ತಮಿಳಿನ ಹಿರಿಯ ನಟ ಚೆಲ್ಲಾದುರೈ ನಿಧನ

ತಮಿಳು ಚಿತ್ರರಂಗಕ್ಕೆ ಮತ್ತೊಂದು ಆಘಾತಕಾರಿ ಸುದ್ದಿ. ಖ್ಯಾತ ನಿರ್ದೇಶಕ ಕೆ.ವಿ ಆನಂದ್ ನಿಧನದ ಬೆನ್ನಲ್ಲೇ ಮತ್ತೊಂದು ಸಾವಿನ ಸುದ್ದಿ ಬರಸಿಡಿಲಿನಂತೆ ಬಡಿದಿದೆ. ತಮಿಳಿನ ಹಿರಿಯ ನಟ ಆರ್ ಎಸ್ ಜಿ ಚೆಲ್ಲಾದುರೈ ಗುರುವಾರ (ಏಪ್ರಿಲ್ 29) ಸಂಜೆ ಚೆನ್ನೈನ ತನ್ನ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

84 ವರ್ಷದ ಚೆಲ್ಲಾದುರೈ ಪೋಷಕ ನಟನಾಗಿ ಖ್ಯಾತಿಗಳಿಸಿದ್ದರು. ತಮಿಳಿನ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಜಯ್ ನಟನೆಯ ತೇರಿ, ಕತ್ತಿ ಮತ್ತು ನಟ ಧನುಷ್ ಅಭಿನಯದ ಮಾರಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಚೆಲ್ಲಾದುರೈ ಇನ್ನು ನೆನಪು ಮಾತ್ರ.

ವಿಜಯ್ ನಾಯಕನಾಗಿ ಕಾಣಿಸಿಕೊಂಡಿದ್ದ ತೇರಿ ಸಿನಿಮಾದಲ್ಲಿ ಕಾಣೆಯಾದ ಮಗನನ್ನು ಹುಡುಕುವ ತಂದೆಯ ಪಾತ್ರದಲ್ಲಿ ಚೆಲ್ಲಾದುರೈ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಚೆಲ್ಲಾದುರೈ ಅಭಿನಯ ಪ್ರೇಕ್ಷಕರ ಮನಮುಟ್ಟುವಂತೆ ಇತ್ತು. ಚೆಲ್ಲಾದುರೈ ನಿಧನಕ್ಕೆ ತಮಿಳು ಸಿನಿಮಾರಂಗದ ಗಣ್ಯರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

Tamil senior Actor Chelladurai passes away due to heart attack

ಕಳೆದ ಕೆಲವು ದಿನಗಳಲ್ಲಿ ಕಾಲಿವುಡ್ ಸಾಕಷ್ಟು ಮಂದಿಯನ್ನು ಕಳೆದುಕೊಂಡಿದೆ. ಇತ್ತೀಚಿಗಷ್ಟೆ ಖ್ಯಾತ ನಟ ವಿವೇಕ್ ಹೃದಯಾಘಾತದಿಂದ ನಿಧನರಾಗಿದ್ದರು. ವಿವೇಕ್ ಹಠಾತ್ ಅಗಲಿಕೆಯ ಶಾಕ್ ನಿಂದ ಹೊರಬರುವ ಮೊದಲೆ ಕಾಲಿವುಡ್ ಮತ್ತಿಬ್ಬರನ್ನು ಕಳೆದುಕೊಂಡಿದೆ.

Recommended Video

ಮುಂಬೈ ಏರ್ ಪೋರ್ಟ್ ನಲ್ಲಿ ಊರ್ವಶಿಯ ಡ್ರೆಸ್ ಗೆ ಗಾಳಿ ಕೊಟ್ಟ ಕಾಟ ಅಷ್ಟಿಷ್ಟಲ್ಲ | Filmibeat Kannada

More from Filmibeat

English summary
Tamil senior Actor Chelladurai passes away due to heart attack.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X