For Quick Alerts
  ALLOW NOTIFICATIONS  
  For Daily Alerts

  14 ದಿನಗಳಲ್ಲಿ 40 ಕೋಟಿ ಗಳಿಸಿದ್ದ 'ಲವ್ ಟುಡೇ' ಸಿನಿಮಾದ ಹೆಚ್‌ಡಿ ಪ್ರಿಂಟ್ ಲೀಕ್!

  |

  ಲವ್ ಟುಡೇ, ಕರ್ನಾಟಕದಲ್ಲಿರುವ ಸಿನಿ ರಸಿಕರು ಈ ತಮಿಳು ಚಿತ್ರವನ್ನು ನೋಡಿರದಿದ್ದರೂ ಸಹ ಖಂಡಿತವಾಗಿಯೂ ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರದ ಹೆಸರನ್ನು ಕೇಳಿಯೇ ಇರುತ್ತಾರೆ. ಅಷ್ಟರ ಮಟ್ಟಿಗೆ ಸದ್ದು ಮಾಡುತ್ತಿದೆ ಈ ಚಿತ್ರ. ಮಾಡರ್ನ್ ಡೇ ಲವರ್ಸ್ ಕುರಿತಾದ ಈ ಚಿತ್ರ ಪಕ್ಕಾ ಕಾಮಿಡಿ ಎಂಟರ್‌ಟೈನರ್ ಆಗಿದ್ದು ಸಿನಿ ರಸಿಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

  ಇನ್ನು ನವೆಂಬರ್ 4ರಂದು ತಮಿಳುನಾಡಿನಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಈ ಹಿಂದೆ ಕೊಮಾಲಿ ಎಂಬ ಸೂಪರ್ ಹಿಟ್ ಚಿತ್ರ ನಿರ್ದೇಶಿಸಿದ್ದ ನಿರ್ದೇಶಕ ಪ್ರದೀಪ್ ರಂಗನಾಥನ್ ಆಕ್ಷನ್ ಕಟ್ ಹೇಳುವುದು ಮಾತ್ರವಲ್ಲದೇ ತಾನೇ ನಾಯಕನಾಗಿ ಅಭಿನಯಿಸಿದ್ದಾರೆ. 5 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಲವ್ ಟುಡೇ ಚಿತ್ರ 14 ದಿನಗಳಲ್ಲಿ 40 ಕೋಟಿ ಗಳಿಸಿ ಬಾಕ್ಸ್ ಆಫೀಸ್ ಧೂಳೀಪಟ ಮಾಡಿತ್ತು. ನಾಯಕ ಪ್ರದೀಪ್ ರಂಗನಾಥನ್ ಹಾಗೂ ನಾಯಕಿ ಇವಾನಾ ನಡುವಿನ ಹಾವು ಮುಂಗುಸಿಯಾಟಕ್ಕೆ ತಮಿಳು ಸಿನಿ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದರು.

  ಹೀಗೆ ತಮಿಳಿನಲ್ಲಿ ಅಬ್ಬರಿಸಿದ್ದ ಈ ಚಿತ್ರವನ್ನು ಲವ್ ಟುಡೇ ಎಂಬ ಶೀರ್ಷಿಕೆಯಡಿಯಲ್ಲಿಯೇ ತೆಲುಗಿಗೆ ಡಬ್ ಮಾಡಲು ತೀರ್ಮಾನಿಸಿದ ಚಿತ್ರತಂಡ ಈಗಾಗಲೇ ತೆಲುಗು ಡಬಿಂಗ್ ಕೆಲಸವನ್ನು ಮುಗಿಸಿದ್ದು ಇದೇ ತಿಂಗಳ 25ರಂದು ತೆಲುಗು ಡಬ್ ವರ್ಷನ್ ಬಿಡುಗಡೆಯಾಗಲಿದೆ ಎಂದು ಘೋಷಿಸಿತ್ತು. ಹೀಗೆ ತಮಿಳಿನಲ್ಲಿ ದೊಡ್ಡ ಸಕ್ಸಸ್ ಕಂಡು ತೆಲುಗಿನಲ್ಲಿ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದ ಲವ್ ಟುಡೇ ಚಿತ್ರತಂಡಕ್ಕೆ ತಮಿಳ್ ಎಂವಿ ವೆಬ್‌ಸೈಟ್ ಶಾಕ್ ನೀಡಿದೆ. ಚಿತ್ರ ಬಿಡುಗಡೆಯಾಗಿ ಸರಿಯಾಗಿ 15 ದಿನಕ್ಕೆ ಅಂದರೆ ನವೆಂಬರ್ 19ರಂದು ಈ ಚಿತ್ರದ ಸಂಪೂರ್ಣ ಹೆಚ್‌ಡಿ ಪ್ರಿಂಟ್ ಅನ್ನು ತಮಿಳ್ ಎಂವಿ ಲೀಕ್ ಮಾಡಿದೆ.

  ಇನ್ನು ಇಂದಿಗೂ ಸಹ ಲವ್ ಟುಡೇ ಅದ್ಭುತ ಪ್ರದರ್ಶನ ಕಾಣುತ್ತಿದ್ದು ಐವತ್ತು ಕೋಟಿ ಕಲೆಕ್ಷನ್ ಸಂಭ್ರಮಾಚರಣೆ ಆರಂಭಗೊಳ್ಳುವ ಮುನ್ನವೇ ಚಿತ್ರತಂಡಕ್ಕೆ ಚಿತ್ರ ಲೀಕ್ ಆದದ್ದು ಹಿನ್ನಡೆ ಉಂಟುಮಾಡಿದೆ. ಅಲ್ಲದೇ ಚಿತ್ರ ಲೀಕ್ ಆಗಿರುವುದರಿಂದ ತಮಿಳುನಾಡಿನಂತೆಯೇ ತೆಲುಗು ರಾಜ್ಯಗಳಲ್ಲಿಯೂ ಚಿತ್ರ ಉತ್ತಮ ಆರಂಭ ಪಡೆದುಕೊಳ್ಳುವುದು ಅನುಮಾನವೇ ಸರಿ.

  English summary
  Tamil's recent blockbuster Love Today HD print leaked on internet
  Saturday, November 19, 2022, 7:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X