For Quick Alerts
  ALLOW NOTIFICATIONS  
  For Daily Alerts

  ತ್ರಿಷಾ ವಿರುದ್ಧ ನಿರ್ಮಾಪಕರು ಗರಂ: ನಯನತಾರ ಫಾಲೋ ಮಾಡಿದ್ರಾ ನಟಿ!

  |

  ಸೌತ್ ಸುಂದರಿ ತ್ರಿಷಾ ಕೃಷ್ಣನ್ ವಿರುದ್ಧ ತಮಿಳು ನಿರ್ಮಾಪಕರು ಬೇಸರ ವ್ಯಕ್ತಪಡಿಸಿದ್ದಾರೆ. ತ್ರಿಷಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಪರಮಪದಂ ವೆಲೈಯಾಟ್ಟು' ಈ ತಿಂಗಳ ಅಂತ್ಯಕ್ಕೆ ತೆರೆಗೆ ಬರಲು ಸಜ್ಜಾಗಿದೆ.

  ಈ ಮಧ್ಯೆ ಚಿತ್ರದ ನಿರ್ಮಾಪಕರು ನಟಿ ವಿರುದ್ಧ ಗರಂ ಆಗಿದ್ದಾರೆ. ಸಿನಿಮಾದ ಪ್ರಚಾರಕ್ಕೆ ತ್ರಿಷಾ ಭಾಗಿಯಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಮುಂದಿನ ದಿನದಲ್ಲಿ ಯಾವ ಕಾರ್ಯಕ್ರಮಕ್ಕೂ ಬರಲಿಲ್ಲ ಅಂದ್ರೆ ಪಡೆದುಕೊಂಡಿರುವ ಸಂಭಾವನೆಯಲ್ಲಿ ಶೇಕಡವಾರು ಹಣ ಹಿಂತಿರುಗಿಸಲಿ ಎಂದು ಬೇಡಿಕೆಯಿಟ್ಟಿದ್ದಾರೆ.

  ಮದುವೆ ಬಗ್ಗೆ ತನ್ನ ಮನದಾಸೆ ಹಂಚಿಕೊಂಡ ನಟಿ ತ್ರಿಷಾ ಕೃಷ್ಣನ್!ಮದುವೆ ಬಗ್ಗೆ ತನ್ನ ಮನದಾಸೆ ಹಂಚಿಕೊಂಡ ನಟಿ ತ್ರಿಷಾ ಕೃಷ್ಣನ್!

  ಇತ್ತೀಚಿಗಷ್ಟೆ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಈ ಕಾರ್ಯಕ್ರಮಕ್ಕೆ ತ್ರಿಷಾ ಬರಲಿಲ್ಲ. ಇದು ಸಹಜವಾಗಿ ನಿರ್ಮಾಪಕರಿಗೆ ಮತ್ತು ಅಭಿಮಾನಿಗಳು ಬೇಸರ ಉಂಟು ಮಾಡಿತ್ತು.

  ಸದ್ಯ ತಮಿಳು ಇಂಡಸ್ಟ್ರಿಯಲ್ಲಿ ನಯನತಾರಾ ಮತ್ತು ಅಜಿತ್ ನಿರ್ಮಾಪಕ ಜೊತೆ ಒಪ್ಪಂದ ಮಾಡಿಕೊಂಡು ಸಿನಿಮಾ ಮಾಡ್ತಾರೆ. ಸಿನಿಮಾ ಶೂಟಿಂಗ್ ಮುಗಿಸಿದ ಬಳಿಕ ಯಾವುದೇ ಪ್ರಚಾರದ ಕಾರ್ಯಕ್ರಮದಲ್ಲೂ ಭಾಗಿಯಾಗಿಲ್ಲ ಎಂದು ಅಗ್ರಿಮೆಂಟ್ ನಲ್ಲಿ ಸಹಿ ಮಾಡುತ್ತಾರೆ. ಆದರೆ, ತ್ರಿಷಾ ಅವರೆ ಈ ರೀತಿ ಯಾವುದೇ ಒಪ್ಪಂದ ಮಾಡಿಲ್ಲ. ಆದರೂ ಕಾರ್ಯಕ್ರಮಕ್ಕೆ ಬಂದಿಲ್ಲ ಎಂದು ನಿರ್ಮಾಪಕರು ಆರೋಪಿಸಿದ್ದಾರೆ.

  ನಟಿ ಚಾರ್ಮಿಗೆ ಸ್ಟಾರ್ ಹೀರೋಯಿನ್ ಮೇಲೆ ಲವ್ವು: ಮದ್ವೆ ಆಗೋಕೆ ರೆಡಿ ಅಂತೆ.!ನಟಿ ಚಾರ್ಮಿಗೆ ಸ್ಟಾರ್ ಹೀರೋಯಿನ್ ಮೇಲೆ ಲವ್ವು: ಮದ್ವೆ ಆಗೋಕೆ ರೆಡಿ ಅಂತೆ.!

  ತ್ರಿಷಾ ಚಿರಂಜೀವಿ ನಟನೆಯ 152ನೇ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಮಲಯಾಳಂನಲ್ಲಿ ಮೋಹನ್ ಲಾಲ್ ಜೊತೆ 'ರಾಮ್' ಸಿನಿಮಾ ಮಾಡುತ್ತಿದ್ದಾರೆ. ಮಣಿರತ್ನಂ ನಿರ್ದೇಶನದ 'ಪೊನ್ನಿಯನ್ ಸೆಲ್ವೆನ್' ಚಿತ್ರದಲ್ಲೂ ತ್ರಿಷಾ ಅಭಿನಯಿಸುತ್ತಿದ್ದಾರೆ. ಈ ಮೆಗಾ ಚಿತ್ರಗಳ ಜೊತೆ ರಾಂಗಿ, ಶುಗರ್, ಪರಮಪದಂ ವೆಲೈಯಾಟ್ಟು ಸೇರಿದಂತೆ ಮತ್ತಷ್ಟು ಸಿನಿಮಾ ಮಾಡುತ್ತಿದ್ದಾರೆ ತ್ರಿಷಾ.

  English summary
  Tamil movie Paramapadham Vilayattu producer fire on trisha krishnan for she did not attending promotion events.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X