Yogi Babu: ನಟ ಯೋಗಿ ಬಾಬು ಮಗಳ ಮೊದಲ ಹುಟ್ಟುಹಬ್ಬದಲ್ಲಿ ತಮಿಳು ತಾರೆಯರ ದಂಡು!

ತಮಿಳು ಹಾಸ್ಯ ನಟ ಯೋಗಿ ಬಾಬು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಬಿಡುಗಡೆಯಾಗುವ ಎಲ್ಲಾ ತಮಿಳು ಸಿನಿಮಾಗಳಲ್ಲಿ ಈಗ ಅವರು ಇರಲೇಬೇಕು ಎನ್ನುವಂತಿದೆ ಪರಿಸ್ಥಿತಿ. ಅವರನ್ನೇ ಮುಖ್ಯ ಪಾತ್ರವಾಗಿಟ್ಟುಕೊಂಡು ಹಲವು ಸಿನಿಮಾಗಳು ಬಂದಿದ್ದು, ಈಗ ಚಿತ್ರರಂಗದಲ್ಲಿ ಎಲ್ಲರ ಅಚ್ಚುಮೆಚ್ಚಿನ ನಟರಾಗಿದ್ದಾರೆ.

ಯೋಗಿ ಬಾಬು ಮತ್ತು ಅವರ ಪತ್ನಿ ಮಂಜು ಭಾರ್ಗವಿ ಅವರು ತಮ್ಮ ಮಗಳು ಭರಣಿ ಕಾರ್ತಿಕಾ ಅವರ ಮೊದಲ ಹುಟ್ಟುಹಬ್ಬವನ್ನು ಅಕ್ಟೋಬರ್ 23, 2023 ರಂದು ಚೆನ್ನೈನಲ್ಲಿ ಅದ್ಧೂರಿಯಾಗಿ ಆಚರಿಸಿದ್ದಾರೆ. ಈ ಸಂತೋಷದ ಸಂದರ್ಭದಲ್ಲಿ ಯೋಗಿ ಬಾಬು ಅವರ ಕುಟುಂಬ ಸದಸ್ಯರು, ಆಪ್ತ ಸ್ನೇಹಿತರು ಮತ್ತು ತಮಿಳು ಚಿತ್ರರಂಗದ ನಟರು ಮತ್ತು ನಿರ್ದೇಶಕರು ಭಾಗವಹಿಸಿದ್ದರು.

Tamil stars attended Yogi Babu daughters first birthday celebration

ಯೋಗಿ ಬಾಬು ಮಗಳ ಹುಟ್ಟುಹಬ್ಬದಲ್ಲಿ ತಮಿಳು ತಾರೆಯರ ದಂಡು

ಯೋಗಿ ಬಾಬು ಅವರ ಅತಿಥಿಗಳ ಪಟ್ಟಿಯಲ್ಲಿ ನಟರಾದ ವಿಶಾಲ್, ಕಾರ್ತಿ, ಖುಷ್ಬೂ, ವಿಜಯ್ ಸೇತುಪತಿ, ಸೂರ್ಯ, ಕೆಪಿವೈ ಬಾಲಾ, ಐಶ್ವರ್ಯ ರಾಜೇಶ್, ಪಾರ್ಥಿಬನ್, ಜಯಂ ರವಿ, ಮತ್ತು ಅವರ ಪತ್ನಿ ಆರತಿ, ನಿರ್ದೇಶಕರಾದ ವೆಟ್ರಿಮಾರನ್, ಟಿ. ರಾಜೇಂದರ್, ದಿರಾಲ್ ವಿಜಯ್, ಮತ್ತು ಸುಂದರ್ ಸಿ ಸೇರಿದ್ದರು.

ಯೋಗಿ ಬಾಬು ಅವರ ಮಗಳು ಭರಣಿ ಕಾರ್ತಿಕಾ ಅವರ ಹುಟ್ಟುಹಬ್ಬದ ಆಚರಣೆಯ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ನಟ ಯೋಗಿ ಬಾಬು ಕೂಡ ಈ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಪುಟ್ಟ ಕಂದ ಭರಣಿ ಕಾರ್ತಿಕಾ ಅವರಿಗೆ ಇಡೀ ತಮಿಳು ಚಿತ್ರರಂಗದ ಕಲಾವಿದರು ಎಲ್ಲಾ ಕಡೆಗಳಿಂದ ಶುಭಾಶಯಗಳು ಮತ್ತು ಆಶೀರ್ವಾದ ನೀಡಿದ್ದಾರೆ.

ಯೋಗಿ ಬಾಬು ಕುಟುಂಬ

ನಟ ಯೋಗಿ ಬಾಬು ಮತ್ತು ಮಂಜು ಭಾರ್ಗವಿ ಅವರು ಫೆಬ್ರವರಿ 2020 ರಲ್ಲಿ ತಮಿಳುನಾಡಿನ ತಿರುಟ್ಟಣಿಯಲ್ಲಿರುವ ಅವರ ಪೂರ್ವಜರ ಮುರುಗನ್ ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇವರಿಗೂ 2 ವರ್ಷ ವಯಸ್ಸಿನ ಒಬ್ಬ ಮಗನಿದ್ದಾನೆ. ಮಗನಿಗೆ ಬಿ.ಎಂ.ವೇಷಗನ್ ಎಂದು ಹೆಸರಿಡಲಾಗಿದೆ. ನಂತರ 2022 ರಲ್ಲಿ ದಂಪತಿಗೆ ಒಬ್ಬ ಮಗಳು ಹುಟ್ಟಿದ್ದು, ಕಂದನಿಗೆ ಭರಣಿ ಕಾರ್ತಿಕಾ ಎಂದು ಹೆಸರಿಟ್ಟಿದ್ದಾರೆ. ಹುಟ್ಟುಹಬ್ಬ ಕಾರ್ಯಕ್ರಮದ ಚಿತ್ರಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ. ನಟರಾದ ಕೆಪಿವೈ ಬಾಲಾ ಮತ್ತು ವೆಟ್ರಿ ಸಂಭ್ರಮಾಚರಣೆಯ ಕೆಲವು ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

Tamil stars attended Yogi Babu daughters first birthday celebration

ಚಿತ್ರರಂಗದಲ್ಲಿ ಯೋಗಿ ಬಾಬು

ನಟ ಯೋಗಿ ಬಾಬು ತಮಿಳು ಚಲನಚಿತ್ರೋದ್ಯಮದಲ್ಲಿ ಹೆಚ್ಚು ಬೇಡಿಕೆಯಿರುವ ಮತ್ತು ಕಾರ್ಯನಿರತ ನಟರಲ್ಲಿ ಒಬ್ಬರಾಗಿ ಮಿಂಚುತ್ತಿದ್ದಾರೆ. ಅವರು ಪ್ರಸ್ತುತ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಶಿವಕಾರ್ತಿಕೇಯನ್ ಅವರ ಜೊತೆಗೆ ಯೋಗಿ ಬಾಬು ನಟಿಸಿರುವ ಅಯಾಲನ್ ಸಿನಿಮಾ ಈ ದೀಪಾವಳಿಯ ನವೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.

ಈ ಸಿನಿಮಾ ನಂತರ, ಅಭಿಮಾನಿಗಳು ಸುಂದರ್ ಸಿ ಅವರ ಅರಣ್ಮನೈ 4 ಸಿನಿಮಾ ಬಿಡುಗಡೆಯಾಗಲಿದೆ. ಇದು 2024 ರ ಸಂಕ್ರಾಂತಿ ವೇಳೆಗೆ ಬಿಡುಗಡೆ ನಿಗದಿಪಡಿಸಲಾಗಿದೆ. ಹೆಚ್ಚುವರಿಯಾಗಿ, ಯೋಗಿ ಬಾಬು ವೆಂಕಟ್ ಪ್ರಭು ಅಭಿನಯದ ಶಾಟ್ ಬೂಟ್ ತ್ರೀನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ಬಿಡುಗಡೆಯಾಗಲಿದೆ. ಯೋಗಿ ಬಾಬು ಅವರು ನಟ ಸೂರ್ಯ ಅವರ ಕಂಗುವ ಮತ್ತು ನಟ ವಿಶಾಲ್ ಅವರ 'ವಿಶಾಲ್ 34' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
Tamil stars attended Yogi Babu daughter birthday celebration
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X