ್ನ ಖಾಸಗಿ ಜೀವನವನ್ನು ಗೌರವಿಸಿ' ಎಂದು ಮನವಿ ಮಾಡಿಕೊಂಡಿದ್ದಾರೆ. ಆರ್ ಕೆ ಸುರೇಶ್ ದಿಢೀರ್ ಮದುವೆ ಸುದ್ದಿ ಸ್ನೇಹಿತರಿಗೆ ಮತ್ತು ಅಭಿಮಾನಿಗಳಿಗೆ ಶಾಕ್ ನೀಡಿದೆ. ಆದರೂ ಅಭಿಮಾನಿಗಳು ಮತ್ತು ಸ್ನೇಹಿತರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ.

ಸುರೇಶ್ ಗೆ ಇದು ಮೂರನೇ ಮದುವೆ

ಸುರೇಶ್ ಗೆ ಇದು ಮೂರನೇ ಮದುವೆ

ಆರ್ ಕೆ ಸುರೇಶ್ ಗೆ ಇದು ಮೂರನೇ ಮದುವೆ. ಈ ಮೊದಲು ಅಂದರೆ ಅನೇಕ ವರ್ಷಗಳ ಹಿಂದೆ ಕಾಲೇಜು ಗೆಳತಿಯನ್ನು ಮದುವೆಯಾಗಿದ್ದರು. ಈ ಜೋಡಿಗೆ ಒಬ್ಬ ಮಗನಿದ್ದಾರೆ. ಆದರೆ ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಇಬ್ಬರು ವಿಚ್ಛೇದನ ಪಡೆದು ದೂರ ದೂರ ಆಗಿದ್ದಾರೆ. ಬಳಿಕ ಸುರೇಶ್ 2017ರಲ್ಲಿ ಕಿರುತೆರೆ ನಟಿ ದಿವ್ಯ ಜೊತೆ ಸುರೇಶ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಆ ಮದುವೆ ಕೂಡ ನಡೆಯಲಿಲ್ಲ.

Recommended Video

Dhruva Sarja First Reaction For Chiru Baby | ಅಣ್ಣನ ಮಗು ನೋಡಿ ಧ್ರುವನಿಗೆ ಮೊದಲು ಅನ್ನಿಸಿದ್ದೇನು ಗೊತ್ತಾ
ಆರ್ ಕೆ ಸುರೇಶ್ ಸಿನಿಮಾಗಳು

ಆರ್ ಕೆ ಸುರೇಶ್ ಸಿನಿಮಾಗಳು

ಇದೀಗ ಗೆಳತಿ ಮಧು ಜೊತೆ ಹೊಸ ಜೀವನ ಪ್ರಾರಂಭಿಸಿದ್ದಾರೆ. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಆರ್ ಕೆ ಸುರೇಶ್ ವಿಚಿಥಿರನ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಚಿತ್ರದಲ್ಲಿ ದ್ವಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ಮಲಯಾಳಂನ ಸೂಪರ್ ಹಿಟ್ ಜೋಸೆಫ್ ಸಿನಿಮಾ ರಿಮೇಕ್ ಇದಾಗಿದೆ.

More from Filmibeat

English summary
Tamil producer come Actor RK Suresh confirms his secret wedding with Madhu, Shares a marriage photo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X