For Quick Alerts
  ALLOW NOTIFICATIONS  
  For Daily Alerts

  ಸಲ್ಲೂ 'ಟೈಗರ್' ರೀಮೇಕ್; ತಮಿಳು ಸ್ಟಾರ್ ವಿಜಯ್

  |

  ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗೂ ದಕ್ಷಿಣ ಭಾರತದ ಚಿತ್ರರಂಗಕ್ಕೂ ಅಂಟಿದ ನಂಟು ಇನ್ನೂ ಮುಂದುವರಿದಿದೆ. ಇತ್ತೀಚಿಗಷ್ಟೇ ಸಲ್ಲೂ ನಟನೆಯ ಸೂಪರ್ ಹಿಟ್ ಚಿತ್ರವಾದ 'ದಬಾಂಗ್' ತೆಲುಗಿನಲ್ಲಿ 'ಗಬ್ಬರ್ ಸಿಂಗ್' ಹೆಸರಿನಲ್ಲಿ ಬಂದು ಭಾರಿ ಸದ್ದು-ಸುದ್ದಿ ಮಾಡಿದ್ದಷ್ಟೇ ಅಲ್ಲ, ಬಾಕ್ಸ್ ಆಫೀಸಿನಲ್ಲಿಯೂ ಹೊಸ ದಾಖಲೆ ಬರೆದಿದೆ. ಇದೀಗ ಸಲ್ಲೂ ಇನ್ನೊಂದು ಚಿತ್ರ ತಮಿಳಿನಲ್ಲಿ ರೀಮೇಕ್ ಆಗಲಿದೆ.

  ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ, ವಾರವೊಂದರಲ್ಲೇ ಬರೋಬ್ಬರಿ '100' ಕೋಟಿ ರು. ದಾಖಲೆ ಬರೆದಿರುವ ಸಲ್ಲೂ ಚಿತ್ರ 'ಏಕ್ ಥಾ ಟೈಗರ್', ತಮಿಳಿನಲ್ಲಿ ವಿಜಯ್ ನಾಯಕತ್ವದಲ್ಲಿ ರೀಮೇಕ್ ಆಗಿ ಬರಲಿದೆ. ಈ ಚಿತ್ರದ ರೀಮೇಕ್ ಹಕ್ಕನ್ನು ಮೋಹನ್ ಎಂಬವರು ತಮಿಳಿಗೆ ಪಡೆದಿದ್ದು, ಜಯಂ ರಾಜಾ ಇದನ್ನು ನಿರ್ದೇಶಿಸುವ ಸಾಧ್ಯತೆ ದಟ್ಟವಾಗಿದೆ. ಎಲ್ಲವೂ ಇನ್ನೂ ಪಕ್ಕಾ ಆಗಬೇಕಿದೆ. ಆದರೆ ತಮಿಳಿಗೆ ರೀಮೇಕ್ ಆಗುವುದು ಮಾತ್ರ ಗ್ಯಾರಂಟಿ.

  ಈ ಹಿಂದೆ ವಿಜಯ್ ನಾಯಕತ್ವದ 'ವೇಲಾಯುಧಂ' ನಿರ್ದೇಶಿಸಿದ್ದ ಜಯಂ ರಾಜಾ, ಈ ಚಿತ್ರವನ್ನು ಮತ್ತೆ ವಿಜಯ್ ಅವರಿಗೇ ನಿರ್ದೇಶಿಸಲಿರುವುದು ವಿಶೇಷ ಬೆಳವಣಿಗೆ. ಸಲ್ಲೂ ಚಿತ್ರಗಳಿಗೆ ವಿಜಯ್ ಉಳಿದವರಿಗಿಂತ ಹೆಚ್ಚು ಸೂಟ್ ಆಗುವುದೇ ವಿಜಯ್ ನಾಯಕರಾಗಲು ಕಾರಣ, ಮತ್ತೇನಿಲ್ಲ ಎಂದಿದ್ದಾರೆ ನಿರ್ದೇಶಕ ಜಯಂ ರಾಜಾ. ಒಟ್ಟಿನಲ್ಲಿ ಸಲ್ಲೂ ಚಿತ್ರ ಮತ್ತೆ ದಕ್ಷಿಣ ಭಾರತದಲ್ಲಿ ಸದ್ದು ಮಾಡಲಿದೆ.

  ಸಲ್ಲೂ 'ಏಕ್ ಥಾ ಟೈಗರ್' ಚಿತ್ರ ವಿಶ್ವದಾದ್ಯಂತ ಬರೋಬ್ಬರಿ 3300 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇಲ್ಲಿಯವೆರೆಗೆ ಚಿತ್ರ ರು. 165 ಕೋಟಿಗೂ ಮೀರಿ ಹಣ ಗಳಿಸಿದೆ. ಈ ಚಿತ್ರದ ಗಳಿಕೆ ಇಲ್ಲಿಯವರೆಗಿನ ಬಾಲಿವುಡ್ ಗಳಿಕೆಯಲ್ಲಿ ಅತ್ಯಂತ 'ಫಾಸ್ಟ್' ಎನ್ನಲಾಗಿದ್ದು ಇನ್ನೂ ಸಾಕಷ್ಟು ಹಣ ಗಳಿಸಲಿದೆ. ಅಂದಹಾಗೆ, ಈ ಚಿತ್ರದ ಭಾರಿ ಸದ್ದಿನಿಂದ, ಸಲ್ಲೂ ಬಾಲಿವುಡ್ ನಂ 1 ಸ್ಟಾರ್ ನಟ ಎಂಬುದು ಲೇಟೆಸ್ಟ್ ನ್ಯೂಸ್! (ಏಜೆನ್ಸೀಸ್)

  English summary
  Tamil Star Vijay acts in Bollywood Super Star Salman Khan's successfully screening movie 'Ek Tha Tiger' Remake. Before this, Salman Khan's Super Hit movie 'Dabaangg' also made remake in Telugu titled Gabbarsingh. 
 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X