'KGF-1' ಹಾಗೂ 'KGF-2' ತಮಿಳುನಾಡು ಕಲೆಕ್ಷನ್ ಎಷ್ಟಾಗಿತ್ತು? ತಮಿಳು ನಿರ್ಮಾಪಕನ ಮಾಹಿತಿ ಇಲ್ಲಿದೆ

ಪ್ರಶಾಂತ್ ನೀಲ್ ನಿರ್ದೇಶನದ 'KGF' ಸರಣಿ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿದ್ದು ಗೊತ್ತೇಯಿದೆ. ಈ ಸಿನಿಮಾ ಬಂದು ಹೋಗಿ ವರ್ಷಗಳೇ ಕಳೆದರೂ ಆ ಕ್ರೇಜ್ ಕಮ್ಮಿ ಆಗಿಲ್ಲ. ಜನ ಇವತ್ತಿಗೂ ರಾಕಿಭಾಯ್, ಆ ಕಥೆ, ಆ ಸಿನಿಮಾ, ಅದು ಬರೆದ ದಾಖಲೆ ಮರೆತ್ತಿಲ್ಲ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಹೊಸ ಇತಿಹಾಸ ನಿರ್ಮಿಸಿತ್ತು.

ಅಂದಾಜು 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ KGF-2 ಧೂಳೆಬ್ಬಿಸಿತ್ತು. ಮೊದಲ ಭಾಗ 250 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಆದರ ಚಾಪ್ಟರ್-2 ಎಲ್ಲರ ನಿರೀಕ್ಷೆ ಮೀರಿ 1225 ಕೋಟಿ ರೂ.ಗೂ ಅಧಿಕ ಕೊಳ್ಳೆ ಹೊಡೆದಿತ್ತು. ಅಂದರೆ ಮೊದಲ ಭಾಗಕ್ಕಿಂತ 5 ಪಟ್ಟು ಹೆಚ್ಚು ಗಳಿಕೆ ಕಂಡು ಸಂಚಲನ ಸೃಷ್ಟಿಸಿತ್ತು.

Tamil producer KE Gnanavel Raja revealed KGF part 1 and 2 tamilnadu box office collection

ಕರ್ನಾಟಕದಲ್ಲಿ ಮಾತ್ರವಲ್ಲ ಅಕ್ಕಪಕ್ಕ ರಾಜ್ಯಗಳಲ್ಲಿ ವಿದೇಶಗಳಲ್ಲಿ KGF-2 ಹೆಚ್ಚು ಸದ್ದು ಮಾಡಿತ್ತು. ಮುಖ್ಯವಾಗಿ ಹಿಂದಿ ಬೆಲ್ಟ್, ಆಂಧ್ರ, ತೆಲಂಗಾಣ ಹಾಗೂ ತಮಿಳುನಾಡಿದಲ್ಲಿ ರಾಕಿ ಭಾಯ್‌ ಆರ್ಭಟಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿತ್ತು. ಮೊದಲ ಭಾಗವನ್ನು ಚಿತ್ರಮಂದಿರದಲ್ಲಿ ನೋಡಿದವರು, ಓಟಿಟಿ, ಟಿವಿಯಲ್ಲಿ ನೋಡಿದವರು ಎರಡನೇ ಭಾಗವನ್ನು ಚಿತ್ರಮಂದಿರದಲ್ಲೇ ನೋಡಬೇಕು ಎಂದು ಸಿದ್ಧರಾಗಿದ್ದರು. ಹಾಗಾಗಿ ಎಲ್ಲೆಡೆ ಭರ್ಜರಿ ಓಪನಿಂಗ್ ಸಿಕ್ಕಿದೆ.

ತಮಿಳುನಾಡಿನಲ್ಲಿ KGF-2 ಬಿಡುಗಡೆಯಾದ ಅದೇ ದಿನ ದಳಪತಿ ವಿಜಯ್ ನಟನೆಯ 'ಬೀಸ್ಟ್' ತೆರೆಗಪ್ಪಳಿಸಿತ್ತು. ಕಾಲಿವುಡ್‌ನಲ್ಲಿ ವಿಜಯ್ ಕ್ರೇಜ್‌ ಬಗ್ಗೆ ಹೇಳುವುದು ಬೇಡ. ರಜನಿಕಾಂತ್ ಬಿಟ್ಟರೆ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ. ಆದರೆ ಕನ್ನಡದ 'KGF-2' ಎದುರು 'ಬೀಸ್ಟ್' ಡಲ್ಲಾಗಿತ್ತು. ಅಷ್ಟರಮಟ್ಟಿಗೆ ತಮಿಳು ಮಣ್ಣಿನಲ್ಲಿ ಕನ್ನಡ ಸಿನಿಮಾ ಅಬ್ಬರಿಸಿತ್ತು.

ಯಶ್ ವಿಷನ್, ಹೊಂಬಾಳೆ ಫಿಲ್ಮ್ಸ್ ಸಾಹಸ, ಪ್ರಶಾಂತ್ ನೀಲ್ ಅದ್ಭುತ ಮೇಕಿಂಗ್‌ನಿಂದ 'KGF-2' ಎಲ್ಲೆಲ್ಲೂ ಸಂಚಲನ ಸೃಷ್ಟಿಸಿತ್ತು. ಅದ್ಯಾವಮಟ್ಟಿಗೆ ಅಂದ್ರೆ ಪರಭಾಷಾ ಫಿಲ್ಮ್ ಮೇಕರ್ಸ್ ಅಸೂಯೆ ಪಡುವಷ್ಟು. 'KGF-2' ಕಲೆಕ್ಷನ್ ಬಗ್ಗೆ ಅಧಿಕೃತವಾಗಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಯಾವುದೇ ಮಾಹಿತಿ ನೀಡಲಿಲ್ಲ. ಒಂದು ಅಂದಾಜಿನ ಪ್ರಕಾರ ಸಿನಿಮಾ ಗಳಿಕೆ ಬಗ್ಗೆ ವರದಿಗಳಾಗಿತ್ತು.

ಕಾಲಿವುಡ್ ನಿರ್ಮಾಪಕ ಜ್ಞಾನವೇಲ್ ರಾಜ ತಮಿಳುನಾಡಿನಲ್ಲಿ 'KGF' ಸರಣಿ ಸಿನಿಮಾಗಳ ಆರ್ಭಟ ಹೇಗಿತ್ತು ಎನ್ನುವುದನ್ನು ನೆನಪಿಸಿಕೊಂಡಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ 'KGF'-2 ಚಿತ್ರ ನೋಡಿದಾಗ ನನಗೆ ಗೂಸ್‌ಬಂಪ್ಸ್ ಬಂದಿತ್ತು ಎಂದಿದ್ದಾರೆ. ಸಿನಿಮಾ ಕಲೆಕ್ಷನ್ ಬಗ್ಗೆ ಹುಬ್ಬೇರಿಸಿದ್ದಾರೆ. ಸದ್ಯ ಜ್ಞಾನವೇಲ್ ರಾಜ ಮಾತನಾಡಿರುವ ವೀಡಿಯೋ ವೈರಲ್ ಆಗುತ್ತಿದೆ.

ಸಂದರ್ಶನದಲ್ಲಿ ಮಾತನಾಡುತ್ತಾ "KGF'-2 ಸಿನಿಮಾ ಬಗ್ಗೆ ಕೇಳುತ್ತಿದ್ದರೆ ನನಗೆ ಗೂಸ್‌ಬಂಪ್ಸ್ ಬರುತ್ತಿದೆ. ನನ್ನ ಫಸ್ಟ್ ಡೇ ಫಸ್ಟ್ ಶೋ ಅನುಭವ ಆ ರೀತಿ ಇತ್ತು. ನಮಗೆ ಯಶ್ ಯಾರು ಎಂದು ಗೊತ್ತಿಲ್ಲ, ಪ್ರಶಾಂತ್ ನೀಲ್ ಯಾರೋ ಗೊತ್ತಿಲ್ಲ, ಹೊಂಬಾಳೆ ಫಿಲ್ಮ್ಸ್ ಗೊತ್ತಿಲ್ಲ. ಯಾರು ಗೊತ್ತಿಲ್ಲ. ಆದರೆ ನಾವು ಸಿನಿಮಾದಲ್ಲೇ ಕನೆಕ್ಟ್ ಆಗಿದ್ದು" ಎಂದು ಜ್ಞಾನವೇಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

"ಊಟ ಹಾಗೂ ಸಿನಿಮಾ ಮಾತ್ರ. ಯಾರು ಮಾಡಿದರೂ ಎನ್ನುವುದು ಗೊತ್ತಿಲ್ಲದೇ ಇಷ್ಟಪಡುತ್ತೇವೆ, ಆಸ್ವಾದಿಸುತ್ತೇವೆ. 'KGF' ಎಲ್ಲವನ್ನು ಮುರಿದು ಹಾಕಿಬಿಟ್ಟಿತು. 'KGF'-1 ತಮಿಳುನಾಡು ಶೇರ್ 75 ಲಕ್ಷ ರೂಪಾಯಿ. ಔಟ್‌ರೇಟ್ ಕೊಡುವಂತೆ ನಾನು 15 ಕೋಟಿ ರೂ. ಆಫರ್ ಮಾಡಿದೆ. ಅವರು ಕೊಡಲ್ಲ ನಾವೇ ಪ್ಯಾನ್ ವರ್ಲ್ಡ್ ರಿಲೀಸ್ ಮಾಡ್ತೀವಿ ಅಂದ್ರು. ಅದು ಭರವಸೆಯಿಂದ ಹೊಂಬಾಳೆ ಸಂಸ್ಥೆ ಇತ್ತು"

"ಚಾಪ್ಟರ್-1 ತಮಿಳುನಾಡಿನಲ್ಲಿ 75 ಲಕ್ಷ ರೂ. ಶೇರ್ ತಂದುಕೊಟ್ಟಿತ್ತು. ಚಾಪ್ಟರ್-2 ಬರೋಬ್ಬರಿ 62 ಕೋಟಿ ರೂಪಾಯಿ. ಮೊದಲ ಭಾಗ 75 ಲಕ್ಷ ಆಗಿದ್ದರೆ ಎರಡನೇ ಭಾಗ 62 ಕೋಟಿ ರೂ. ಅಂದ್ರೆ ಅರ್ಥ ಮಾಡ್ಕೊಳಿ. 125 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಶೇರ್ 62 ಕೋಟಿ ರೂ." ಎಂದು ಹೇಳಿ ಹುಬ್ಬೇರಿಸಿದ್ದಾರೆ.

ಚಾಪ್ಟರ್-2 ಬಿಡುಗಡೆಗೂ ಮುನ್ನ ಜ್ಞಾನವೇಲ್ ಬೆಂಗಳೂರಿನಲ್ಲಿ ಯಶ್ ಭೇಟಿ ಆಗಿದ್ದನ್ನು ಇದೇ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಒಂದೆರಡು ನಿಮಿಷ ಅವರೊಟ್ಟಿಗೆ ಮಾತನಾಡಿದೆ. ಅವರ ವಿಷನ್, ಸಿನಿಮಾ ಮೇಲಿನ ಪ್ರೀತಿ ಕಂಡು ಶಾಕ್ ಆಗಿದ್ದೆ. ಅವರ ಮಾತು ಕೇಳಿ ನನ್ನ ಯೋಚನೆ ಬದಲಾಗಿಬಿಟ್ಟಿತು ಎಂದಿದ್ದರು.

More from Filmibeat

English summary
KE Gnanavel Raja opens up about Yash's Kgf series craze in tamil nadu;
Read more about: filmibeat original yash kgf
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X