ಹಾಸಿಗೆ ಹಿಡಿದ ಕ್ಯಾಪ್ಟನ್ ವಿಜಯಕಾಂತ್: ತಂದೆಯ ಮಲ-ಮೂತ್ರ ಬಾಚುತ್ತಿರುವ ಪುತ್ರ.. ತಾಯಿ ಭಾವುಕ
ತಮಿಳು ಚಿತ್ರರಂಗಕ್ಕೆ ರಜನಿಕಾಂತ್ ಸೂಪರ್‌ಸ್ಟಾರ್. ತಲೈವಾ ಅಂದರೆ, ಅಭಿಮಾನಿಗಳು ಜೀವವನ್ನೇ ಬೇಕಾದರೂ ಕೊಡುತ್ತಾರೆ. ಕೇವಲ ತಮಿಳುನಾಡಿನಲ್ಲಷ್ಟೇ ಅಲ್ಲ ವಿಶ್ವದ ಮೂಲೆ ಮೂಲೆಯಲ್ಲೂ ಅಭಿಮಾನಿಗಳು ಇದ್ದಾರೆ. ಇಂತಹ ನಟನಿಗೆ ಟಕ್ಕರ್ ಕೊಡುತ್ತಿದ್ದ ಮತ್ತೊಬ್ಬ ನಟ ವಿಜಯಕಾಂತ್.
ತಮಿಳು ಚಿತ್ರರಂಗದ ದಿಗ್ಗಜರ ಸಾಲಿನಲ್ಲಿ ವಿಜಯಕಾಂತ್ ಕೂಡ ಇದ್ದಾರೆ. ಕೇವಲ ನಟನಾಗಿ ಅಷ್ಟೇ ಅಲ್ಲ, ರಾಜಕಾರಣಿಯಾಗಿಯೂ ಯಶಸ್ಸು ಕಂಡಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಗೆದ್ದ ಅಪರೂಪದ ನಟನೀತ. ಸದ್ಯ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಎದ್ದು ಓಡಾಡುವುದಕ್ಕೂ ಕಷ್ಟ ಪಡುವಂತಹ ಸ್ಥಿತಿಯಿದೆ.

ಕ್ಯಾಪ್ಟನ್ ವಿಜಯಕಾಂತ್‌ಗೆ ಇಬ್ಬರು ಗಂಡು ಮಕ್ಕಳು. ಷಣ್ಮುಗ ಪಾಂಡಿಯನ್ ಹಾಗೂ ವಿಜಯ್ ಪ್ರಭಾಕರ್ ಇಬ್ಬರೂ ಸಿನಿಮಾ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ಹುಲಿಯಂತೆ ಮೆರೆದ ವಿಜಯಕಾಂತ್ ಈಗ ಹಾಸಿಗೆ ಹಿಡಿದಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ವಿಜಯಕಾಂತ್ ಪತ್ನಿ ಪ್ರೇಮಲತಾ ಪುತ್ರ ಷಣ್ಮುಗ ಪಾಂಡಿಯನ್ ತಂದೆಗೆ ಮಾಡುತ್ತಿರುವ ಸೇವೆಯ ಬಗ್ಗೆ ರಿವೀಲ್ ಮಾಡಿದ್ದಾರೆ.
ಲೆಜೆಂಡರಿ ನಟ ವಿಜಯಕಾಂತ್‌ಗೆ ಅನಾರೋಗ್ಯ
ತಮಿಳು ಚಿತ್ರರಂಗದ ಲೆಜೆಂಡರಿ ನಟ ವಿಜಯಕಾಂತ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ ವಿಜಯಕಾಂತ್ 71ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆ ವೇಳೆ ನಟ ಎದ್ದು ನಿಲ್ಲುವುದಕ್ಕೂ ಕಷ್ಟ ಪಡುತ್ತಿದ್ದರು. ಇನ್ನೊಬ್ಬರ ಸಹಾಯವಿಲ್ಲದೆ ನಿಲ್ಲುವುದಕ್ಕೂ ಆಗದ ಸ್ಥಿತಿಯಲ್ಲಿ ವಿಜಯಕಾಂತ್ ಇದ್ದಾರೆ. ಇಂತಹ ಸಂದರ್ಭದಲ್ಲಿಯೂ ತನ್ನ ಮಗನ ಸಿನಿಮಾದ ಟೈಟಲ್ ಗ್ಲಿಂಪ್ಸ್ ಅನ್ನು ರಿಲೀಸ್ ಮಾಡಿದ್ದರು. ಈ ವೇಳೆ ಪತ್ನಿ ಪ್ರೇಮಲತಾ ಖಾಸಗಿ ಯೂಟ್ಯೂಬ್ ಚಾನೆಲ್‌ನಲ್ಲಿ ಮಗನ ಬಗ್ಗೆ ಭಾವುಕರಾಗಿ ಮಾತಾಡಿದ್ದರು.

ಅಪ್ಪನ ಮಲ-ಮೂತ್ರ ಬಾಚುವ ಮಗ
ತಮಿಳು ಚಿತ್ರರಂಗದ ದಿಗ್ಗಜ ವಿಜಯಕಾಂತ್‌ರಂತೆ ಪುತ್ರ ಷಣ್ಮುಗ ಪಾಂಡಿಯನ್ ಕೂಡ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಹೊಸ ಸಿನಿಮಾ 'ಪಡೈ ತಲೈವನ್' ಟೈಟಲ್ ಗ್ಲಿಂಪ್ಸ್ ಅನ್ನು ಇತ್ತೀಚೆಗೆ ಸಾಂಕೇತಿಕವಾಗಿ ವಿಜಯಕಾಂತ್ ರಿವೀಲ್ ಮಾಡಿದ್ದರು. ಈ ಸಂದರ್ಭದಲ್ಲಿ ತಾಯಿ ಪ್ರೇಮಲತಾ ಮಗ ಬಗ್ಗೆ ಹೆಮ್ಮೆಯಿಂದ ಮಾತಾಡಿದ್ದಾರೆ. ತಂದೆಯ ಅನಾರೋಗ್ಯದ ಹಿನ್ನೆಲೆ ಮಲ-ಮೂತ್ರ ಬಾಚಲು ನಾಚಿಕೊಳ್ಳುವುದಿಲ್ಲ ಎಂದಿದ್ದಾರೆ.
ಮಗನ ಬಗ್ಗೆ ತಾಯಿ ಹೇಳಿದ ಮಾತೇನು?
"ವಿಜಯಕಾಂತ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. 24 ಗಂಟೆ ಅವರ ಜೊತೆಯಲ್ಲಿಯೇ ಇರುತ್ತಾರೆ. ಷಣ್ಮುಗ ಪಾಂಡಿಯನ್ ಹಾಗೂ ವಿಜಯ್ ಪ್ರಭಾಕರನ್ ಇಬ್ಬರೂ ತಂದೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಷಣ್ಮುಗ ಪಾಂಡಿಯನ್ ನಾಚಿಕೆ ಪಟ್ಟುಕೊಳ್ಳದೆ ತಂದೆಯ ಮಲ ಮೂತ್ರವನ್ನು ಸ್ವಚ್ಚಗೊಳಿಸುತ್ತಾನೆ" ಎಂದು ಭಾವುಕರಾಗಿ ಸಂದರ್ಶನದಲ್ಲಿ ನುಡಿದಿದ್ದಾರೆ.
ರಜನಿಕಾಂತ್‌ಗೆ ಟಕ್ಕರ್ ಕೊಡುತ್ತಿದ್ದ ವಿಜಯಕಾಂತ್
ವಿಜಯಕಾಂತ್ ಹಾಗೂ ರಜನಿಕಾಂತ್ ಇಬ್ಬರೂ ಗೆಳೆಯರೇ ಆಗಿದ್ದರು. 'ಮನಥಿಲ್ ಉರುತಿ ವೆಂಡುಂ' ಅನ್ನೋ ಒಂದೇ ಒಂದು ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಆದರೂ ಸ್ನೇಹ ಉತ್ತಮವಾಗಿಯೇ ಇತ್ತು. ವಿಜಯಕಾಂತ್ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಹಲವು ವರ್ಷಗಳ ಬಳಿಕ ರಜನಿಕಾಂತ್‌ಗೆ ಟಕ್ಕರ್ ಕೊಡಲು ಶುರುವಿಟ್ಟುಕೊಂಡಿದ್ದರು. ಒಮ್ಮೆ ಬಿಜೆಪಿಗೆ ತಿರುಗೇಟು ನೀಡುವಾಗ ರಜನಿ ತರ ನಾನು ಹೆದರುವುದಿಲ್ಲ ಎಂದು ಹೇಳಿದ್ದರು. ಇದು ಸೂಪರ್‌ಸ್ಟಾರ್ ಅಭಿಮಾನಿಗಳ ನಿದ್ದೆಕೆಡಿಸಿತ್ತು.


Click it and Unblock the Notifications











