ನಟಿ ಮಹಾಲಕ್ಷ್ಮಿ ಪತಿ ರವೀಂದರ್ ಆರೋಗ್ಯ ಸಮಸ್ಯೆ; ಐಸಿಯುನಲ್ಲಿ ಚಿಕಿತ್ಸೆ
ತಮಿಳು ಕಿರುತೆರೆ ನಟಿ ಮಹಾಲಕ್ಷ್ಮೀ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಮದುವೆ ಆಗಿದ್ದು ಭಾರೀ ಸುದ್ದಿ ಆಗಿತ್ತು. ಅದಕ್ಕೆ ಕಾರಣ ರವೀಂದರ್ ದೇಹದ ಗಾತ್ರ. ಇಷ್ಟು ಚಿಕ್ಕ ಹುಡುಗಿ ರೀತಿ ಇರುವ ಮಹಾಲಕ್ಷ್ಮಿ, ರವೀಂದರ್ ಅವರನ್ನು ಹಣಕ್ಕಾಗಿ ಮದುವೆ ಆಗಿದ್ದಾರೆ ಎಂದು ಟ್ರೋಲ್ ಮಾಡಿದ್ದರು. ಬಳಿಕ ಇವರಿಬ್ಬರ ವಿಚಾರಗಳು ಸಾಕಷ್ಟು ಚರ್ಚೆ ಬಂದಿತ್ತು.
ನಿರ್ಮಾಪಕರೊಬ್ಬರಿಗೆ ಮೋಸ ಮಾಡಿರುವ ಪ್ರಕರಣದಲ್ಲಿ ರವೀಂದರ್ ಬಂಧವಾಗಿತ್ತು. ಆ ವಿಚಾರ ಕೂಡ ಭಾರೀ ಸುದ್ದಿ ಆಗಿತ್ತು. ಇನ್ನು ಟ್ರೋಲ್‌ಗಳಿಗೆಲ್ಲಾ ದಂಪತಿ ತಿರುಗೇಟು ನೀಡುತ್ತಾ ಬರ್ತಿದ್ದಾರೆ. ಇನ್ನು ಯೂಟ್ಯೂಬ್ ಸಂದರ್ಶನದಲ್ಲಿ ತಮ್ಮ ಮಾತುಗಳಿಂದ ರವೀಂದರ್ ಸದಾ ಚರ್ಚೆಗೆ ಗ್ರಾಸವಾಗುತ್ತಾರೆ. ಇದೀಗ ಆಕ್ಸಿಜನ್ ಮಾಸ್ಕ್ ಸಮೇತ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿ ಗಮನ ಸೆಳೆದಿದ್ದಾರೆ.

ಕಳೆದೆರಡು ದಿನಗಳಿಂದ ರವೀಂದರ್ ಚಂದ್ರಶೇಖರ್ ಆರೋಗ್ಯದ ಬಗ್ಗೆ ಸಾಕಷ್ಟು ಊಹಾಪೋಹಗಳು ಕೇಳಿಬರ್ತಿದೆ. ಇದರ ಬೆನ್ನಲ್ಲೇ ರವೀಂದರ್ ಹೀಗೆ ಆಕ್ಸಿಜನ್ ಮಾಸ್ಕ್ ಸಮೇತ ಕಾಣಿಸಿಕೊಂಡಿರುವುದು ವೈರಲ್ ಆಗುತ್ತಿದೆ. ಯೂಟ್ಯೂಬ್ ಚಾನಲ್‌ವೊಂದರಲ್ಲಿ ತಮಿಳು ಬಿಗ್‌ಬಾಸ್ ಕಾರ್ಯಕ್ರಮದ ಬಗ್ಗೆ ರವೀಂದರ್ ಮಾತನಾಡುತ್ತಿರುತ್ತಾರೆ. ಶೋ ಸ್ಕ್ರಿಪ್ಟೆಡ್, ಎಲ್ಲರೂ ಫೇಕ್ ಎಂದು ವಿವಾದಾತ್ಮಕ ಹೇಳಿಕೆ ನೀಡುತ್ತಿರುತ್ತಾರೆ.
ಬಿಗ್‌ಬಾಸ್ ಶೋ ಬಗ್ಗೆ ವಿಮರ್ಶೆ ಮಾಡುವ ಮೂಲಕ ಸದಾ ಸುದ್ದಿಯಲ್ಲಿರುವ ರವೀಂದ್ರರ್, ಇದೀಗ ಆಕ್ಸಿಜನ್ ಮಾಸ್ಕ್ ಸಮೇತ ಸಂದರ್ಶನದಲ್ಲಿ ಭಾಗಿ ಆಗಿ ಮಾತನಾಡಿದ್ದಾರೆ. ಈ ವೇಳೆ ತಮ್ಮ ಆರೋಗ್ಯ ಸಮಸ್ಯೆಯ ಬಗ್ಗೆ ಮಾತನಾಡಿದ್ದಾರೆ. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದು ಎದೆನೋವು ಜಾಸ್ತಿಯಿದೆ. ಉಸಿರಾಟದ ಸಮಸ್ತೆ ಜಾಸ್ತಿ ಇದ್ದಿದ್ದರಿಂದ ಐಸಿಯುನಲ್ಲಿ ಒಂದು ಚಿಕಿತ್ಸೆ ಪಡೆದು ಬಂದೆ. ಐಸಿಯುನಲ್ಲಿ ಇದ್ದಾಗಲೂ ಬಿಗ್‌ಬಾಸ್ ಶೋ ನೋಡ್ದೆ. ಅದರ ಬಗ್ಗೆ ಮಾತನಾಡುತ್ತೀನಿ" ಎಂದು ಮಾತು ಆರಂಭಿಸಿದ್ದಾರೆ.

ರವೀಂದ್ರರ್ ಆರೋಗ್ಯದ ಬಗ್ಗೆ ತಿಳಿದ ಅಭಿಮಾನಿಗಳು ಕೆಲ ದಿನಗಳ ಕಾಲ ಬಿಗ್‌ಬಾಸ್ ವಿಮರ್ಶೆ ನಿಲ್ಲಿಸಿ ವಿಶ್ರಾಂತಿ ಪಡೆಯಿರಿ ಎಂದು ಸಲಹೆ ನೀಡುತ್ತಿದ್ದಾರೆ. 'ವಿದಿಯುಂ ವರೈ ಕಾತಿರು' ಸಿನಿಮಾ ವೇಳೆ ಮಹಾಲಕ್ಷ್ಮಿ ಹಾಗೂ ರವೀಂದರ್ ನಡುವೆ ಪರಿಚಯ, ಸ್ನೇಹ ಶುರುವಾಗಿತ್ತು. ಬಳಿಕ ಇಬ್ಬರೂ ಮದುವೆ ಆಗಿದ್ದರು. ಅದಾಗಲೇ ಆಕೆ ಒಂದು ಮದುವೆ ಆಗಿ ಡಿವೋರ್ಸ್ ಪಡೆದಿದ್ದರು.
ಮಹಾಲಕ್ಷ್ಮಿ 2ನೇ ಮದುವೆ ವಿಚಾರ ಪದೇ ಪದೆ ಚರ್ಚೆಗೆ ಬರುತ್ತಿರುತ್ತದೆ. ಆಕೆಗೆ ರವೀಂದರ್ ದುಬಾರಿ ಉಡುಗೊರೆ ಕೊಟ್ಟಿದ್ದಾರೆ ಎನ್ನಲಾಗಿತ್ತು. ಇನ್ನು ಇತ್ತೀಚೆಗೆ ಇಬ್ಬರೂ ಡಿವೋರ್ಸ್ ಪಡೆದು ದೂರಾಗುತ್ತಾರೆ ಎನ್ನುವ ವದಂತಿ ಹರಡಿತ್ತು. ಅದೆಲ್ಲ ಸುಳ್ಳು ಎಂದು ಮಹಾಲಕ್ಷ್ಮೀ ಪರೋಕ್ಷವಾಗಿ ತಿಳಿಸಿದ್ದರು. ಇನ್ನು ಮದುವೆಯಾದ ವರ್ಷಕ್ಕೆ ಪ್ರಕರಣವೊಂದರಲ್ಲಿ ರವೀಂದರ್ ಹೆಸರು ತಳುಕು ಹಾಕಿಕೊಂಡಿತ್ತು.
ಲಿಬ್ರಾ ಪ್ರೊಡಕ್ಷನ್ಸ್ ತಮ್ಮದೇ ಸಿನಿಮಾ ನಿರ್ಮಾಣ ಸಂಸ್ಥೆ ಹೊಂದಿರುವ ರವೀಂದರ್ ಚಂದ್ರಶೇಖರ್ ಒಂದರೆಡು ಸಿನಿಮಾ ನಿರ್ಮಿಸಿದ್ದಾರೆ. ಸಿನಿಮಾ ಮಾಡುವುದಾಗಿ ಹೇಳಿ ರವೀಂದರ್ ಚಂದ್ರಶೇಖರ್ ಮನೀಲಾಂಡರಿಂಗ್ ಮಾಡಿದ್ದಾರೆ, ವ್ಯಕ್ತಿಯೊಬ್ಬರ ಬಳಿ ಹಣ ಪಡೆದು ವಾಪಸ್ ನೀಡಲಿಲ್ಲ ಎಂದು ದೂರು ದಾಖಲಾಗಿತ್ತು. ಈ ಸಂಬಂಧ ಜೈಲು ವಾಸ ಅನುಭವಿಸಿ ಬಂದಿದ್ದರು.
ಇನ್ನು ಬಿಗ್‌ಬಾಸ್ ಶೋ ಬಗ್ಗೆ ರವೀಂದರ್ ವಿಮರ್ಶೆಯನ್ನು ಕೆಲವರು ಮೆಚ್ಚಿಕೊಂಡರೆ ಮತ್ತೆ ಕೆಲವರು ವಿರೋಧಿಸುತ್ತಾ ಬರ್ತಿದ್ದಾರೆ. ಕಮಲ್ ಹಾಸನ್ ನಿರೂಪಣೆಯಲ್ಲಿ ತಮಿಳು ಬಿಗ್‌ಬಾಸ್ ಶೋ 7ನೇ ಸೀಸನ್ ನಡೀತಿದೆ.


Click it and Unblock the Notifications










