ಕಾರ್ ರೇಸಿಂಗ್ ಟ್ರ್ಯಾಕ್‌ಗೆ ಮರಳಿದ ಸ್ಟಾರ್ ಹೀರೋ ಅಜಿತ್, ಯುರೋಪಿಯನ್ ಚಾಂಪಿಯನ್ ಶಿಪ್‌ಗೆ ಸಿದ್ಧತೆ...!

ಒಬ್ಬ ಸೂಪರ್ ಸ್ಟಾರ್ ಹೀಗೆ ಇರಬೇಕು, ಹೀಗೆ ನಡೆದುಕೊಳ್ಳಬೇಕು, ಅಭಿಮಾನಿಗಳ ಜೊತೆ ಹೀಗೆ ಬೆರೆಯಬೇಕು ಎಂಬ ಅಲಿಖಿತ ನಿಯಮಗಳನ್ನ ಗಾಳಿಗೆ ತೂರಿದವರು ಅಜಿತ್. ಯಾರೊಂದಿಗೂ ಬೆರೆಯದ, ಯಾವ ಅಭಿಮಾನಿ ಸಂಘಗಳೂ ಸೃಷ್ಟಿಯಾಗದಂತೆ ನೋಡಿಕೊಂಡಿರುವ ತಲಾ ಎನ್ನುವ ಬಿರುದಿನಿಂದಲೇ ಫೇಮಸ್ಸಾಗಿರುವ ಅಜಿತ್, ಭಾರತೀಯ ಚಿತ್ರರಂಗದ ಅತ್ಯಂತ ವಿಕ್ಷಿಪ್ತ ಹಾಗೂ ವಿಚಿತ್ರ ನಟ ಅಂದರೆ ಅದು ತಪ್ಪಲ್ಲ.

ತಾನು ಒಪ್ಪಿಕೊಂಡ ಸಿನಿಮಾದ ಕೆಲಸಗಳೆಲ್ಲ ಮುಗಿದ ಮೇಲೆ, ಆ ಕಡೆ ತಿರುಗಿಯೂ ನೋಡದ ಅಜಿತ್ ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಕಾರ್ ರೇಸಿಂಗ್ ನಲ್ಲಿ ಪಾಲ್ಗೊಳ್ಳುವುದು, ಶೂಟಿಂಗ್ ಚಾಂಪಿಯನ್ ಶಿಪ್ಪಿನಲ್ಲಿ ಭಾಗವಹಿಸುವುದು ಹೀಗೆ ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ಬದುಕುವ ಶೈಲಿಯನ್ನ ರೂಡಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ನಟನೆಯ ಜೊತೆ ಬೈಕ್‌ ರೇಸರ್‌ ಕೂಡಾ ಆಗಿರುವ ತಲಾ ಅಜಿತ್ ಅವರಿಗೆ ಮೋಟೋ ರೇಸಿಂಗ್‌ನಲ್ಲಿ ಮೊದಲಿಂದ ಅಪಾರವಾದ ಆಸಕ್ತಿ ಇದೆ. ವಿಶೇಷ ಅಂದರೆ ಈ ಆಸಕ್ತಿ ಕೇವಲ ಒಂದು ಜಾಲಿ ರೈಡಿಗೆ ಮಾತ್ರವೇ ಸೀಮಿತವಾದುದಲ್ಲ. ಬದಲಿಗೆ ಅಜಿತ್ ಅವರಲ್ಲೊಬ್ಬ ಪಳಗಿದ ರೇಸರ್ ಕೂಡ ಇದ್ದಾನೆ. ಇದಕ್ಕೆ ಪುರಾವೆ ಎನ್ನುವಂತೆ ಅಜಿತ್ ಈ ಹಿಂದೆ ಏಷ್ಯನ್ ಫಾರ್ಮುಲಾ BMW ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿದ್ದಾರೆ. ಬ್ರಿಟಿಷ್ ಫಾರ್ಮುಲಾ 3 ಚಾಂಪಿಯನ್ ಶಿಪ್‌ನಲ್ಲಿ ಕೂಡ ಎಲ್ಲರೂ ನಿಬ್ಬೇರಗಾಗುವಂತೆ ಕಾರ್ ಓಡಿಸಿದ್ದಾರೆ. ಎಫ್‌ಐಎ ಫಾರ್ಮುಲಾ 2 ಸೇರಿ
ಇನ್ನೂ ಹಲವು ರೇಸ್‌ಗಳಲ್ಲಿ ಕೂಡ ಅಜಿತ್ ಭಾಗಿಯಾಗಿದ್ದಾರೆ.

Tamil star Ajith Kumar returns to racing set to compete in the European GT4 Championship

ಇಂಥಾ ಅಜಿತ್ ಈಗ ಜಿಟಿ4 ಯುರೋಪಿಯನ್ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಲು ಮುಂದಾಗಿದ್ದಾರೆ. ಇದಕ್ಕೆ ಈಗಾಗಲೇ ಸಿದ್ಧತೆಯನ್ನು ಕೂಡ ಶುರು ಮಾಡಿರುವ ಅಜಿತ್ ದುಬೈನಲ್ಲಿ ತರಬೇತಿಯನ್ನು ಕೂಡ ಪಡೆಯುತ್ತಿದ್ದಾರೆ. ಸುರಕ್ಷತಾ ಕ್ರಮಗಳೊಂದಿಗೆ ರೇಸ್ ಟ್ರ್ಯಾಕ್‌ನಲ್ಲಿ ಬೆವರು ಸುರಿಸುತ್ತಿದ್ದಾರೆ. ಫೆರಾರಿ 488 EVO ಕಾರನ್ನೂ ಓಡಿಸಿದ್ಧಾರೆ.

ಇನ್ನೂ ಈ ಕುರಿತು ಫೆಡರೇಶನ್ ಆಫ್ ಮೋಟಾರ್ ಸ್ಫೋರ್ಟ್ಸ್ ಕ್ಲಬ್ ಆಫ್ ಇಂಡಿಯಾ ಕೂಡ ಅಧಿಕೃತ ಮುದ್ರೆ ಒತ್ತಿದ್ದು ಅಜಿತ್ ಯುರೋಪಿಯನ್ ಜಿಟಿ 4 ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದೆ. ಯುಕೆ, ಯುರೋಪ್ ಸೇರಿ ಕೆಲ ತಂಡಗಳೊಂದಿಗೆ ಅಜಿತ್ ಅವರ ಸ್ಫರ್ಧೆಯ ಕುರಿತು ಚರ್ಚೆ ನಡೆಯುತ್ತಿದೆ ಎಂದು ಕೂಡ ಹೇಳಿದೆ. ಇದರ ನಡುವೆ ಬೆಲ್ಜಿಯಂನ ಜನಪ್ರಿಯ ರೇಸರ್ ಫ್ಯಾಬಿಯನ್ ಡಫಿಯಕ್ಸ್ ತಂಡದ ಜೊತೆ ಅಜಿತ್ ಕೈ ಜೋಡಿಸಿದ್ದಾರೆ ಎಂದು ಅಜಿತ್ ಅವರ ಮ್ಯಾನೇಜರ್ ಸುರೇಶ್ ಚಂದ್ರ ಹೇಳಿದ್ಧಾರೆ. ಈ ತಂಡದ ಮಾಲೀಕತ್ವವನ್ನೂ ವಹಿಸಿಕೊಳ್ಳುವದರ ಜೊತೆ ಈ ತಂಡದ ಅಧಿಕೃತ ಚಾಲಕನಾಗಿ ಅಜಿತ್ ಈ ಬಾರಿಯ ಜಿಟಿ 4 ಯುರೋಪಿಯನ್ ಚಾಂಪಿಯನ್ ಶಿಪ್‌ನಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಿದ್ದಾರೆ. ಭವಿಷ್ಯದಲ್ಲಿ ಇನ್ನೂ ಹಲವಾರು ರೇಸ್ ಗಳಲ್ಲಿ ಈ ತಂಡ ಭಾಗಿಯಾಗಲಿದೆ ಎಂದು ಹೇಳಿದ್ದಾರೆ

ಅಂದ್ಹಾಗೇ ಮೋಟೋ ರೇಸಿಂಗ್ ಜೊತೆ ಬೈಕ್ ರೇಸಿಂಗ್‌ನಲ್ಲಿ ಕೂಡ ವಿಪರೀತ ಆಸಕ್ತಿಯನ್ನೊಂದಿರುವ ಅಜಿತ್ ಚೆನ್ನೈ ಮೂಲದ ಸ್ಟಾರ್ಟ್‌ ಅಪ್ ವೀನಸ್ ಮೋಟಾರ್ ಸೈಕಲ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದಾರೆ. ಮೋಟಾರ್ ಸೈಕಲ್ ಪ್ರವಾಸಕ್ಕೆ ಉತ್ತೇಜನ ನೀಡಲು ಈ ಮೂಲಕ ಸಿದ್ಧವಾಗಿರುವ ಅಜಿತ್ ರೇಸಿಂಗ್‌ನಲ್ಲಿ ಉತ್ಸಾಹವನ್ನು ಹೊಂದಿರುವವರಿಗೆ ತಮ್ಮ ಈ ಕಂಪನಿಯ ಮೂಲಕ ತರಬೇತಿಯನ್ನು ನೀಡಲಿದ್ದಾರೆ. ಮಹಿಳೆಯರಿಗೆ ಈ ತಿಂಗಳಿನಿಂದ ತರಬೇತಿ ಶಿಬಿರ ಆರಂಭವಾಗಲಿದೆ.

ಉಳಿದಂತೆ 2010ರ ನಂತರ ಅಜಿತ್ ಕಾರ್ ರೇಸಿಂಗ್ ಟ್ರ್ಯಾಕ್‌ಗೆ ಮರಳಿದ್ದಾರೆ. ಇನ್ನೂ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುವುದನ್ನು ಬಿಟ್ಟರೆ, ಚಿತ್ರಕ್ಕೆ ಸಂಬಂಧಿಸಿದ ಬೇರೆ ಯಾವುದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳದ ಅಜಿತ್ ಸದ್ಯಕ್ಕೆ ವಿಡಾಮುಯಾರ್ಚಿ ಚಿತ್ರವನ್ನು ಮಾಡುತ್ತಿದ್ದಾರೆ. ಈ ಚಿತ್ರ ಹೊರತು ಪಡಸಿದರೆ ಗುಡ್ ಬ್ಯಾಡ್ ಅಗ್ಲಿ ಚಿತ್ರದಲ್ಲಿ ಕೂಡ ಅಜಿತ್ ಕಾಣಿಸಿಕೊಳ್ಳಲಿದ್ದಾರೆ.

More from Filmibeat

Read more about: ajith kollywood car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X