"ಪಾರ್ಟಿ.. ಟ್ರೂತ್ ಆರ್ ಡೇರ್.. ವಿಜಯ್ ಮನೆ ಮುಂದೆ ತ್ರಿಶಾ ಡ್ಯಾನ್ಸ್ ಮಾಡಿದ್ದು ಅದೇ ಕಾರಣಕ್ಕೆ": ಸುಚಿತ್ರಾ
ತಮಿಳು ಗಾಯಕಿ ಸುಚಿತ್ರಾ ಕಾಲಿವುಡ್‌ನಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದ್ದಾರೆ. ತಮಿಳು ನಟ, ನಟಿಯರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಸುದ್ದಿಯಲ್ಲಿದ್ದಾರೆ. ತಮ್ಮ ಮಾಜಿ ಪತಿ ಕಾರ್ತಿಕ್ ಸಲಿಂಗಕಾಮಿ, ಆತ ಧನುಷ್ ಒಟ್ಟೊಟ್ಟಿಗೆ ಇರುತ್ತಿದ್ದರು. ಅವರ ನಡುವೆ ಏನೇನು ನಡೆಯುತ್ತಿತ್ತೋ ಗೊತ್ತಿಲ್ಲ ಅಂತ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.
ನಟ ಧನುಷ್ ಹಾಗೂ ಐಶ್ವರ್ಯ ರಜನಿಕಾಂತ್ ಡಿವೋರ್ಸ್ ಬಗ್ಗೆ ಕೂಡ ಸುಚಿತ್ರಾ ಮಾತನಾಡಿದ್ದಾರೆ. ಸದ್ಯ ಮತ್ತೊಂದು ಸಂದರ್ಶನದಲ್ಲಿ ಸುಚೀ ಲೀಕ್ಸ್ ಬಗ್ಗೆ ಸುಚಿತ್ರಾ ಮೌನ ಮುರಿದಿದ್ದಾರೆ. ಕೆಲವರು ಆಕೆಯ ಮಾತನ್ನು ನಂಬಲು ಸಿದ್ಧರಿಲ್ಲ. ಆದರೆ ಆಕೆ ಮಾತ್ರ ತಮಿಳು ನಟ, ನಟಿಯರ ಜನ್ಮ ಜಾಲಾಡುವ ಪ್ರಯತ್ನ ಮಾಡಿದ್ದಾರೆ. ಧನುಷ್, ತ್ರಿಶಾ, ವಿಜಯ್ ಹಲವರ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ.

ಕಾಲಿವುಡ್‌ನಲ್ಲಿ ಕೆಲ ನಟ, ನಟಿಯರ ಗ್ರೂಪ್ ಇದೆ. ಈ ಗ್ರೂಪ್‌ನವರು ಆಗಾಗ್ಗೆ ಸೇರಿ ಪಾರ್ಟಿ ಮಾಡುತ್ತಿರುತ್ತಾರೆ. ಸಿನಿಮಾಗಳನ್ನು ನೋಡೋದು ಬಳಿಕ ಆ ಬಗ್ಗೆ ಚರ್ಚಿಸೋದು. ಅಂತಹ ಸಿನಿಮಾ ಮಾಡ್ತೀವಿ ಇಂತಹ ಸಿನಿಮಾ ಮಾಡ್ತೀವಿ ಅಂತೆಲ್ಲಾ ಹೇಳಿಕೊಳ್ಳುತ್ತಾರೆ. ಆ ಗ್ರೂಪ್‌ನಲ್ಲಿ ನನ್ನ ಮಾಜಿ ಪತಿ ಕಾರ್ತಿಕ್, ಧನುಷ್, ತ್ರಿಶಾ ಸೇರಿದಂತೆ ಹಲವು ಇದ್ದಾರೆ ಎಂದು ಸುಚಿತ್ರಾ ವಿವರಿಸಿದ್ದಾರೆ.
ಸುಚೀ ಲೀಕ್ಸ್‌ಗೆ ನನ್ನ ಟ್ವಿಟ್ಟರ್ ಖಾತೆ ಬಳಸಿಕೊಂಡರು. ಆದರೆ ಅದನ್ನೆಲ್ಲಾ ಮಾಡಿದ್ದು ಅದೇ ಗ್ರೂಪ್‌ನವರು. ಫ್ರಾಂಕ್ ಮಾಡಬೇಕು ಎಂದು ಆ ರೀತಿ ತಮ್ಮದೇ ಖಾಸಗಿ ಫೋಟೊ, ವಿಡಿಯೋಗಳನ್ನು ತೇಲಿಬಿಟ್ಟರು. ಆದರೆ ನನ್ನ ಹೆಸರಿಗೆ ಮಸಿ ಬಳಿದರು. ನನ್ನ ಪತಿಯೇ ನನ್ನ ಟ್ವಿಟ್ಟರ್ ಅಕೌಂಟ್ ಪಾಸ್ ವರ್ಡ್ ಪಡೆದು ಹಿಂಗೆಲ್ಲಾ ಮಾಡಿದ ಎಂದಿದ್ದಾರೆ.
ಸುಚೀ ಲೀಕ್ಸ್ ಬಗ್ಗೆ ಮಾತನಾಡುತ್ತಾ ಸಿರಿವಂತರ ಮಕ್ಕಳಲ್ಲಿ ಇರುವ ಫ್ರಾಂಕ್ ಕಲ್ಚರ್ ಬಗ್ಗೆ ಸುಚಿತ್ರಾ ಮಾತನಾಡಿದ್ದಾರೆ. ನಟರಿಗೆ ಒಬ್ಬರನ್ನು ಕಂಡ್ರೆ ಮತ್ತೊಬ್ಬರಿಗೆ ಆಗಲ್ಲ. ಧನುಷ್ ಕಂಡ್ರೆ ಸಿಂಬು ಕಂಡ್ರೆ ಆಗಲ್ಲ, ಸಿಂಬುಗೆ ವಿಶಾಲ್ ಕಂಡ್ರೆ ಇಷ್ಟವಿಲ್ಲ. ಆದರೆ ಒಂದೇ ಮನೆಯಲ್ಲಿ ಸೇರಿ ಪಾರ್ಟಿ ಮಾಡ್ತಾರೆ.

ಏನೋ ಐಡಿಯಾ ಶೇರಿಂಗ್, ಅದು ಇದು ಅಂತ ಏನೇನೊ ಮಾತನಾಡುತ್ತಾರೆ. ನಟ ಸಿಂಬು, ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜಾ, ನಿರ್ದೇಶಕ ವೆಂಕಟ್ ಪ್ರಭು ಇದನ್ನೆಲ್ಲಾ ಆರಂಭಿಸಿದರು. ಆ ಗ್ಯಾಂಗ್ ಈ ಕಲ್ಚರ್ ತಂದಿದ್ದು. ಆದರೆ ನಾನು ಅವರೊಟ್ಟಿಗೆ ಸೇರುತ್ತಿರಲಿಲ್ಲ. ಸುಚೀ ಲೀಕ್ಸ್ ನಡೆದಾಗ ನನಗೆ ಇಂಡಸ್ಟ್ರಿಯಲ್ಲಿ ಹೆಚ್ಚಿಗೆ ಯಾರೊಟ್ಟಿಗೂ ಒಡನಾಟ ಇರಲಿಲ್ಲ. ಇದೆಲ್ಲಾ ನನಗೆ ಹೇಗೆ ಗೊತ್ತು ಅಂದ್ರೆ, ಕಾರ್ತಿಕ್ ಬಂದು ಆಗಾಗ್ಗೆ ಹೇಳ್ತಿದ್ದ. ಇವತ್ತು ಹೀಗೆ ಮಾಡ್ವಿ, ಹಾಗೆ ಮಾಡ್ವಿ ಅಂತ. ಹಾಗಾಗಿ ಗೊತ್ತು.
ಧನುಷ್ ಮೊದಲಿಗೆ ಸರಿಯಾಗಿ ಇದ್ದರು. ಬಳಿಕ ಈ ಗ್ಯಾಂಗ್ ಸೇರಿ ಹಾಳಾದರು. ಅವರು ಮಾಡು ಫ್ರಾಂಕ್‌ಗಳು ಎಲ್ಲೆಲ್ಲೋ ಹೋಗಿ ಏನೇನೋ ಆಗಿದೆ. ಅವ್ರು ಹೇಳ್ತಾರೆ ನಟಿ ತ್ರಿಶಾ, ನಟ ವಿಜಯ್ ಮನೆ ಮುಂದೆ ಹೋಗಿ ಡ್ಯಾನ್ಸ್ ಮಾಡಿದ್ದು, ಹಾಡು ಹಾಡಿದ್ದು ಡೇರ್.( ಟ್ರೂತ್ ಆರ್ ಡೇರ್ ಆಟ) ಹೀಗೆ ಒಂದು ಪಾರ್ಟಿಯಲ್ಲಿ ಆಟ ಹಾಡುವಾಗ ಮಾಡಿದ್ದಂತೆ. ಯಾವುದೇ ಡೇರ್ ಆಗಿದ್ದರೂ ತ್ರಿಶಾ ಮಾಡ್ತಾಳೆ. ಅಂತಹ ಪಾರ್ಟಿಗಳು ಇವು. ಅಷ್ಟು ವರ್ಷಗಳಿಂದ ನಡೆದುಬಂದಿದೆ.
ಗಾಯಕಿ ಸುಚಿತ್ರಾ ಹೇಳಿಕೆಗಳನ್ನು ಕೆಲವರು ಬೆಂಬಲಿಸುತ್ತಿದ್ದಾರೆ. ಚಿತ್ರರಂಗದವರೇ ಹೀಗೆ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಆಕೆ ಮಾನಸಿಕವಾಗಿ ದುರ್ಬಲರಾಗಿ ಏನೇನೋ ಮಾತನಾಡುತ್ತಿದ್ದಾರೆ. ಆಕೆಗೆ ಚಿಕಿತ್ಸೆ ಕೊಡಿಸಬೇಕು. ಪಾರ್ಟಿ ಮಾಡೋದು ಥ್ರುತ್ ಆರ್ ಡೇರ್ ಆಟ ಆಡುವುದರಲ್ಲಿ ತಪ್ಪೇನಿದೆ ಎನ್ನುತ್ತಿದ್ದಾರೆ.


Click it and Unblock the Notifications











